Viral Video: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಲೆ ಸ್ನಾನ ಮಾಡುತ್ತಾರೆ?; ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 40 ಸಾವಿರ ಜನರಿಂದ ವೀಕ್ಷಿಸಲ್ಪಟ್ಟಿದೆ. ನೀರು ಬಳಸದೆ ಮೇಗನ್ ಯಾವ ರೀತಿ ತಲೆ ಕೂದಲನ್ನು ಕ್ಲೀನ್ ಮಾಡಿಕೊಂಡರೆಂಬ ವಿಡಿಯೋ ಇಲ್ಲಿದೆ

Viral Video: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಲೆ ಸ್ನಾನ ಮಾಡುತ್ತಾರೆ?; ವೈರಲ್ ವಿಡಿಯೋ ಇಲ್ಲಿದೆ
ನಾಸಾ ಗಗನಯಾತ್ರಿ ಮೇಗನ್
Edited By:

Updated on: Sep 02, 2021 | 2:51 PM

ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾತ್ರಿಗಳ ಜೀವನ ಹೇಗಿರುತ್ತದೆ? ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಇತ್ತೀಚೆಗಷ್ಟೇ ಗಗನಯಾತ್ರಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಪಿಜ್ಜಾ ತಯಾರಿಸಿ ತಿಂದ ವಿಡಿಯೋ, ಬಾಹ್ಯಾಕಾಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವಿಡಿಯೋಗಳು ಕೂಡ ವೈರಲ್ ಆಗಿತ್ತು. ಬಾಹ್ಯಾಕಾಶ ಕೇಂದ್ರದಲ್ಲಿ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಆಗುವುದರಿಂದ ಅಲ್ಲಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದ ನಾಸಾ ಗಗನಯಾತ್ರಿ ಮೇಗನ್ ಮೆಕ್​ಅರ್ಥರ್ ಇತ್ತೀಚೆಗೆ ಬಹಳ ಕುತೂಹಲಕಾರಿಯಾದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ಅಲ್ಲಿ ಹೇಗೆ ತಮ್ಮ ಕೂದಲನ್ನು ತೊಳೆದುಕೊಳ್ಳುತ್ತಾರೆ ಎಂಬುದನ್ನು ಮೇಗನ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶ ಕೇಂದ್ರದಲ್ಲಿ ಗುರುತ್ವಾಕರ್ಷಣ ಶಕ್ತಿ ಇರದ ಕಾರಣ ಕೂದಲೆಲ್ಲ ಹೇಗೆ ಬೇಕೆಂದರೆ ಹಾಗೆ ಹಾರುತ್ತಿರುತ್ತದೆ. ಅಲ್ಲಿ ಯಾವ ವಸ್ತುವೂ ಇಟ್ಟ ಜಾಗದಲ್ಲಿ ಇರುವುದಿಲ್ಲ. ಹೀಗಿರುವಾಗ ತಲೆ ಸ್ನಾನ ಮಾಡುವುದು ಹೇಗೆ? ಅದಕ್ಕೆ ಈ ವಿಡಿಯೋ ಉತ್ತರ ನೀಡುತ್ತದೆ.

ಶವರ್ ಸಮಯ ಎಂದು ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಮೇಗನ್, ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಸ್ನಾನ ಮಾಡಲು ಸಾಧ್ಯವಿಲ್ಲ. ಸ್ನಾನ ಮಾಡಿದರೆ ಎಲ್ಲ ಕಡೆಯೂ ನೀರು ಹರಡುತ್ತದೆ. ಹೀಗಾಗಿ, ಅಲ್ಲಿರುವವರು ಸ್ನಾನಕ್ಕೆ ನೀರನ್ನು ಬಳಸುವುದು ಕಷ್ಟ ಸಾಧ್ಯ. ಭೂಮಿಯಂತೆ ಅಲ್ಲಿ ಗುರುತ್ವಾಕರ್ಷಣ ಶಕ್ತಿ ಇಲ್ಲದ ಕಾರಣ ಇಲ್ಲಿಗಿಂತಲೂ ಅಲ್ಲಿಯ ಜೀವನಶೈಲಿ ವಿಭಿನ್ನವಾಗಿರುತ್ತದೆ ಎಂದು ಮೇಗನ್ ಟ್ವಿಟ್ಟರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದಾಗ ಹೇಗೆ ನೀವು ನಿಮ್ಮ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಿರಿ? ಅಲ್ಲಿಯ ಜೀವನ ಹೇಗಿತ್ತು? ಎಂದು ಹಲವರು ನನ್ನನ್ನು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರವಾಗಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ ಎಂದು ನಾಸಾದ ಗಗನಯಾತ್ರಿ ಮೇಗನ್ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 40 ಸಾವಿರ ಜನರಿಂದ ವೀಕ್ಷಿಸಲ್ಪಟ್ಟಿದೆ. ನೀರು ಬಳಸದೆ ಮೇಗನ್ ಯಾವ ರೀತಿ ತಲೆ ಕೂದಲನ್ನು ಕ್ಲೀನ್ ಮಾಡಿಕೊಂಡರೆಂಬ ವಿಡಿಯೋ ಇಲ್ಲಿದೆ.

ಕೆಲವು ದಿನಗಳ ಹಿಂದೆ, ನಾಸಾ ಗಗನಯಾತ್ರಿ ಮೇಗನ್ ಮೆಕ್‌ಆರ್ಥರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸುವ ವಿಡಿಯೋವೊಂದನ್ನು ಶೇರ್ ಮಾಡಿದ್ದರು.

ಹಾಗೇ, ಫ್ರೆಂಚ್ ಗಗನಯಾತ್ರಿ ಥಾಮಸ್ ಎಂಬುವವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪಿಜ್ಜಾ ತಯಾರಿಸಿ ತಿಂದ ವಿಡಿಯೋ ಕೂಡ ಭಾರೀ ವೈರಲ್ ಆಗಿತ್ತು.

ಇದನ್ನೂ ಓದಿ: Viral Video: ಹಾವೇ ಹೇರ್​ ಬ್ಯಾಂಡ್ ಆಯ್ತು!; ಶಾಪಿಂಗ್​ ಮಾಲ್​ನಲ್ಲಿ ಯುವತಿಯ ತಲೆ ನೋಡಿ ಓಡಿದ ಜನ

Viral Video: ಮೊಬೈಲ್ ಕಿತ್ತುಕೊಂಡು ಹಾರಿಹೋಯ್ತು ಗಿಳಿ; ಆಮೇಲಾಗಿದ್ದು ಊಹೆಗೂ ನಿಲುಕದ್ದು!

(Viral Video: How to Keep your Hair Clean in Space ISS NASA astronauts Megan McArthur Shared Video on Twitter)