ಇದು ಜಗತ್ತಿನ ಅತೀ ಉದ್ದನೆಯ ಹೆಬ್ಬಾವು, ಮರವೇರುವ ಇದರ ತಂತ್ರ ನೋಡಿ

Python : ಎಲ್ಲಾದರೂ ಕಂಡೀರಾ ಹೀಗೆ ಚಕ್ಕುಲಿಯಂತೆ ತನ್ನ ದೇಹವನ್ನು ಸುರುಳಿ ಸುತ್ತಿಕೊಂಡು ಲಯಬದ್ಧವಾಗಿ ಸರಸರನೆ ಮರ ಏರುವ ಹೆಬ್ಬಾವನ್ನು!? ನೋಡಿ ಇಲ್ಲಿದೆ ವಿಡಿಯೋ.

ಇದು ಜಗತ್ತಿನ ಅತೀ ಉದ್ದನೆಯ ಹೆಬ್ಬಾವು, ಮರವೇರುವ ಇದರ ತಂತ್ರ ನೋಡಿ
Huge python wraps round tree to climb
Updated By: ಶ್ರೀದೇವಿ ಕಳಸದ

Updated on: Oct 07, 2022 | 6:00 PM

Viral Video : ನೆಲದ ಮೇಲೆ ಸರಸರನೆ ಚಲಿಸುವ ಹಾವುಗಳನ್ನು ನೋಡಿದ್ದೀರಿ. ಗೋಡೆ ಏರುವ ಹಾವುಗಳನ್ನೂ ನೋಡಿದ್ದೀರಿ. ಆದರೆ ಮರ ಏರುವ ಹಾವು ಅದರಲ್ಲೂ ಬೃಹತ್ ಗಾತ್ರದ ಹೆಬ್ಬಾವು? ಮರದ ಕಾಂಡಕ್ಕೆ ವೃತ್ತಾಕಾರದಲ್ಲಿ ತನ್ನನ್ನು ತಾ ಸುತ್ತಿಕೊಂಡು ಸರಸರನೆ ಮರ ಏರುತ್ತಿರುವ ಈ ಹೆಬ್ಬಾವಿನ ವಿಡಿಯೋ ಮಾತ್ರ ಅದ್ಭುತ. ನೆಟ್ಟಿಗರಂತೂ ಹೌಹಾರಿಬಿಟ್ಟಿದ್ದಾರೆ ಇದು ಮರ ಏರುವ ಪರಿಗೆ. ಇದು ಹಳೆಯ ವಿಡಿಯೋ ಆದರೂ ಮತ್ತೆ ವೈರಲ್ ಆಗಿದೆ ಎಂದರೆ, ಇದು ತೀರಾ ಅಪರೂಪದ್ದಾಗಿರುವುದರಿಂದಲೇ ಅಲ್ಲವೆ?

ಎಷ್ಟು ಉದ್ದ, ದಪ್ಪ ಮತ್ತು ಭಾರೀ ತೂಕದ ಹೆಬ್ಬಾವಿದು! ಮರ ಏರುವ ಇದರ ತಂತ್ರವನ್ನು ಊಹಿಸಲೂ ಅಸಾಧ್ಯವೆನ್ನಿಸುವಂತಿದೆ. ಅಷ್ಟೊಂದು ಲಯಬದ್ಧವಾಗಿ ಸುರುಳಿಸುತ್ತಿಕೊಂಡು ಆಕರ್ಷಕವಾಗಿ ಮರ ಏರುವ ರೀತಿ ಮಾತ್ರ ಬಹಳ ಸುಂದರ. ಇದು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. 1.5 ರಿಂದ 6.5 ಮೀ ಉದ್ದ ಮತ್ತು 75 ಕೇಜಿ ತೂಕ ಇದರದು. ಜಗತ್ತಿನ ಅತೀ ಉದ್ದದ ಸರೀಸೃಪವೂ ಇದಾಗಿದೆ. ಇಷ್ಟು ತೂಕ ಇರುವ ಹೆಬ್ಬಾವುಗಳಿಗೆ ಮೇಲೆ ಏರುವುದು ಕಷ್ಟವಾಗುತ್ತದೆ. ಆದರೆ ಈ ಹಾವುಗಳು ಹೀಗೆ ತಂತ್ರವನ್ನು ಕಂಡುಕೊಂಡು ಸರಸರನೆ ಏರಿಬಿಡುತ್ತವೆ. ಏರುತ್ತ ಏರುತ್ತ ತನ್ನ ತಲೆಯನ್ನು ಮೇಲೆತ್ತಿ ತಲುಪುವ ಜಾಗವನ್ನು ಅಂದಾಜಿಸುವುದು ಬೇರೆ.

ರಿಯಲ್​ ಟೈಮ್​ ವಿಡಿಯೋದ ವೇಗವನ್ನು ಹೆಚ್ಚು ಮಾಡಲಾಗಿದೆಯಾ ಎಂದು ವಿಡಿಯೋ ರೀಟ್ವೀಟ್ ಮಾಡಿದ ಒಬ್ಬರು ತಮಾಷೆ ಮಾಡಿದ್ದಾರೆ. ಮತ್ತೆ ಮತ್ತೆ ನೋಡಿದರೆ ಸರಸರನೆ ಚಕ್ಕುಲಿ ಇಳಿಬಿಟ್ಟಂತೆ ಕಾಣುವುದಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:35 pm, Fri, 7 October 22