‘ಗುಡ್​ನೈಟ್​’ ನಾಳೆತನಕ ನೀನು ಫ್ರಿಡ್ಜಿನಲ್ಲಿ ಮಲಗಿರು ಎಂದು ಹಿಟ್ಟಿಗೆ ಮುತ್ತಿಟ್ಟ ಈ ಪುಟ್ಟಣ್ಣ

Cookies : ನಿಮ್ಮನೆಗೊಂದು ಕೂಸು ಬಂದಾಗ ಏನು ಮಾಡುತ್ತೀರಿ, ಅಂಗಡಿಯಿಂದ ಸಿಹಿ ತಂದು ಹಂಚುತ್ತೀರಲ್ಲವೆ? ಆದರೆ ಈ ಪುಟ್ಟಣ್ಣ ತನ್ನ ತಂಗಿಕೂಸು ಮನೆಗೆ ಬಂದಿದ್ದಕ್ಕೆ ತಾನೇ ಕುಕೀಸ್ ಮಾಡಿದ್ದಾನೆ. ಈತ ನಿರೂಪಿಸುವ ರೀತಿಗೆ ನೀವು ಫಿದಾ!

‘ಗುಡ್​ನೈಟ್​’ ನಾಳೆತನಕ ನೀನು ಫ್ರಿಡ್ಜಿನಲ್ಲಿ ಮಲಗಿರು ಎಂದು ಹಿಟ್ಟಿಗೆ ಮುತ್ತಿಟ್ಟ ಈ ಪುಟ್ಟಣ್ಣ
ಕುಕೀಸ್ ಬೊಂಬಾಟಾಗಿದೆ!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 07, 2022 | 2:14 PM

Viral Video : ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗುತ್ತಿದ್ದಂತೆ ಇಡೀ ಮನೆಯ ವಾತಾವರಣವೇ ಸಂಭ್ರಮದಲ್ಲಿ ಮುಳುಗೇಳಲಾರಂಭಿಸುತ್ತದೆ. ಇಲ್ಲಿ ಈ ಪುಟ್ಟಣ್ಣನಿಗೂ ಹೀಗೇ ಆಗಿದೆ. ತಂಗಿ ಹುಟ್ಟುತ್ತಿದ್ದಂತೆ ಏನು ಮಾಡಲಿ ಏನು ಬಿಡಲಿ ಎಂಬಂತೆ ಓಡಾಡತೊಡಗಿದ್ದಾನೆ. ಕೊನೆಗೆ ಕುಕೀಸ್ ಮಾಡಿದರೆ ಹೇಗೆ ಎನ್ನುವ ಐಡಿಯಾ ಹೊಳೆದಿದೆ. ಪ್ರೊಫೆಷನಲ್ ಶೆಫ್​ನಂತೆ ಕ್ಯಾಮೆರಾ ಎದುರು ನಿಂತು ಕುಕೀಸ್​ ತಯಾರಿಸುವುದೇನು, ಅದನ್ನು ನಿರೂಪಿಸುವ ಗಂಭೀರ ವೈಖರಿಯೇನು ಆಹಾ… ಕೆಲದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಇದೀಗ ವೈರಲ್ ಆಗಿದೆ. 3.3 ಮಿಲಿಯನ್ ವೀಕ್ಷಕರು ಈ ವಿಡಿಯೋ ನೋಡಿದ್ದಾರೆ. ಸಾಕಷ್ಟು ಜನ ಈ ವಿಡಿಯೋ ಹಂಚಿಕೊಂಡು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಲೇ ಇದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Oliver (@chezoliz)

ಕುಕೀಸ್ ತಯಾರಿಸುವಾಗ ಈತ ವಿಧಾನವನ್ನು ನಿಖರತೆಯಿಂದ ನಿರೂಪಿಸುವ ರೀತಿಯು ನೆಟ್ಟಿಗರನ್ನು ಸಿಕ್ಕಾಪಟ್ಟೆ ಅಚ್ಚರಿ ಮತ್ತು ಖುಷಿಗೆ ಕೆಡವಿದೆ. ಕೆಲವರು ತಮಾಷೆಯಾಗಿಯೂ ಪ್ರತಿಕ್ರಿಯಿಸಿದ್ದಾರೆ. ಒಬ್ಬರು ‘ಈ ವಿಡಿಯೋದಿಂದ ನಾನು ಕಲಿತ ಎರಡು ವಿಷಯಗಳೆಂದರೆ, ಯಾವಾಗಲೂ ಬೆಣ್ಣೆಯನ್ನು ಪರೀಕ್ಷಿಸಬೇಕು ಮತ್ತು ಕುಕೀಸ್​ನ ಹಿಟ್ಟಿಗೆ ಗುಡ್ನೈಟ್​ ಹೇಳಿ ಮುತ್ತು ಕೊಡಬೇಕು!’ ಎಂದಿದ್ದಾರೆ.

‘ನಾಳೆ ನಿನ್ನನ್ನು ನೋಡುತ್ತೇನೆ. ಈಗ ಫ್ರಿಡ್ಜಿನಲ್ಲಿ ಇರು ಎಂದು ಕುಕೀಸ್​ನ ಹಿಟ್ಟಿಗೆ ಐಲವ್​ಯೂ ಹೇಳಿದಾಗಲೇ ಗ್ಯಾರಂಟಿ ರುಚಿಯಾದ ಕುಕೀಸ್ ತಯಾರಾಗುತ್ತದೆ ಎಂದು ಊಹಿಸಿದೆ. ಎಂಥ ಮುದ್ದಾದ ಮಗು ಇದು. ನಾನಂತೂ ಕಳೆದುಹೋಗಿದ್ದೇನೆ’ ಎಂದಿದ್ದಾರೆ ಮತ್ತೊಬ್ಬರು.

ನಿಮ್ಮ ಮನೆಗೆ ಹೊಸ ಅತಿಥಿಗಳು ಬಂದಾಗ ನೀವೂ ಈ ಪುಟ್ಟಣ್ಣನ ರೆಸಿಪಿ ನೋಡಿ ಕುಕೀಸ್ ಮಾಡುವಿರೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:12 pm, Fri, 7 October 22

ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ