viral video: ಇದು ಮುಖವಾಡವೋ ಅಥವಾ ಗಡ್ಡವೋ..! ಗೊಂದಕ್ಕೀಡಾದ ಸಭಾಪತಿ ವೆಂಕಯ್ಯ ನಾಯ್ಡು

ಇದು ಮುಖವಾಡವೋ ಅಥವಾ ಬೆಳೆದ ಗಡ್ಡವೋ ಎಂದು ಕೇಳಿದ್ದಾರೆ. ನಂತರ ಇದು ಗಡ್ಡ ಎಂದು ಸುರೇಶ್ ಗೋಪಿ ವಿವರಿಸಿದ್ದು, ಇದು ಅವರ ಮುಂದಿನ ಚಿತ್ರಕ್ಕಾಗಿ ಗಡ್ಡ ಬಿಡಲಾಗಿದೆ ಎಂದು ಹೇಳಿದರು.

viral video: ಇದು ಮುಖವಾಡವೋ ಅಥವಾ ಗಡ್ಡವೋ..! ಗೊಂದಕ್ಕೀಡಾದ ಸಭಾಪತಿ ವೆಂಕಯ್ಯ ನಾಯ್ಡು
ಬಿಜೆಪಿ ಸಂಸದ ಸುರೇಶ್ ಗೋಪಿ, ಅಧ್ಯಕ್ಷ ವೆಂಕಯ್ಯ ನಾಯ್ಡು
Edited By:

Updated on: Mar 31, 2022 | 9:33 AM

ಮಲಯಾಳಂ ನಟ ಮತ್ತು ಕೇರಳದ ಬಿಜೆಪಿ ಸಂಸದ ಸುರೇಶ್ ಗೋಪಿ (Suresh Gopi) ಗುರುವಾರ ರಾಜ್ಯಸಭೆಯಲ್ಲಿ ತಮ್ಮ ಭಾಷಣವನ್ನು ಮಂಡಿಸಲು ಎದ್ದುನಿಂತಾಗ ಹೊಸ ಗಡ್ಡದ ಲುಕ್​ ಪ್ರದರ್ಶಿಸಿದರು. ಅವರ ಹೊಸ ಗಡ್ಡದ ಲುಕ್​ ನೋಡಿದ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಸಂಪೂರ್ಣವಾಗಿ ಗೊಂದಲಕ್ಕೀಡು ಮಾಡಿದೆ. ಅವರು ಮಾತನಾಡಲು ಪ್ರಾರಂಭಿಸಿದ ನಂತರ, ಉಪಾಧ್ಯಕ್ಷರು ಇದು ಮುಖವಾಡವೋ ಅಥವಾ ಬೆಳೆದ ಗಡ್ಡವೋ ಎಂದು ಕೇಳಿದ್ದಾರೆ. ನಂತರ ಇದು ಗಡ್ಡ ಎಂದು ಸುರೇಶ್ ಗೋಪಿ ವಿವರಿಸಿದ್ದು, ಇದು ಅವರ ಮುಂದಿನ ಚಿತ್ರಕ್ಕಾಗಿ ಗಡ್ಡ ಬಿಡಲಾಗಿದೆ ಎಂದು ಹೇಳಿದರು. ಸಭಾಪತಿ ಅವರ ಪ್ರಶ್ನೆಯಿಂದ ಸದನದಲ್ಲಿ ನಗುವಿನ ವಾತಾವರಣ ನಿರ್ಮಾಣವಾಯಿತು.

ಸುರೇಶ್ ಗೋಪಿ ಆದಿವಾಸಿಗಳಿಗಾಗಿ ಭಾಷಣ ಮಾಡುತ್ತಿದ್ದರು. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗದ್ದಲದ ಸದನದಲ್ಲಿ ಹೃದಯ ಸ್ಪರ್ಶಿ ಕ್ಷಣವನ್ನು ನೆಟಿಗರು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ:

ಸ್ತ್ರೀರೋಗ ತಜ್ಞೆ ಆತ್ಮಹತ್ಯೆ ಪ್ರಕರಣ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೆಲಸದಿಂದ ತೆಗೆದು ಹಾಕಲು ಆದೇಶಿಸಿದ ಮುಖ್ಯಮಂತ್ರಿ

ಮಧ್ಯರಾತ್ರಿ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಉದ್ವಿಗ್ನ ವಾತಾವರಣ; ಕರ್ನಾಟಕದ ಹಲವು ಗಾಡಿಗಳು ಜಖಂ