Viral Video: ಹೋಳಿ ಆಚರಣೆಯ ವೇಳೆ ಜಪಾನಿ ಯುವತಿಗೆ ಕಿರುಕುಳ, ವಿಡಿಯೋ ವೈರಲ್​​

ಹೋಳಿ ಆಚರಣೆಯ ವೇಳೆ ಯುವಕರ ಗುಂಪೊಂದು ಯುವತಿಯ ಮೇಲೆ ಸಾಮೂಹಿಕವಾಗಿ ಕಿರುಕುಳ ನೀಡಿ ದೌರ್ಜನ್ಯ ಎಸಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Viral Video: ಹೋಳಿ ಆಚರಣೆಯ ವೇಳೆ ಜಪಾನಿ ಯುವತಿಗೆ ಕಿರುಕುಳ, ವಿಡಿಯೋ ವೈರಲ್​​
ಹೋಳಿ ಆಚರಣೆಯ ವೇಳೆ ಜಪಾನಿ ಯುವತಿಗೆ ಕಿರುಕುಳ
Image Credit source: Twitter

Updated on: Mar 11, 2023 | 12:36 PM

ಭಾರತದಲ್ಲಿ ಹೋಳಿ ಹಬ್ಬಕ್ಕೆ ಹಿಂದಿನಿಂದಲೂ ವಿಶೇಷವಾದ ಗೌರವವನ್ನು ನೀಡಲಾಗುತ್ತದೆ. ಪರಸ್ಪರ ಬಣ್ಣ ಹಚ್ಚುವುದರ ಮೂಲಕ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಆದರೆ ಇತ್ತೀಚೆಗೆ ಹೋಳಿ ಆಚರಣೆಯ ವೇಳೆ ಹುಡುಗರ ಗುಂಪೊಂದು ಯುವತಿಯ ಮೇಲೆ ಸಾಮೂಹಿಕವಾಗಿ ಕಿರುಕುಳ ನೀಡಿ ದೌರ್ಜನ್ಯ ಎಸಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗಾ ಈ ಕಿರುಕುಳ ಮತ್ತು ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ವಿಡಿಯೋದಲ್ಲಿ ನಾಲ್ಕೈದು ಹುಡುಗರು ಆಕೆಯನ್ನು ಎಳೆದು ಮೈ ಮೇಲೆ ಬಣ್ಣ ಹಚ್ಚುವುದನ್ನು ಕಾಣಬಹುದು. ಮತ್ತೊಬ್ಬ ಆಕೆಯ ತಲೆಯ ಮೇಲೆ ಮೊಟ್ಟೆ ಒಡೆಯುವುದನ್ನು ಕಾಣಬಹುದು. ಜೊತೆಗೆ ಒಬ್ಬನಿಗೆ ಆಕೆ ಕಪಾಳಮೋಕ್ಷವನ್ನು ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಯುವತಿಯಿಂದ ಯಾವುದೇ ದೂರು ದಾಖಲಾಗದೇ ಇರುವುದರಿಂದ ಯುವಕರನ್ನು ಇಷ್ಟು ದಿನಗಳ ವರೆಗೆ ಬಂಧಿಸಿರಲ್ಲಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಬಂದ ಕಾರಣ ಯುವ ಪ್ರವಾಸಿ ಕೇಂದ್ರ ದೆಹಲಿಯ ಪಹರ್‌ಗಂಜ್‌ನಲ್ಲಿ ತಂಗಿದ್ದ ಮೂವರು ಯುವಕರನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮದುವೆಗೂ ಮುನ್ನ ಇಬ್ಬರ ಜತೆ ಪ್ರೀತಿ, ಎರಡೆರಡು ಮಗು ಕರುಣಿಸಿ ಕೊನೆಗೂ ಒಂದೇ ಮಂಟಪದಲ್ಲಿ ಇಬ್ಬರನ್ನೂ ವರಿಸಿದ

ನಿನ್ನೆ (ಮಾರ್ಚ್​ 10) ರಂದು ಬಾಂಗ್ಲಾದೇಶಕ್ಕೆ ತೆರಳಿರುವ ಈ ಜಪಾನಿ ಯುವತಿ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರುವುದಾಗಿ ಟ್ವೀಟ್ ಮಾಡಿದ್ದಾಳೆ ಎಂದು ಪೊಲೀಸರು ಹೇಳಿಕೆಯಿಂದ ತಿಳಿದುಬಂದಿದೆ. ಸ್ಥಳೀಯ ಗುಪ್ತಚರ ಮೂಲಕ ಆರೋಪಿಗಳನ್ನು ಗುರುತಿಸಿ, ಇದೀಗಾ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:24 pm, Sat, 11 March 23

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us