Viral Video : ಅಪ್ಪ ಅಮ್ಮನೊಂದಿಗೆ ಈ ಇಬ್ಬರೂ ಮರಿಮುಳ್ಳುಹಂದಿಗಳು ರಸ್ತೆ ದಾಟುತ್ತಿದ್ದರು. ಎಷ್ಟೊತ್ತಿನಿಂದ ಹಸಿದುಕೊಂಡು ಬೇಟೆಗಾಗಿ ಹೊಂಚು ಹಾಕುತ್ತಿತ್ತೋ ಈ ಚಿರತೆ ಮರಿಗಳ ಮೇಲೆ ಕಣ್ಣು ನೆಟ್ಟೇಬಿಟ್ಟಿತು. ಮರಿಗಳು ಕಂಗಾಲಾಗಿ ಕೂಗಾಡಲಾರಂಭಿಸಿದವು. ಅವುಗಳ ಅಪ್ಪ ಅಮ್ಮ ತನ್ನ ಚೂಪಾದ ಮುಳ್ಳುಗಳನ್ನು ಮತ್ತಷ್ಟು ನಿಗುರಿಸಿಕೊಂಡು ಚಿರತೆಯೊಂದಿಗೆ ಕಾದಾಡಲು ಶುರು ಮಾಡಿದವು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ಈ ಮುಳ್ಳುಹಂದಿಗಳನ್ನು ನೆಟ್ಟಿಗರು ಭಲೇ ಎನ್ನುತ್ತಿದ್ಧಾರೆ.
— Supriya Sahu IAS (@supriyasahuias) January 20, 2023
ಇದನ್ನೂ ಓದಿ
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ವನ್ಯಜೀವಿಗಳಿಗೆ ಸಂಬಂಧಿಸಿದ ಇಂಥ ಆಸಕ್ತಿಕರ ವಿಡಿಯೋ ಅನ್ನು ಆಗಾಗ ಟ್ವೀಟ್ ಮಾಡುತ್ತಿರುತ್ತಾರೆ. ಇದೀಗ ಅವರು ಟ್ವೀಟ್ ಮಾಡಿರುವ ಈ ವಿಡಿಯೋ, ಮಕ್ಕಳನ್ನು ಪೋಷಿಸುವುದು ಎಂಥ ಜವಾಬ್ದಾರಿಯುತ ಎನ್ನುವುದನ್ನು ತೋರಿಸುತ್ತದೆ. ಈ ವಿಡಿಯೋ ಅನ್ನು ಈತನಕ 2.80 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ಧಾರೆ. 5,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 900 ಜನರು ರೀಟ್ವೀಟ್ ಮಾಡಿದ್ಧಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ.
ಇದನ್ನೂ ಓದಿ : ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ ಕಟ್ಟಿಗೆ ಆಯಲು ಬಂದ ಪುಟ್ಟಿಯ ವಿಡಿಯೋ ವೈರಲ್
ಪ್ರಾಣಿಗಳಲ್ಲಿಯೂ ಪೋಷಕತ್ವ ಎಷ್ಟೊಂದು ತೀವ್ರತರವಾಗಿ ಜಾಗೃತವಾಗಿರುತ್ತದೆಯಲ್ಲ! ಸಲಾಂ ಎಂದಿದ್ದಾರೆ ಒಬ್ಬರು. ವಾಹ್ ಝೆಡ್ ಪ್ಲಸ್ ಸೆಕ್ಯೂರಿಟಿ ಎಂದಿದ್ದಾರೆ ಅನೇಕರು. ಕೊನೆಯಲ್ಲಿ ಏನಾಯಿತು, ಮರಿಗಳು ಸುರಕ್ಷಿತವಾಗಿವೆ ತಾನೆ? ಎಂದು ಅನೇಕರು ಕೇಳಿದ್ದಾರೆ. ಸದ್ಯ ಎಲ್ಲರೂ ಸುರಕ್ಷಿತವಾಗಿದ್ದರೆ ಸಾಕು ಎಂದಿದ್ದಾರೆ ಹಲವರು.
ಇದನ್ನೂ ಓದಿ : ಹೆಂಡತಿ ತವರಿಗೆ; ಕೋಪದಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಬಿಹಾರದ ವ್ಯಕ್ತಿ
ಪೋಷಕರು ಎಂದರೆ ಯಾವಾಗಲೂ ಹೀಗೇ ಇರುತ್ತಾರೆ ಎಂದಿದ್ಧಾರೆ ಮತ್ತೊಬ್ಬರು. ತಾಯಿ ಇಲ್ಲಿ ಬಹಳ ಧೈರ್ಯದಿಂದ ಮಕ್ಕಳನ್ನು ರಕ್ಷಿಸಿದ್ದಾರೆ ಮಗದೊಬ್ಬರು. ಪ್ರಕೃತಿಯ ಕಲೆ ಇದು, ಅತ್ಯದ್ಭುತ ಎಂದಿದ್ದಾರೆ ಇನ್ನೂ ಒಬ್ಬರು. ಈ ವಿಡಿಯೋ ನೋಡಿದ ನಿಮ್ಮಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:01 pm, Sat, 21 January 23