Mumbai : ಅಬ್ಬಾ! ಕೋರ್ಸ್ ಮುಗಿಯಿತು ಎಂಬ ಖುಷಿಯಲ್ಲಿ ಮುಂಬೈನ ವಿದ್ಯಾರ್ಥಿಯೊಬ್ಬ ಪದವಿ ಪ್ರದಾನ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತ ಸಾಗಿದ್ದಾನೆ. ಪ್ರಾಧ್ಯಾಪಕರುಗಳು ಆತನನ್ನು ತಡೆದು ಬೆದರಿಸಿದ್ದಾರೆ. ಡ್ಯಾನ್ಸ್ ಮಾಡಿದರೆ ಪ್ರಮಾಣಪತ್ರವನ್ನೇ ಕೊಡುವುದಿಲ್ಲ ಎಂದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನರ್ಸೀ ಮೊಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (Narsee Monjee Institute of Management)ನ ವಿದ್ಯಾರ್ಥಿ ಆರ್ಯಾ ಕೊಠಾರಿ ಪದವಿ ಪ್ರದಾನ ಸಮಾರಂಭದಲ್ಲಿ ‘ತೇನು ಲೇಕೇ’ ಹಾಡಿಗೆ ನೃತ್ಯ ಮಾಡುತ್ತಾ ವೇದಿಕೆಯ ಮೇಲಿನ ಅತಿಥಿ, ಪ್ರಾಧ್ಯಾಪಕರನ್ನು ಸಮೀಪಿಸಿದಾಗ ಈ ಘಟನೆ ನಡೆದಿದೆ.
ಇದನ್ನು ಕಂಡ ಪ್ರೇಕ್ಷಕವರ್ಷ ಆರ್ಯಾನನ್ನು ಪ್ರೋತ್ಸಾಹಿಸಿದೆ. ಆದರೆ ಪ್ರಾಧ್ಯಾಪಕರು ಇದು ಫಾರ್ಮಲ್ ಫಂಕ್ಷನ್, ಇಂಥದ್ದಕ್ಕೆಲ್ಲ ಇಲ್ಲಿ ಅನುಮತಿ ಇಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಕ್ಷಮೆ ಕೇಳಿದ ನಂತರವೇ ಅವರು ಪ್ರಮಾಣ ಪತ್ರವನ್ನು ಕೊಟ್ಟಿದ್ದಾರೆ ಮತ್ತು ಇನ್ನೊಮ್ಮೆ ಹೀಗೆಲ್ಲ ವರ್ತಿಸುವಂತಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ಧಾರೆ.
ಇದನ್ನೂ ಓದಿ : Viral Video: ಮೊದಲು ಎತ್ತಿಕೊಂಡವರಿಗೇ ಈ ನೋಟುಗಳು; ಮನಸೋತ ನೆಟ್ಟಿಗರು
ಪ್ರಾಧ್ಯಾಪಕರು ಇಷ್ಟೊಂದೆಲ್ಲ ಅತಿಯಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾದ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ ನೆಟ್ಟಿಗರು. ವಿದ್ಯಾರ್ಥಿಗಳು ತಮ್ಮ ಮಾನಸಿಕ ಆರೋಗ್ಯ, ವೈಯಕ್ತಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆಯ ಮಧ್ಯೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರುತ್ತಾರೆ. ಹೀಗಿದ್ದಾಗ ಎರಡು ಕ್ಷಣಗಳ ಈ ಸಂತೋಷವನ್ನು ಅನುಭವಿಸುವ ಹಕ್ಕು ಅವರಿಗಿದೆ. ಯಾರಾದರೂ ಸಂತೋಷವಾಗಿದ್ದರೆ ಅದನ್ನು ನೋಡಿ ಜನರು ಯಾಕೆ ನಿರಾಶೆಗೊಳ್ಳುತ್ತಾರೆ ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ತಾವು ಏನಾಗಬೇಕೋ ಅದಕ್ಕೆ ಅವರು ಪ್ರಯತ್ನವನ್ನೇ ನಡೆಸಿರುವುದಿಲ್ಲ. ಕ್ಷಮಿಸಿ, ಮುಖವಾಡ ಧರಿಸದೇ ಜೀವನ ನಡೆಸಿರಿ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral: ರೆಸ್ಟ್ ಲೈಕ್ ಬಾರ್ಬಿ; ಇದೀಗ ಶವಪೆಟ್ಟಿಗೆಗಳಿಗೂ ಹರಡಿದ ಗುಲಾಬಿ ಜ್ವರ! ನೋಡಿ ಈ ವಿಡಿಯೋ
ಈಗಿನ ಪೀಳಿಗೆಗೆ ಶಿಸ್ತು ನಿಯಮಗಳ ಅರಿವೂ ಇದೆ. ಅದರೆ ಜೀವನವನ್ನು ಸಂಭ್ರಮಿಸಬೇಕೆನ್ನುವ ಆಸೆಯೂ ಇದೆ. ಆದರೆ ಹಿರಿಯ ಮತ್ತು ಕಿರಿಯ ಪೀಳಿಗೆಯ ಮಧ್ಯೆ ಆಪ್ತವಾದ ಬಂಧ ಏರ್ಪಡದೇ ಇದ್ದಾಗ ಹೀಗೆ ಆಭಾಸಗಳು ಉಂಟಾಗುತ್ತವೆ. ಏನಂತೀರಿ ನೀವು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ