Viral Video : ತಮ್ಮ ಮದುವೆಯ ದಿನವು ಅತ್ಯಂತ ವಿಶೇಷವಾಗಿರಬೇಕೆಂದು ಸಾಕಷ್ಟು ಜನರು ಬಯಸುತ್ತಾರೆ. ಎಲ್ಲರ ನೆನಪಿನಲ್ಲಿ ಉಳಿಯಬೇಕೆನ್ನುವ ನಿಟ್ಟಿನಲ್ಲಿ ವಿಭಿನ್ನವಾಗಿ ಮದುವೆಯನ್ನು ಆಯೋಜಿಸುತ್ತಾರೆ ಕೂಡ. ಈಗಾಗಲೇ ಇಂಥ ಮದುವೆಗಳ ವಿಡಿಯೋ ಅನ್ನು ನೀವು ಇದೇ ತಾಣದಲ್ಲಿ ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ವಧು ತನ್ನ ಮದುವೆಯ ಸಮಯದಲ್ಲಿ ಕೂದಲನ್ನು ಕತ್ತರಿಸಿಕೊಂಡಿದ್ದಾಳೆ. ಯಾಕಿಂಥ ನಿರ್ಧಾರ? ವಿಡಿಯೋ ನೋಡಿ.
ವಿಡಿಯೋ ನೋಡಿದ ತಕ್ಷಣ ಕಾರಣ ಹೊಳೆಯಲಾರದು. ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನು ಈಕೆ ದಾನ ಮಾಡಿದ್ದಾಳೆ. ಈ ಸಂದರ್ಭವೇ ಬೇಕಿತ್ತೇ? ಎನ್ನಿಸಬಹುದು. ಆದರೆ ಈಕೆ ಕ್ಯಾನ್ಸರ್ನಿಂದ ತನ್ನ ತಾಯಿಯನ್ನು ಕಳೆದುಕೊಂಡಿದ್ದಾಳೆ. ಆ ನೆನಪಿಗಾಗಿ ಹೀಗೆ ಈ ನಿರ್ಧಾರ ಕೈಗೊಂಡಿದ್ದಾಳೆ. ಹೆಣ್ಣುಮಕ್ಕಳು ಕ್ಯಾನ್ಸರ್ಗೆ ಒಳಗಾದಾಗ ಎದುರಿಸುವ ದೊಡ್ಡ ಸವಾಲೆಂದರೆ ಕೂದಲಿನದು. ಆ ನೋವು ನನಗೆ ಗೊತ್ತು ಹಾಗಾಗಿ ನಾನು ಈ ನಿರ್ಧಾರ ಕೈಗೊಂಡೆ ಎಂದಿದ್ದಾಳೆ ವಧು. ಈ ಸಂದರ್ಭಕ್ಕೆ ಸಾಕ್ಷಿಯಾದ ಕುಟುಂಬ ಸದಸ್ಯರು ಹನಿಗಣ್ಣಾಗುತ್ತಾರೆ. ವರ ಕೂಡ ವಧುವಿನ ನಿರ್ಧಾರವನ್ನು ಗೌರವಿಸಿದ್ದಾನೆ.
ಇದನ್ನೂ ಓದಿ : ಮದುವೆಯಲ್ಲಿ ವರ, ವಧುವಿನ ಲೈವ್ ಪೋರ್ಟ್ರೇಟ್ ಮಾಡಿದ ವಿಡಿಯೋ ವೈರಲ್; ಎಂಥಾ ಅದೃಷ್ಟ ಎಂದ ನೆಟ್ಟಿಗರು
ಈಗಾಗಲೇ ಈ ವಿಡಿಯೋ ಅನ್ನು ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 1,64,000 ಜನರು ಮೆಚ್ಚಿದ್ದಾರೆ. ಇದು ಅದ್ಭುತ ನಿರ್ಧಾರ ಎಂದಿದ್ಧಾರೆ ಕೆಲವರು. ನಾನು ಕ್ಯಾನ್ಸರ್ಗೆ ಈಡಾಗಿ ಈಗ ಬದುಕುಳಿದಿದ್ದೇನೆ. ಕ್ಯಾನ್ಸರ್ಗೆ ಒಳಗಾಗುವ ಮೊದಲು ನಾನು ಹೀಗೆ ಅನೇಕ ಬಾರಿ ಕೂದಲನ್ನು ದಾನ ಮಾಡಿದ್ದೇನೆ. ಈಗ ಕೂದಲಿನ ಮಹತ್ವ ನನಗೆ ಹೆಚ್ಚು ಅರ್ಥವಾಗುತ್ತಿದೆ. ಮತ್ತು ನೀವು ಬಾಹ್ಯದಲ್ಲಿಯೂ ಆಂತರ್ಯದಲ್ಲಿಯೂ ಸುಂದರವಾಗಿದ್ದೀರಿ ನಿಮಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:27 pm, Thu, 5 January 23