Viral Video : ಚಹಾಪ್ರಿಯರು ಬಗೆಬಗೆಯ ಚಹಾಗಳನ್ನು ಹುಡುಕುತ್ತಲೇ ಇರುತ್ತಾರೆ. ನಿಂಬೆ ಚಹಾ, ಪುಂಡಿಹೂವಿನ ಚಹಾ, ದಾಸವಾಳದ ಚಹಾ, ನಿಂಬೆಹುಲ್ಲಿನ ಚಹಾ ಹೀಗೆ ನೂರಾರು ಬಗೆಯ ಪರಿಗಳಲ್ಲಿ ಚಹಾ ಮಾಡಬಹುದಾಗಿದೆ. ಒಂದೊಂದು ಚಹಾ ತಯಾರಿಕೆಗೂ ಅದರದೇ ಆದ ವೈಶಿಷ್ಟ್ಯವಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ತೆಂಗಿನ ಚಿಪ್ಪಿನಲ್ಲಿ ಚಹಾ ಮಾಡಲಾಗುತ್ತಿದೆ. ನೆಟ್ಟಿಗರು ಇದನ್ನು ಕುತೂಹಲದಿಂದ ನೋಡುತ್ತಿದ್ದಾರೆ.
‘ತೆಂಗಿನ ಚಿಪ್ಪಿನಲ್ಲಿ ಚಹಾ’ ಎಂದು ಡಿಜಿಟಲ್ ಕ್ರಿಯೇಟರ್ ಕವಿತಾ ರೈ ಅವರು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಒಂದು ಖಾಲೀ ತೆಂಗಿನ ಚಿಪ್ಪನ್ನು ಒಲೆಯ ಮೇಲಿಡುತ್ತಾರೆ. ನಂತರ ನೀರು, ಹಾಲು, ಶುಂಠಿ-ಏಲಕ್ಕಿಪುಡಿ, ಚಹಾಪುಡಿ, ಸಕ್ಕರೆಯನ್ನು ಹಾಕಿ ಸಣ್ಣಗಿನ ಉರಿಯಲ್ಲಿ ಕುದಿಸುತ್ತಾರೆ. ನಂತರ ಚಹಾ ಸವಿಯಲು ಸಿದ್ಧ!
ಇದನ್ನೂ ಓದಿ : ಬಾಲ್ಯದ ಮಧುರ ಸಂಗಾತಿ ‘ಚಿಕ್ಕಿ’ಗೆ ಈ ಗತಿ ಕಾಣಿಸಿದ ವ್ಯಕ್ತಿಗೆ ಗರುಡ ಪುರಾಣದಲ್ಲಿ ಯಾವ ಶಿಕ್ಷೆ ಕಾದಿದೆ?
ಈತನಕ ಈ ವಿಡಿಯೋ ಸುಮಾರು 5 ಮಿಲಿಯನ್ ಜನರನ್ನು ತಲುಪಿದೆ. 8 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಈ ತಯಾರಿಕೆಯ ವಿಧಾನ ನೋಡಿ ಇದು ಅಪಾಯಕಾರಿ ಎಂದೇ ವಾದಿಸಿದ್ಧಾರೆ. ಎಲ್ಲವೂ ಒಮ್ಮೆಲೇ ಹೊತ್ತಿ ಉರಿದರೆ ಏನು ಗತಿ ಎಂದು ಕೇಳಿದ್ದಾರೆ ಕೆಲವರು. ಚಿಪ್ಪು ಉರಿಗೆ ಸಿಡಿದು ಹೋದರೆ ಏನು ಗತಿ ಎಂದು ಇನ್ನೂ ಕೆಲವರು.
ಇದನ್ನೂ ಓದಿ : ಡಿಮೆನ್ಷಿಯಾದಿಂದ ಬಳಲುತ್ತಿರುವ ಮುತ್ತಜ್ಜಿ ಮರಿಮೊಮ್ಮಗನಿಗಾಗಿ ಲಾಲಿ ಹಾಡಿದಾಗ
ಕಾಡಿಗೆ ಹೋದಾಗ ಚಹಾ ಮಾಡಲು ಪಾತ್ರೆ ಸಿಗದಿದ್ದರೆ ಇದು ಒಳ್ಳೆಯ ಕಾನ್ಸೆಪ್ಟ್ ಎಂದಿದ್ದಾರೆ ಇನ್ನೂ ಕೆಲವರು. ಆಹಾ ಚಹಾ ಮಾಡುವ ಈ ವಿಧಾನವನ್ನು ನಾನು ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ನಾನು ಇದನ್ನು ಪ್ರಯತ್ನಿಸುತ್ತೇನೆ ಎಂದಿದ್ದಾರೆ ಮಗದೊಬ್ಬರು. ಇನ್ನು ನಾನು ಪಾತ್ರೆಗಳನ್ನೇ ಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಇನ್ನೂ ಒಬ್ಬರು.
ಇದನ್ನೂ ಓದಿ : ಭೂಲ್ ಭುಲೈಯ್ಯಾದ ಮಂಜುಲಿಕಾ ಮೆಟ್ರೋ ರೈಲಿನಲ್ಲಿ; ಪ್ರಯಾಣಿಕರಿಗೆ ಕಿರಿಕಿರಿ
ನಿಮಗೆ ಪಾತ್ರೆ ಇಲ್ಲವಾದಲ್ಲಿ ನಾನು ಕಳಿಸುತ್ತೇನೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಕಿಚನ್ ಸ್ವಚ್ಛಗೊಳಿಸದೇ ಇದ್ದಲ್ಲಿ ಅಮ್ಮನಿಂದ ಏಟು ತಿನ್ನುವುದು ಗ್ಯಾರಂಟಿ ಎಂದಿದ್ದಾರೆ ಇನ್ನೊಬ್ಬರು. ತೆಂಗಿನ ಹಾಲು ಹಾಕಿದ್ದೀರಾ ಅಥವಾ ಹಸುವಿನ ಹಾಲನ್ನೇ ಹಾಕಿದ್ದೀರಾ ಎಂದು ಮತ್ತೊಬ್ಬರು ಕೇಳಿದ್ದಾರೆ. ರುಚಿಯಲ್ಲೇನಾದರೂ ಬದಲಾವಣೆ ಇದೆಯಾ? ಎಂದು ಕೇಳಿದ್ಧಾರೆ ಅನೇಕರು.
ನೀವೂ ಹೀಗೆ ಚಹಾ ಮಾಡಲು ಪ್ರಯತ್ನಿಸುತ್ತೀರಾ?
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ
Published On - 11:01 am, Tue, 24 January 23