ಈ ವಿಡಿಯೋ ನೋಡಿದ ಬಳಿಕವೂ ನೂಡಲ್ಸ್ ತಿನ್ನುತ್ತೀರಾ? ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
Noodles Making : ನೂಡಲ್ಸ್ ಅಷ್ಟೇ ಯಾಕೆ, ಸಣ್ಣ ಹೋಟೆಲ್ಗಳ ಅಡುಗೆ ಮನೆ ಹೊಕ್ಕು ನೋಡಿ. ಕುಲ್ಚಾ, ಪರೋಟಾ, ಚಪಾತಿ, ಪೂರಿಗಳನ್ನೂ ಹೀಗೇ ತಯಾರಿಸುತ್ತಾರೆ ಎನ್ನುತ್ತಿದ್ಧಾರೆ ನೆಟ್ಟಿಗರು.
Viral Video : ನೂಡಲ್ಸ್ ಯಾರಿಗೆ ಇಷ್ಟವಿಲ್ಲ? ಮುಪ್ಪಾನು ಮುದಕರಿಂದ ಹಿಡಿದು ಎಳೇ ಮಕ್ಕಳವರೆಗೂ ಬಾಯಲ್ಲಿ ನೀರೂರುತ್ತದೆ. ಅದರಲ್ಲಿಯೂ ಹದಿಹರೆಯದವರಿಗೆ, ಯುವಕ ಯುವತಿಯರಿಗೆ ಮತ್ತು ಮಕ್ಕಳಿಗಂತೂ ಎರಡು ಹೊಟ್ಟೆಯಾಗುತ್ತದೆ. ವಿದೇಶದಲ್ಲಿಯಂತೂ ಇದು ಊಟಕ್ಕೂ ತಿಂಡಿಗೂ ಸಾಮಾನ್ಯವಾಗಿರುಂಥ ಖಾದ್ಯ. ಇಟಲಿ, ಚೀನಾದ ಮೂಲದಿಂದ ಬಂದಿರುವ ಈ ನೂಡಲ್ಸ್ ಜಗತ್ತಿನಾದ್ಯಂತ ಜನಪ್ರಿಯ. ಅದರಲ್ಲೂ ರಸ್ತೆಬದಿಯ ನೂಡಲ್ಸ್ನ ರುಚಿ! ಆದರೆ ಈ ವಿಡಿಯೋದಲ್ಲಿ ನೂಡಲ್ಸ್ ಮಾಡುತ್ತಿರುವ ಬಗೆಯನ್ನು ಒಮ್ಮೆ ನೋಡಿ.
When was the last time you had road side chinese hakka noodles with schezwan sauce? pic.twitter.com/wGYFfXO3L7
ಇದನ್ನೂ ಓದಿ— Chirag Barjatya (@chiragbarjatyaa) January 18, 2023
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೂಡಲ್ಸ್ ತಯಾರಿಸುವವರು ಟೀಶರ್ಟ್, ಬನಿಯನ್, ಶಾರ್ಟ್ಸ್ ಮಾತ್ರ ಧರಿಸಿದ್ದಾರೆ. ಕೈಗವಸು, ಕ್ಯಾಪ್, ಮಾಸ್ಕ್ ಏನನ್ನೂ ಧರಿಸಿಲ್ಲ. ಬಳಸುತ್ತಿರುವ ಯಂತ್ರಗಳೂ ಶುಚಿಯಾಗಿಲ್ಲ. ಹಿಟ್ಟನ್ನು ನೆಲದ ಮೇಲೆ ಇಡುತ್ತಿದ್ದಾರೆ. ಮತ್ತದನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ. ನೆಲದ ಮೇಲೆ ನೂಡಲ್ಸ್ ಹರವುತ್ತಿದ್ಧಾರೆ. ನಂತರ ಪ್ಲಾಸ್ಟಿಕ್ ಚೀಲದಲ್ಲಿ ಅವನ್ನು ಪ್ಯಾಕ್ ಮಾಡುತ್ತಿದ್ದಾರೆ.
ಇದನ್ನೂ ಓದಿ : ಟಾಮಿ ವೆಡ್ಸ್ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್
ರಸ್ತೆಬದಿಯಲ್ಲಿ ಸಿಗುವ ಈ ಹಕ್ಕಾ ನೂಡಲ್ಸ್ ಯಾವಾಗ ತಿಂದಿದ್ದೀರೆಂದು ನೆನಪಿಸಿಕೊಳ್ಳುತ್ತಿದ್ದೀರಾ? ಅನೇಕರು ಈ ವಿಡಿಯೋ ನೋಡಿ ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಉತ್ತರ ಭಾರತದ ಖಾದ್ಯಗಳಾದ ಕುಲ್ಚಾ, ರೋಟಿ, ನಾನ್ ತಂದೂರಿ ರೋಟಿಗಳನ್ನು ತಯಾರಿಸುವ ರೀತಿಯನ್ನು ಸಣ್ಣಪುಟ್ಟ ಹೋಟೆಲ್ಗಳನ್ನು ಹೊಕ್ಕು ನೋಡಿ ಅಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದಿದ್ದಾರೆ ಒಬ್ಬರು. ಈ ವಿಡಿಯೋದಲ್ಲಿ ನೂಡಲ್ಸ್ ಮಾಡುವ ರೀತಿ ನೋಡಿಯೇ ನೂಡಲ್ಸ್ ತಿನ್ನುವ ಆಸೆ ಕಡಿಮೆಯಾಗುತ್ತಿದೆ. ಈ ಫ್ಯಾಕ್ಟರಿ ಎಲ್ಲಿದೆ ಎಂದು ಪತ್ತೆ ಹಚ್ಚಿ ಇದನ್ನು ಮುಚ್ಚಲು ಆದೇಶ ನೀಡಬೇಕು ಎಂದಿದ್ಧಾರೆ ಮತ್ತೊಬ್ಬರು.
ಇದನ್ನೂ ಓದಿ : ಡಯೆಟ್ ಅಂತೆ ಡಯೆಟ್! ಪಕೋಡಾ ತಿನ್ನು ವರ್ಕೌಟ್ ಮಾಡು; ರೈಟ್ ರೈಟ್ ಆಂಟೀ ಎಂದ ನೆಟ್ಟಿಗರು
ಜಗತ್ತಿನ ಅತೀ ಶ್ರೇಷ್ಠ ನೂಡಲ್ಸ್ ತಯಾರಿಕೆ. ನೂಡಲ್ಸ್ ರುಚಿಯೊಂದಿಗೆ ಡಯೇರಿಯಾ ಅನ್ನೂ ಉಚಿತವಾಗಿ ನೀಡುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ರಸ್ತೆ ಬದಿ ಮಾತ್ರ ಇಂಥ ನೂಡಲ್ಸ್ ಉಪಯೋಗಿಸುತ್ತಾರೆ ಎಂದು ಹೇಗೆ ಹೇಳುತ್ತೀರಿ? ಫೈವ್ ಸ್ಟಾರ್ ಹೋಟೆಲ್ನಲ್ಲಿಯೂ ಉಪಯೋಗಿಸಬಹುದು ಎಂದಿದ್ದಾರೆ ಮತ್ತೊಬ್ಬರು. ಯಾವಾಗ ನೂಡಲ್ಸ್ ತಿನ್ನುತ್ತೇನೋ ಆಗೆಲ್ಲಾ ಗಂಟಲು ಮತ್ತು ಹೊಟ್ಟೆ ನೋವು ಬರುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು.
ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್
ಬಹಳ ಯೋಚಿಸಬೇಡಿ. ನೂಡಲ್ಸ್ ತಿನ್ನುವಾಗ ಬೇಯಿಸಿ, ಕುದಿಸಿ ತಿನ್ನಲಾಗುತ್ತದೆ. ಏನೂ ಆಗುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ಧಾರೆ. ಯುವಪೀಳಿಗೆ ತಮ್ಮ ಬಜೆಟ್ಗೆ ತಕ್ಕಂತೆ ಇಂಥ ಖಾದ್ಯಗಳನ್ನು ತಿನ್ನುತ್ತಾರೆ. ಏನು ಮಾಡಲಾಗುತ್ತದೆ? ಅರಗಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕಷ್ಟೇ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 9:24 am, Tue, 24 January 23