‘ಎತ್ತರದ ಕಟ್ಟಡದಲ್ಲಿ ವಾಸಿಸುವವರಿಗೆ ಈ ಅಗ್ನಿ ಸುರಕ್ಷಾ ಸಾಧನ ಅವಶ್ಯ’ ಆನಂದ ಮಹೀಂದ್ರಾ ಟ್ವೀಟ್

|

Updated on: Feb 06, 2023 | 9:54 AM

Fire Safety Device : ಇದು ಒಳ್ಳೆಯ ಕಾನ್ಸೆಪ್ಟ್​, ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಬೇಕು. ಏಕೆಂದರೆ ಅಪಾರ್ಟ್​ಮೆಂಟ್​ ನ ಎದುರಿಗಿರುವ ಮರ, ವಿದ್ಯುತ್​​ ತಂತಿಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ನೆಟ್ಟಿಗರು.

‘ಎತ್ತರದ ಕಟ್ಟಡದಲ್ಲಿ ವಾಸಿಸುವವರಿಗೆ ಈ ಅಗ್ನಿ ಸುರಕ್ಷಾ ಸಾಧನ ಅವಶ್ಯ’ ಆನಂದ ಮಹೀಂದ್ರಾ ಟ್ವೀಟ್
ಅಗ್ನಿ ಸುರಕ್ಷತಾ ಸಾಧನ ಬಳಕೆಯ ಪ್ರಾತ್ಯಕ್ಷಿಕೆ
Follow us on

Viral Video : ದೊಡ್ಡದೊಡ್ಡ ಕಟ್ಟಡ, ಅಪಾರ್ಟ್​ಮೆಂಟ್​ಗಳಿಗೆ ಬೆಂಕಿ ಹೊತ್ತಿದ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು ಅನೇಕ ಜನ ಎತ್ತರದಿಂದ ಜಿಗಿಯುತ್ತಾರೆ. ಆದರೆ ಸುರಕ್ಷತಾ ಸಾಧನವಿಲ್ಲದೆ ಜಿಗಿದಾಗ ಎಷ್ಟೋ ಜನರು ಅಪಾಯಕ್ಕೆ ಈಡಾಗುತ್ತಾರೆ. ಹಾಗಾಗಿ ಇಂಥ ಸಂದರ್ಭಗಳಲ್ಲಿ ಅಗ್ನಿ ಸುರಕ್ಷತಾ ಸಾಧನ ಹಾಕಿಕೊಂಡು ಕಟ್ಟಡಗಳಿಂದ ಹಾರಿ ಜೀವ ಉಳಿಸಿಕೊಳ್ಳುವುದು ಬಹಳ ಮುಖ್ಯ. ಇದೀಗ ಉದ್ಯಮಿ ಆನಂದ ಮಹೀಂದ್ರಾ ಹಂಚಿಕೊಂಡ ಈ ಎನಿಮೇಟೆಡ್ ವಿಡಿಯೋ ಗಮನಿಸಿ.

‘ಇದು ಅತ್ಯುತ್ತಮ ಸಾಧನ, ಇಂಥವನ್ನು ಕೆಲ ಕಂಪೆನಿಗಳು ತಯಾರಿಸುತ್ತವೆ ಎಂದುಕೊಂಡಿದ್ದೇನೆ. ನಾನೇನಾದರೂ ಎತ್ತರದ ಕಟ್ಟಡದಲ್ಲಿ ವಾಸ ಮಾಡಿದರೆ ಇದನ್ನು ಖರೀದಿಸುವುದು ನನ್ನ ಮೊದಲ ಆದ್ಯತೆ’ ಎಂದಿದ್ದಾರೆ ಆನಂದ ಮಹೀಂದ್ರಾ.

ಇದನ್ನೂಓದಿ : ಓಹ್​ ಕಾರು! ಎಲ್ಲಿಗೆ ಹೋಗ್ತಿದೀವಿ? ಸ್ಕ್ಯಾನಿಂಗ್​​ಗೆ, ಕಿಮೋಥೆರಪಿಗೆ, ಸರ್ಜರಿಗೆ

40 ಸೆಕೆಂಡುಗಳ ಎನಿಮೇಟೆಡ್ ವಿಡಿಯೋದ ಮೂಲ ಲರ್ನ್​​ ಸಮ್​ಥಿಂಗ್​ ಎಂಬ ಪುಟ. ಈಗಾಗಲೇ 3.9 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 61,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಈ ಹೊಸ ಮಾದರಿಯ ಸಾಧನದ ಬಗ್ಗೆ ನೆಟ್ಟಿಗರು ಕುತೂಹಲಿಗಳಾಗಿದ್ದಾರೆ.

ಇದನ್ನೂ ಓದಿ : ಪೆಟ್ರೋಲ್​ ಸ್ಟೇಷನ್​ನ ಮಹಿಳಾ ಉದ್ಯೋಗಿಯ ಮೇಲೆ ಮರ್ಸಿಡೀಝ್​ನಿಂದ ಹಣ ಎಸೆದ ವ್ಯಕ್ತಿಯ ಬಗ್ಗೆ ನೆಟ್ಟಿಗರ ಆಕ್ರೋಶ

ಇದು ಭಾರತದಲ್ಲಿ ಲಭ್ಯವಿಲ್ಲ ಎನ್ನಿಸುತ್ತದೆ ಎಂದಿದ್ದಾರೆ ಕೆಲವರು. ಖಂಡಿತ ಇದು ಎತ್ತರದ ಕಟ್ಟಡಗಳಲ್ಲಿ ವಾಸಿಸುವ ಪ್ರತಿಯೊಬ್ಬರೂ ಖರೀದಿಸಬೇಕಾದ ಸಾಧನ ಎಂದಿದ್ದಾರೆ ಒಬ್ಬರು. ಇದು ಒಳ್ಳೆಯ ಕಾನ್ಸೆಪ್ಟ್​, ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಬೇಕು. ಏಕೆಂದರೆ ಅಪಾರ್ಟ್​ಮೆಂಟ್​ ನ ಎದುರಿಗಿರುವ ವಿದ್ಯುತ್​​ ತಂತಿಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ಸಂಗೀತ ರಸ್ತೆ; ನಿಗದಿತ ವೇಗದಲ್ಲಿ ಚಲಿಸಿದರೆ ಈ ರಸ್ತೆಗಳು ಹಾಡುತ್ತವೆ, ನೋಡಿ ವಿಡಿಯೋ

ಮರಗಳಲ್ಲಿ ಸಿಕ್ಕಿಕೊಂಡಾಗ ಕೂಡ ಸಮಸ್ಯೆ ಆಗುತ್ತದೆ ಹಾಗಾಗಿ ಇದನ್ನು ತಯಾರಿಸುವ ಪರಿಕರಗಳ ಗುಣಮಟ್ಟ ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ ಮಗದೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:54 am, Mon, 6 February 23