Viral Video: ಅಬ್ಬಬ್ಬಾ.. ದೈತ್ಯ ಹೆಬ್ಬಾವನ್ನೇ ತನ್ನ ಆಟಿಕೆಯನ್ನಾಗಿ ಮಾಡಿಕೊಂಡ ಪುಟ್ಟ ಬಾಲಕ 

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2023 | 12:34 PM

ಸಾಮಾನ್ಯವಾಗಿ ಪುಟ್ಟ ಮಕ್ಕಳು ಬಸ್ಸು, ಜೆಸಿಬಿ, ಸೈಕಲ್, ಚೆಂಡು, ಗೊಂಬೆ ಇತ್ಯಾದಿ ಸಣ್ಣಪುಟ್ಟ ಆಟಿಕೆಗಳ ಜೊತೆ ಆಟವಾಡುತ್ತಿರುತ್ತಾರೆ.  ಆದ್ರೆ ಇಲ್ಲೊಬ್ಬ ಪುಟ್ಟ ಬಾಲಕ ದೈತ್ಯ ಹೆಬ್ಬಾವನ್ನೇ ತನ್ನ ಆಟಿಕೆಯನ್ನಾಗಿ ಮಾಡಿಕೊಂಡಿದ್ದಾನೆ. ಈ ಪುಟ್ಟ ಹುಡುಗ ದೈತ್ಯ ಹೆಬ್ಬಾವಿನೊಂದಿಗೆ ಆಟವಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಹುಡುಗನ  ಧೈರ್ಯವನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.  

Viral Video: ಅಬ್ಬಬ್ಬಾ.. ದೈತ್ಯ ಹೆಬ್ಬಾವನ್ನೇ ತನ್ನ ಆಟಿಕೆಯನ್ನಾಗಿ ಮಾಡಿಕೊಂಡ ಪುಟ್ಟ ಬಾಲಕ 
ವೈರಲ್​ ವಿಡಿಯೋ
Follow us on

ಹೆಬ್ಬಾವುಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳೆಂದು ಪರಿಗಣಿಸಲಾಗಿದೆ. ಅದರಲ್ಲೂ ಬೃಹದಾಕಾರದ ಹೆಬ್ಬಾವುಗಳು ಪ್ರಾಣಿಗಳನ್ನು ಬಿಡಿ, ಮನುಷ್ಯರನ್ನು ಸಹ ಜೀವಂತವಾಗಿ ನುಂಗಿ ಬಿಡುತ್ತವೆ. ಇದೇ ಕಾರಣಕ್ಕೆ ಈ ಹಾವುಗಳ ತಂಟೆಗೆ ಅಷ್ಟಾಗಿ ಯಾರು ಹೋಗುವುದಿಲ್ಲ. ಒಂದು ವೇಳೆ ದೈತ್ಯ ಹೆಬ್ಬಾವು ನಿಮ್ಮ ಕಣ್ಣಿಗೆ ಕಂಡರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ? ಖಂಡಿವಾಗಿಯೂ ಈ ದೈತ್ಯ ಜೀವಿ ನನ್ನನ್ನು ನುಂಗಿ ಬಿಡುತ್ತೆ ಎಂಬ ಭಯದಿಂದ ಓಡಿ ಹೋಗುತ್ತೀರಿ ಅಲ್ವಾ. ಆದ್ರೆ ಇಲ್ಲೊಬ್ಬ ಪುಟ್ಟ ಬಾಲಕ ಅಂತಹ ದೈತ್ಯ ಹೆಬ್ಬಾವನ್ನೇ ತನ್ನ ಆಟಿಕೆಯನ್ನಾಗಿ ಮಾಡಿಕೊಂಡಿದ್ದಾನೆ. ಎಲ್ಲಾ ಮಕ್ಕಳು ಬಸ್ಸು, ಜೆಸಿಬಿ, ಗೊಂಬೆಗಳ ಜೊತೆ ಆಟವಾಡಿದರೆ ಈ ಪುಟ್ಟ ಬಾಲಕ ಮಾತ್ರ ದೈತ್ಯ ಹೆಬ್ಬಾವನ್ನೇ ತನ್ನ ಆಟಿಕೆಯನ್ನಾಗಿ ಮಾಡಿಕೊಂಡಿದ್ದಾನೆ. ಈ ಪುಟ್ಟ ಹುಡುಗ ದೈತ್ಯ ಹೆಬ್ಬಾವಿನೊಂದಿಗೆ ಆಟವಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಹುಡುಗನ ಭಂಡ ದೈರ್ಯವನ್ನು ಕಂಡು ಎಲ್ಲರೂ ಅಚ್ಚರಿಪಟ್ಟಿದ್ದಾರೆ.

@rbempire_tv ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಒಂದುವರೆ ವರ್ಷ ವಯಸ್ಸಿನ ಬಾಲಕನೊಬ್ಬ ಬೃಹದಾಕಾರದ ಹೆಬ್ಬಾವಿನ ಜೊತೆಗೆ ಆಟವಾಡುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ( ಈ ವಿಡಿಯೋ ತುಂಬಾ ಭಯಾನಕವಾಗಿದೆ)

ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ದೈತ್ಯ ಹೆಬ್ಬಾವಿನ ಮೇಲೆ ಕುಳಿತು ತನ್ನ ಪಾಡಿಡೆ ಆಟವಾಡುತ್ತಿರುವುದನ್ನು ಕಾಣಬಹುದು. ಅಷ್ಟೆ ಅಲ್ಲದೇ ಆ ದೈತ್ಯ ಹಾವು ನಿಧಾನಕ್ಕೆ ತೆವಳಿಕೊಂಡು ಅತ್ತಕಡೆ ಹೋಗುತ್ತಿರುವ ವೇಳೆಯಲ್ಲಿ, ಆ ಬಾಲಕ ಹಾವಿನ ಹೆಡೆಯನ್ನು ಹಿಡಿದುಕೊಂಡು, ಹಾವನ್ನು ಇತ್ತಕಡೆ ಎಳೆದುಕೊಂಡು ಬರುವುದನ್ನು ಕಾಣಬಹುದು.  ಆದ್ರೆ ಇಲ್ಲಿ ಅಚ್ಚರಿಯ ವಿಷಯವೇನೆಂದರೆ  ಈ ದೈತ್ಯ ಹೆಬ್ಬಾವು  ಮಗುವಿಗೆ ಯಾವುದೇ ರೀತಿಯಲ್ಲೂ ಹಾನಿಯನ್ನು ಮಾಡಿಲ್ಲ.

ಇದನ್ನೂ ಓದಿ: ಆಯ್ತು ಇದು ಕೊನೆ ತುತ್ತು ಬೇಗ ತಿನ್ನಿ, ಕೋಗಿಲೆ ಮರಿಗಳಿಗೆ ಪ್ರೀತಿಯಿಂದ ಕೈ ತುತ್ತು ನೀಡಿದ ಮಹಿಳೆ

ನವೆಂಬರ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 20.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  5 ಲಕ್ಷಕ್ಕಿಂತಲೂ ಅಧಿಕ  ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಗಳೂ ಹರಿದು ಬಂದಿದ್ದು, ಒಬ್ಬ ಬಳಕೆದಾರರು ʼಆ ಬಾಲಕ ಹಾವಿನ ಬಳಿ ಹೋಗುತ್ತಿರುವುದನ್ನು ಕಂಡು ನನಗೆ ಇಲ್ಲಿ ಆತಂಕ ಶುರುವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಓ ದೇವ್ರೆ!  ಈ ಹುಡುಗ ಎಷ್ಟು ಧೈರ್ಯಶಾಲಿʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಕ್ಕಳನ್ನು ಈ ರೀತಿಯಾಗಿ ಹಾವುಗಳ ಜೊತೆ ಬಿಡುವುದು ಸರಿಯಲ್ಲ, ಅವುಗಳು ಅಪಾಯಕಾರಿ ಜೀವಿಗಳುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಹುಡುಗನ ದೈರ್ಯವನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: