ಈ ವಿಡಿಯೋ ನೋಡಿದ ಬಳಿಕವೂ ನೂಡಲ್ಸ್​ ತಿನ್ನುತ್ತೀರಾ? ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

| Updated By: ಶ್ರೀದೇವಿ ಕಳಸದ

Updated on: Jan 24, 2023 | 9:24 AM

Noodles Making : ನೂಡಲ್ಸ್​ ಅಷ್ಟೇ ಯಾಕೆ, ಸಣ್ಣ ಹೋಟೆಲ್​ಗಳ ಅಡುಗೆ ಮನೆ ಹೊಕ್ಕು ನೋಡಿ. ಕುಲ್ಚಾ, ಪರೋಟಾ, ಚಪಾತಿ, ಪೂರಿಗಳನ್ನೂ ಹೀಗೇ ತಯಾರಿಸುತ್ತಾರೆ ಎನ್ನುತ್ತಿದ್ಧಾರೆ ನೆಟ್ಟಿಗರು.

ಈ ವಿಡಿಯೋ ನೋಡಿದ ಬಳಿಕವೂ ನೂಡಲ್ಸ್​ ತಿನ್ನುತ್ತೀರಾ? ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ನೂಡಲ್ಸ್​ ಫ್ಯಾಕ್ಟರಿ
Follow us on

Viral Video : ನೂಡಲ್ಸ್​ ಯಾರಿಗೆ ಇಷ್ಟವಿಲ್ಲ? ಮುಪ್ಪಾನು ಮುದಕರಿಂದ ಹಿಡಿದು ಎಳೇ ಮಕ್ಕಳವರೆಗೂ ಬಾಯಲ್ಲಿ ನೀರೂರುತ್ತದೆ. ಅದರಲ್ಲಿಯೂ ಹದಿಹರೆಯದವರಿಗೆ, ಯುವಕ ಯುವತಿಯರಿಗೆ ಮತ್ತು ಮಕ್ಕಳಿಗಂತೂ ಎರಡು ಹೊಟ್ಟೆಯಾಗುತ್ತದೆ. ವಿದೇಶದಲ್ಲಿಯಂತೂ ಇದು ಊಟಕ್ಕೂ ತಿಂಡಿಗೂ ಸಾಮಾನ್ಯವಾಗಿರುಂಥ ಖಾದ್ಯ. ಇಟಲಿ, ಚೀನಾದ ಮೂಲದಿಂದ ಬಂದಿರುವ ಈ ನೂಡಲ್ಸ್​ ಜಗತ್ತಿನಾದ್ಯಂತ ಜನಪ್ರಿಯ. ಅದರಲ್ಲೂ ರಸ್ತೆಬದಿಯ ನೂಡಲ್ಸ್​​ನ ರುಚಿ! ಆದರೆ ಈ ವಿಡಿಯೋದಲ್ಲಿ ನೂಡಲ್ಸ್​ ಮಾಡುತ್ತಿರುವ ಬಗೆಯನ್ನು ಒಮ್ಮೆ ನೋಡಿ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೂಡಲ್ಸ್​ ತಯಾರಿಸುವವರು ಟೀಶರ್ಟ್​, ಬನಿಯನ್​, ಶಾರ್ಟ್ಸ್​ ಮಾತ್ರ ಧರಿಸಿದ್ದಾರೆ. ಕೈಗವಸು, ಕ್ಯಾಪ್​, ಮಾಸ್ಕ್​ ಏನನ್ನೂ ಧರಿಸಿಲ್ಲ. ಬಳಸುತ್ತಿರುವ ಯಂತ್ರಗಳೂ ಶುಚಿಯಾಗಿಲ್ಲ. ಹಿಟ್ಟನ್ನು ನೆಲದ ಮೇಲೆ ಇಡುತ್ತಿದ್ದಾರೆ. ಮತ್ತದನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ. ನೆಲದ ಮೇಲೆ ನೂಡಲ್ಸ್ ಹರವುತ್ತಿದ್ಧಾರೆ. ನಂತರ ಪ್ಲಾಸ್ಟಿಕ್ ಚೀಲದಲ್ಲಿ ಅವನ್ನು ಪ್ಯಾಕ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ಟಾಮಿ ವೆಡ್ಸ್​ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್

ರಸ್ತೆಬದಿಯಲ್ಲಿ ಸಿಗುವ ಈ ಹಕ್ಕಾ ನೂಡಲ್ಸ್​ ಯಾವಾಗ ತಿಂದಿದ್ದೀರೆಂದು ನೆನಪಿಸಿಕೊಳ್ಳುತ್ತಿದ್ದೀರಾ? ಅನೇಕರು ಈ ವಿಡಿಯೋ ನೋಡಿ ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಉತ್ತರ ಭಾರತದ ಖಾದ್ಯಗಳಾದ ಕುಲ್ಚಾ, ರೋಟಿ, ನಾನ್​ ತಂದೂರಿ ರೋಟಿಗಳನ್ನು ತಯಾರಿಸುವ ರೀತಿಯನ್ನು ಸಣ್ಣಪುಟ್ಟ ಹೋಟೆಲ್​ಗಳನ್ನು ಹೊಕ್ಕು ನೋಡಿ ಅಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದಿದ್ದಾರೆ ಒಬ್ಬರು. ಈ ವಿಡಿಯೋದಲ್ಲಿ ನೂಡಲ್ಸ್​ ಮಾಡುವ ರೀತಿ ನೋಡಿಯೇ ನೂಡಲ್ಸ್​ ತಿನ್ನುವ ಆಸೆ ಕಡಿಮೆಯಾಗುತ್ತಿದೆ. ಈ ಫ್ಯಾಕ್ಟರಿ ಎಲ್ಲಿದೆ ಎಂದು ಪತ್ತೆ ಹಚ್ಚಿ ಇದನ್ನು ಮುಚ್ಚಲು ಆದೇಶ ನೀಡಬೇಕು ಎಂದಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : ಡಯೆಟ್ ಅಂತೆ ಡಯೆಟ್​! ಪಕೋಡಾ ತಿನ್ನು ವರ್ಕೌಟ್​ ಮಾಡು; ರೈಟ್​ ರೈಟ್​ ಆಂಟೀ ಎಂದ ನೆಟ್ಟಿಗರು

ಜಗತ್ತಿನ ಅತೀ ಶ್ರೇಷ್ಠ ನೂಡಲ್ಸ್​ ತಯಾರಿಕೆ. ನೂಡಲ್ಸ್​ ರುಚಿಯೊಂದಿಗೆ ಡಯೇರಿಯಾ ಅನ್ನೂ ಉಚಿತವಾಗಿ ನೀಡುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ರಸ್ತೆ ಬದಿ ಮಾತ್ರ ಇಂಥ ನೂಡಲ್ಸ್ ಉಪಯೋಗಿಸುತ್ತಾರೆ ಎಂದು ಹೇಗೆ ಹೇಳುತ್ತೀರಿ? ಫೈವ್ ಸ್ಟಾರ್ ಹೋಟೆಲ್​ನಲ್ಲಿಯೂ ಉಪಯೋಗಿಸಬಹುದು ಎಂದಿದ್ದಾರೆ ಮತ್ತೊಬ್ಬರು. ಯಾವಾಗ ನೂಡಲ್ಸ್​ ತಿನ್ನುತ್ತೇನೋ ಆಗೆಲ್ಲಾ ಗಂಟಲು ಮತ್ತು ಹೊಟ್ಟೆ ನೋವು ಬರುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್

ಬಹಳ ಯೋಚಿಸಬೇಡಿ. ನೂಡಲ್ಸ್​ ತಿನ್ನುವಾಗ ಬೇಯಿಸಿ, ಕುದಿಸಿ ತಿನ್ನಲಾಗುತ್ತದೆ. ಏನೂ ಆಗುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ಧಾರೆ. ಯುವಪೀಳಿಗೆ ತಮ್ಮ ಬಜೆಟ್​ಗೆ ತಕ್ಕಂತೆ ಇಂಥ ಖಾದ್ಯಗಳನ್ನು ತಿನ್ನುತ್ತಾರೆ. ಏನು ಮಾಡಲಾಗುತ್ತದೆ? ಅರಗಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕಷ್ಟೇ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:24 am, Tue, 24 January 23