Viral Video: ವಿಮಾನದ ಕಿಟಕಿಯ ಮೂಲಕ ಹೊರಗಿದ್ದ ಸಿಬ್ಬಂದಿಯೊಂದಿಗೆ ಪ್ರಯಾಣಿಕನ ರಾಕ್ ಪೇಪರ್ ಕತ್ತರಿ ಆಟ

ವಿಮಾನದೊಳಗಿನ ಪ್ರಯಾಣಿಕರೊಬ್ಬರು ವಿಮಾನದ ಕಿಟಕಿಯ ಮೂಲಕ ಹೊರಗಡೆ ನಿಂತಿದ್ದ ಸಿಬ್ಬಂದಿಯೊಂದಿಗೆ 'ರಾಕ್-ಪೇಪರ್-ಸಿಸರ್ಸ್' ಆಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮಕ್ಕಳು ಆಡುವ ಆಟ ಇದಾಗಿದೆ.

Viral Video: ವಿಮಾನದ ಕಿಟಕಿಯ ಮೂಲಕ ಹೊರಗಿದ್ದ ಸಿಬ್ಬಂದಿಯೊಂದಿಗೆ ಪ್ರಯಾಣಿಕನ ರಾಕ್ ಪೇಪರ್ ಕತ್ತರಿ ಆಟ
ರಾಕ್ ಪೇಪರ್ ಕತ್ತರಿ ಆಟ
Edited By: Rakesh Nayak Manchi

Updated on: Jul 14, 2022 | 11:45 AM

ಆಟ ಆಡಲು ಪರಿಚಿತರೇ ಆಗಬೇಕೆಂದಿಲ್ಲ, ಅಪರಿಚಿತರೊಂದಿಗೆ ಆಡಿದರೂ ಮನರಂಜನೆ ಸಿಗುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸಿಬ್ಬಂದಿಯೊಂದಿಗೆ ರಾಕ್ ಪೇಪರ್ ಕತ್ತರಿ ಆಟ (Rock-Paper-Scissors Game) ಆಡುವ ವಿಡಿಯೋ ವೈರಲ್ (Video Viral) ಆಗುತ್ತಿದೆ. ಮೇ 24 ರಂದು USAನ ಟ್ರಾನ್ಸ್‌ಪೋರ್ಟೇಶನ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಷನ್ ಅಥವಾ TSA ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, bricheeseyy ಹೆಸರಿನ ಬಳಕೆದಾರರಿಗೆ TSA ವಿಡಿಯೋ ಕ್ರೆಡಿಟ್ ನೀಡಿದೆ.

ಇದನ್ನೂ ಓದಿ: Viral Video: ಗೋಲ್ಗಪ್ಪ ಪ್ರಿಯರೇ ಇಲ್ಲಿ ನೋಡಿ… ಗೋಲ್ಗಪ್ಪ ನೀರಿನ ರುಚಿಯನ್ನು ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್ ಬಳಕೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇರುವಂತೆ, ವಿಮಾನದೊಳಗಿನ ಪ್ರಯಾಣಿಕರೊಬ್ಬರು ವಿಮಾನದ ಕಿಟಕಿಯ ಮೂಲಕ ಹೊರಗಡೆ ನಿಂತಿದ್ದ ಸಿಬ್ಬಂದಿಯೊಂದಿಗೆ ‘ರಾಕ್-ಪೇಪರ್-ಸಿಸರ್ಸ್’ ಆಡುತ್ತಿರುವುದನ್ನು ತೋರಿಸುತ್ತದೆ. ಈ ಆಟವು ಹೆಚ್ಚಾಗಿ ಮಕ್ಕಳು ಆಡುತ್ತಾರೆ. ಶಾಲಾ ಕಾಲೇಜು, ಮನೆ ಸೇರಿದಂತೆ ಅಲ್ಲೆಂದರಲ್ಲಿ ಆಡುವುದನ್ನು ಕಾಣುತ್ತೇವೆ. ಈ ಆಟವನ್ನು ಯುವಕರು ಕೂಡ ಆಡುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಇದನ್ನೂ ಓದಿ: Viral Video: ಟೋಲ್ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡ “ದಿ ಗ್ರೇಟ್ ಖಲಿ”

ರಾಕ್ ಪೇಪರ್ ಕತ್ತರಿ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ನಂತರ ವೈರಲ್ ಪಡೆದು 51.6 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಪಡೆದಿದ್ದು, 4.7 ದಶಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಗಳಿಸಿದೆ. ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ಕಾಂಮೆಂಟ್ ಬಾಕ್ಸ್​ನಲ್ಲಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ಯಾವಾಗಲೂ ರಾಕ್ ಅನ್ನು ಆಯ್ಕೆ ಮಾಡಿ” ಹೇಳಿದ್ದಾರೆ. ಇನ್ನೊಬ್ಬರು “ಅವರು ವೈಬ್ ಚೆಕ್ ಅನ್ನು ಪಾಸ್ ಮಾಡಿದ್ದಾರೆ” ಎಂದು ಹೇಳಿದರು.

ಜನರು ತಮಾಷೆಯ ವಿಷಯಗಳನ್ನು ಮಾಡುವ ವೀಡಿಯೊಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗೆ, ವಿಮಾನದ ಕಿಟಕಿಯ ಕೆಳಗೆ ಗುಟ್ಕಾ ಕಲೆಯನ್ನು ತೋರಿಸುವ ಫೋಟೋವೊಂದು ವೈರಲ್ ಆಗಿತ್ತು. ಅಸಹ್ಯ ಹುಟ್ಟಿಸಿದ ಈ ಪೋಸ್ಟ್‌ಗೆ 16,000 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಇದನ್ನೂ ಓದಿ: Viral News: ಬಾಲಕನನ್ನು ಮೊಸಳೆ ನುಂಗಿದೆ ಎಂದುಕೊಂಡ ಜನ; ಹುಡುಗನ ಕಾಪಾಡಲು ಮಾಡಿದ ಪ್ಲಾನ್ ಏನು ಗೊತ್ತಾ?

Published On - 11:45 am, Thu, 14 July 22

Web contact

TV9 Kannada

Read More
Follow Us