ಇಂಟರ್ನೆಟ್ನಲ್ಲಿ ಒಮ್ಮೆ ಕಣ್ಣಾಡಿಸಿದರೆ ಸಾಕು… ಖುಷಿ ಕೊಡುವ, ಭಾವುಕರನ್ನಾಗಿ ಮಾಡುವ ಸಾಕಷ್ಟು ವಿಡಿಯೋಗಳು ಕಾಣಸಿಗುತ್ತವೆ. ಅದರಲ್ಲೂ ನೀವು ಪ್ರಾಣಿಪ್ರಿಯರಾಗಿದ್ದರಂತೂ ಕೇಳೋದೇ ಬೇಡ. ಪ್ರಾಣಿಗಳ ಕುರಿತ ಅದೆಷ್ಟೋ ವಿಡಿಯೋಗಳು ನಮ್ಮ ಕಣ್ಣಾಲಿಗಳನ್ನು ಒದ್ದೆ ಮಾಡುತ್ತವೆ. ನಿಮಗೆ ನಾಯಿ, ಬೆಕ್ಕುಗಳೆಂದರೆ ಇಷ್ಟವಿದ್ದರೆ ತಪ್ಪದೆ ಈ ವಿಡಿಯೋ ನೋಡಿ. ನೀವು ಪ್ರಾಣಿ ಪ್ರೇಮಿಯಾಗಿದ್ದರೆ, ನಿಮ್ಮ ಮದುವೆಯ ದಿನದಂದು (Wedding Day) ನಿಮ್ಮ ಮುದ್ದಿನ ನಾಯಿಯನ್ನು ಹಿಡಿದುಕೊಂಡು ನೀವು ಕೂಡ ಈ ವಿಡಿಯೋದಂತೆ ಮಾಡಲು ಬಯಸಬಹುದು. ನವವಿವಾಹಿತ ವಧು-ವರರು ತಮ್ಮ ಮದುವೆಯ ದಿನದಂದು ತಮ್ಮ ಮುದ್ದಿನ ಗೋಲ್ಡನ್ ರಿಟ್ರೀವರ್ ನಾಯಿಯೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ. ಈ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ವಧು-ವರರು ಎಡ್ ಶೀರನ್ ಅವರ ಥಿಂಕಿಂಗ್ ಔಟ್ ಲೌಡ್ಗೆ ನೃತ್ಯ ಮಾಡುವುದನ್ನು ಕಾಣಬಹುದು. ಅವರ ಜೊತೆಗೆ ಅವರ ಸಾಕು ನಾಯಿ ಕೂಡ ನೃತ್ಯ ಮಾಡಿದೆ. ಈ ವಿಡಿಯೋವನ್ನು ಮಿಸ್ ಮಾಡದೆ ನೋಡಿ. ನೃತ್ಯದ ಕೊನೆಯಲ್ಲಿ, ವಧು ಮತ್ತು ವರರು ತಮ್ಮ ಮುದ್ದಿನ ನಾಯಿಯ ಕೆನ್ನೆಯ ಮೇಲೆ ಮುತ್ತು ಕೊಡುತ್ತಾರೆ. ಈ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಶ್ವಾನಪ್ರಿಯರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಪೇಜಿನಲ್ಲೂ ಶೇರ್ ಮಾಡಿಕೊಂಡಿದ್ದಾರೆ. ನನಗೂ ನನ್ನ ನಾಯಿಯ ಜೊತೆ ನನ್ನ ಮದುವೆಯ ದಿನ ಇದೇ ರೀತಿ ಡ್ಯಾನ್ಸ್ ಮಾಡಬೇಕು, ನನ್ನ ಮದುವೆಯ ವೇಳೆ ನನ್ನ ನಾಯಿ ಕೂಡ ನಮ್ಮ ಜೊತೆಗಿರಬೇಕು ಎಂಬ ಆಸೆಯಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಅಪ್ಲೋಡ್ ಆದ ಒಂದೇ ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ವ್ಯೂಗಳನ್ನು ಪಡೆದಿದೆ.
Viral Video: ಸೇಬು, ಚಿಕ್ಕು, ಬಾಳೆಹಣ್ಣು ಹಾಕಿ ಟೀ ಮಾಡಿದ ಚಾಯ್ವಾಲ; ವಿಡಿಯೋ ನೋಡಿ ನೆಟ್ಟಿಗರು ಸುಸ್ತು!