Plane Crashes : ಫ್ರೀವೇನಲ್ಲಿ ಕಾರುಗಳು ಚಲಿಸುತ್ತಿವೆ. ಆಕಾಶದಲ್ಲಿದ್ದ ವಿಮಾನವೊಂದು ಇದ್ದಕ್ಕಿದ್ದಂತೆ ಬಿದ್ದು ಬೆಂಕಿ ಹೊತ್ತಿಕೊಳ್ಳುತ್ತದೆ. ಇದು ನಡೆದಿದ್ದು ಕ್ಯಾಲಿಫೋರ್ನಿಯಾದಲ್ಲಿ. ಲ್ಯಾಂಡಿಂಗ್ ಮಾಡಿದ ಬಳಿಕ ಸಿಂಗಲ್ ಎಂಜಿನ್ ಹೊಂದಿದ ವಿಮಾನ ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಆಗಸ್ಟ್ 9ರಂದು ಈ ದುರ್ಘಟನೆ ನಡೆದಿದೆ. ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸದ್ಯ ಯಾರಿಗೂ ಈ ಅವಘಡದಲ್ಲಿ ಅಪಾಯ ಸಂಭವಿಸಿಲ್ಲ. ನೆಟ್ಟಿಗರು ಈ ದೃಶ್ಯ ನೋಡಿ ಭಯಕ್ಕೀಡಾಗಿದ್ದಾರೆ.
ಈ ವಿಮಾನ ಅಪಘಾತಕ್ಕೆ ಎಂಜಿನ್ ವೈಫಲ್ಯವೇ ಕಾರಣ ಎಂದು ತಿಳಿದುಬಂದಿದೆ. Pipe PA-32 ವಿಮಾನವು 45 ನಿಮಿಷಗಳ ಕಾಲ ಲಾಸ್ ಎಂಜಲೀಸ್ಗೆ ಪ್ರಯಾಣಿಸುವುದಿತ್ತು. ಕರೋನಾ ಮುನ್ಸಿಪಲ್ ಏರ್ಪೋರ್ಟ್ಗೆ ಹೋಗುವಾಗ ಮಧ್ಯಾಹ್ನ ಫ್ರೀವೇನಲ್ಲಿ ಈ ಅಪಘಾತ ಸಂಭವಿಸಿತು. ಎಂಜಿನ್ ಸಮಸ್ಯೆಯಿಂದ ತುರ್ತಾಗಿ ಲ್ಯಾಂಡ್ ಆಗಬೇಕೆಂಬ ಪೈಲಟ್ ಪ್ರಯತ್ನ ಕೊನೆಗೂ ವಿಫಲವಾಯಿತು. ಸದ್ಯ ಯಾರಿಗೂ ಗಾಯ ನೋವು ಆಗಿಲ್ಲ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:11 pm, Sat, 13 August 22