Viral: ಸಾರಾ ತೆಂಡೂಲ್ಕರ್ ಮೆಹಂದಿ ಫೋಟೋ ಹಿಂದಿರುವ ಸತ್ಯ
Sara Tendulkar : ಇತ್ತೀಚೆಗಷ್ಟೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿರುವ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಅವರ ಬಗ್ಗೆ ಎದ್ದ ವದಂತಿಗೆ ತೆರೆ ಬಿದ್ದಿದೆ.
Sara Tendulkar : ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಮಾಡೆಲಿಂಗ್ ಕ್ಷೇತ್ರಕ್ಕೆ ಅವರು ಕಾಲಿಟ್ಟಿರುವುದರಿಂದ ಅಭಿಮಾನಿಗಳು ಒಂದೊಂದು ಫೋಟೋ, ಪೋಸ್ಟ್ ಬಗ್ಗೆಯೂ ಕುತೂಹಲದಿಂದ ಕಾಯುತ್ತಿರುತ್ತಾರೆ. ಇತ್ತೀಚೆಗೆ ಮದುವೆ ಕಾರ್ಯಕ್ರಮವೊಂದರಲ್ಲಿ ಸಾರಾ ಮೆಹಂದಿ ಹಾಕಿಸಿಕೊಳ್ಳುತ್ತಿರುವ ಫೋಟೋ ವೈರಲ್ ಆಗಿದ್ದು, ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಉಂಟುಮಾಡಿತ್ತು. ಸಾರಾ ಮದುವೆಯಾಗುತ್ತಿದ್ದಾರೆ ಎಂದು ಕೆಲವರು ಪ್ರತಿಕ್ರಿಯಿಸಿದ್ದರು. ನಂತರ ಅದು ಕೇವಲ ವದಂತಿ ಎನ್ನುವುದು ಸ್ಪಷ್ಟವಾಯಿತು. ಮೆಹಂದಿ ಹಾಕಿಸಿಕೊಳ್ಳುತ್ತಿರುವ ಫೋಟೋ ಸಾರಾ ಅವರ ಕಸಿನ್ ಮದುವೆಯಲ್ಲಿ ತೆಗೆಸಿಕೊಂಡದ್ದಾಗಿತ್ತು.
ಇದನ್ನೂ ಓದಿView this post on Instagram
ಇತ್ತೀಚೆಗೆ ರಜಾ ದಿನಗಳನ್ನು ಕಳೆಯಲು ಥೈಲ್ಯಾಂಡಿಗೆ ಹೋಗಿದ್ದ ವಿಡಿಯೋವನ್ನು ಸಾರಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು 3 ಲಕ್ಷಕ್ಕೂ ಹೆಚ್ಚು ನೆಟ್ಟಿಗರನ್ನು ಸೆಳೆದಿದೆ. ಅಲ್ಲದೆ, ಸಾರಾ ಫ್ಯಾಷನ್ ಡಿಸೈನರ್ ಅನಿತಾ ಡೋಂಗ್ರೆಯ ಬ್ರೈಡಲ್ ಕಲೆಕ್ಷನ್ಗೆ ಮಾಡೆಲ್ ಕೂಡ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
View this post on Instagram
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:06 pm, Sat, 13 August 22