ಕುರಿಗಳನ್ನು ತಳ್ಳಿದಂತೆ ತಳ್ಳಿ ಮೆಟ್ರೋ ಬಾಗಿಲು ಹಾಕಿದ ದೆಹಲಿ ಪೊಲೀಸರು

| Updated By: ಶ್ರೀದೇವಿ ಕಳಸದ

Updated on: Oct 06, 2022 | 2:40 PM

Metro Train : ಈ ವಿಡಿಯೋ ನೋಡುವುದಕ್ಕಿಂತ ಇದರಲ್ಲಿ ರೆಕಾರ್ಡ್​ ಆದ ಆ ಇಬ್ಬರು ಪುರುಷರ ಜಗಳದ ಧ್ವನಿ ಕೇಳುವುದೇ ಆಸಕ್ತಿಕರವಾಗಿದೆ. ಕೇಳಿ ಎಂಥ ಲಯಬದ್ಧವಾಗಿದೆ! ನೆಟ್ಟಿಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ.

ಕುರಿಗಳನ್ನು ತಳ್ಳಿದಂತೆ ತಳ್ಳಿ ಮೆಟ್ರೋ ಬಾಗಿಲು ಹಾಕಿದ ದೆಹಲಿ ಪೊಲೀಸರು
ಬಹಳ ಜಾಗ ಇದೆ!
Follow us on

Viral Video : ಮೆಟ್ರೋ ರೈಲಿನೊಳಗೆ ಮಹಿಳೆಯರ ಸೀಟಿಗಾಗಿ ಜಗಳಾಡುತ್ತಿರುವುದು, ಡ್ಯಾನ್ಸ್ ಮಾಡುವುದು, ಅನೇಕ ಪ್ರತಿಭಾ ಪ್ರದರ್ಶನಗಳ ರೀಲ್ಸ್​… ಹೀಗೆ ಅನೇಕ ವಿಡಿಯೋಗಳನ್ನು ನೋಡಿದ್ದೀರಿ. ಆದರೆ ಈ ವಿಡಿಯೋ ಮಾತ್ರ ವಿಭಿನ್ನವಾಗಿದೆ. ದೆಹಲಿಯ ಮೆಟ್ರೋ ರೈಲಿನ ಕೋಚ್​ನಲ್ಲಿ ಇಬ್ಬರು ಪುರುಷರ ಜಗಳದಿಂದಾಗಿ ರೈಲಿನ ಬಾಗಿಲು ಮುಚ್ಚುವುದು ದುಸ್ಸಾಹಸವಾಗಿದೆ. ಮೊದಲೇ ತುಂಬಿತುಳುಕುತ್ತಿರುವ ರೈಲು, ಅದರಲ್ಲಿ ಇವರಿಬ್ಬರ ಜಗಳ. ಕೊನೆಗೂ ಪೊಲೀಸರು ಅಲ್ಲಿದ್ದ ಜನರನ್ನು ತಳ್ಳಿ ತಳ್ಳಿ ಬಾಗಿಲು ಮುಚ್ಚಿ ರೈಲು ಚಲಿಸಲು ಅನುಕೂಲವಾಗುವಂತೆ ಸಹಕರಿಸಿದ್ದಾರೆ. ಇದೀಗ ಆನ್​ಲೈನ್​ನಲ್ಲಿ ವೈರಲ್ ಆದ ಈ ವಿಡಿಯೋ ನೋಡಿ ನೆಟ್ಟಿಗರಿಗಂತೂ ಪುಕ್ಕಟೆ ಮನರಂಜನೆ ಪಡೆಯುತ್ತಿದ್ದಾರೆ.

ಕಚೇರಿಯ ಸಮಯದಲ್ಲಿ ಮೆಟ್ರೋ ಪ್ರಯಾಣವೆಂದರೆ ದೊಡ್ಡ ದುಸ್ತರ. ಈ ವಿಡಿಯೋದಲ್ಲಿ ಕೇಳಿಬಂದಿರುವ ಧ್ವನಿಗಳನ್ನು ಆಲಿಸಿ. ಇಬ್ಬರು ಪುರುಷರು ಜಗಳಾಡುತ್ತಿದ್ದಾರೆ. ಒಬ್ಬ ನಹೀಂ ಜಾಗಾ ಹೈ ಎನ್ನುತ್ತಿದ್ದಾನೆ ಇನ್ನೊಬ್ಬ ಬಹೂತ್ ಜಾಗಾ ಹೈ ಎನ್ನುತ್ತಿದ್ದಾನೆ. ಎಷ್ಟು ಲಯಬದ್ಧವಾಗಿದೆ ನೋಡಿ ಈ ಜಗಳ!

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

 

ಈ ವಿಡಿಯೋ ಅನ್ನು 4,00,000 ಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 49,000 ಜನರು ಇಷ್ಟಪಟ್ಟಿದ್ದಾರೆ. ಈ ಇಬ್ಬರ ಜಗಳದಲ್ಲಿ ಪ್ರಯಾಣಿಕರು ಬಾಗಿಲುಗಳಿಗೆ ಅಂಟಿಕೊಂಡಿರುವುದರಿಂದ ಬಾಗಿಲುಗಳು ಮುಚ್ಚಿಕೊಳ್ಳುತ್ತಿಲ್ಲ. ಆಗ ಪೊಲೀಸರು ಆ ಜನರನ್ನೆಲ್ಲ ತಳ್ಳಿ ಕೊನೆಗೂ ಬಾಗಿಲುಗಳನ್ನು ಯಶಸ್ವಿಯಾಗಿ ಮುಚ್ಚಿದ್ಧಾರೆ.

ನೆಟ್ಟಿಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ ಈ ವಿಡಿಯೋದ ಆಡಿಯೋ ಕೇಳಿ ಕೇಳಿ. ಪರ್ಫೆಕ್ಟ್ ಆಡಿಯೋ ಈ ವಿಡಿಯೋಗೆ ಎಂದಿದ್ದಾರೆ ಒಬ್ಬ ಖಾತೆದಾರರು. ಜಪಾನ್​ನಲ್ಲಿರುವ ಬುಲೆಟ್​ ಟ್ರೇನ್​ ಇಂಡಿಯಾಗೆ ಬಂದಿದೆ ಎನ್ನಿಸುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತುಂಬಾ ಜಾಗ ಇದೆಯಲ್ಲ ಟ್ರೇನಿನಲ್ಲಿ. ಹೌದಾ, ಅಲ್ಲವಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 12:37 pm, Thu, 6 October 22