Viral Video : ಸಂಗೀತ ಅಥವಾ ಯಾವುದೇ ಕಲೆಯೂ ಭಾಷೆ, ಗಡಿ, ಮತಪಂಥಕ್ಕೆ ಸೀಮಿತವಾದುದಲ್ಲ. ಕಲೆಗೆ ಇರುವುದು ಒಂದೇ ಭಾಷೆ ಅದು ಹೃದಯಸಂವಾದಕ್ಕೆ ಸಂಬಂಧಿಸಿದ್ದು. ಸಂಗೀತವಂತೂ ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ವ್ಯಕ್ತಿ ಹೊಲದಲ್ಲಿ ನಿಂತು ಸ್ಯಾಕ್ಸೊಫೋನ್ ನುಡಿಸುತ್ತಿದ್ದಾನೆ. ಸ್ವಲ್ಪ ಹೊತ್ತಿಗೆ ಅಲ್ಲೆಲ್ಲೋ ದೂರದಲ್ಲಿ ಮೇಯಲು ಹೋಗಿದ್ದ ಹಸುಗಳು ಒಟ್ಟಾಗಿ ಬಂದು ಈತನ ಮುಂದೆ ನಿಲ್ಲುತ್ತವೆ. ಸ್ಯಾಕ್ಸೊಫೋನ್ನ ನಾದಕ್ಕೆ ಈ ಹಸುಗಳು ತಲೆದೂಗಿರುವ ಕಾರಣಕ್ಕೆ ಈ ವಿಡಿಯೋ ಇದೀಗ ವೈರಲ್ ಆಗಿದೆ. ಸುಮಾರು 1 ಮಿಲಿಯನ್ ವೀಕ್ಷಕರು ಇದನ್ನು ವೀಕ್ಷಿಸಿದ್ದಾರೆ.
ತನ್ಸು ಯೆಗೆನ್ ಎಂಬ ಟ್ವಿಟರ್ ಖಾತೆದಾರರು ಈ ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ. ಬಹುಶಃ ಇದು ನಿತ್ಯದ ಅಭ್ಯಾಸವಾಗಿರಬಹುದು. ಕೃಷ್ಣ ಹೇಗೆ ಕೊಳಲನ್ನೂದಿ ಹಸುಗಳನ್ನು ಕಾಯುತ್ತಿದ್ದನೋ ಹಾಗೆ ಈ ಆಧುನಿಕ ಕೃಷ್ಣ ಸ್ಯಾಕ್ಸೊಫೋನ್ ನುಡಿಸಿ ಹಸುಗಳನ್ನು ಕಾಯುತ್ತಿರಬಹುದು. ಒಮ್ಮೆ ಇವ ಸ್ಯಾಕ್ಸೊಫೋನ್ ನುಡಿಸುತ್ತಿದ್ದಂತೆ ಹೆಚ್ಚೂ ಕಡಿಮೆ 30 ಹಸುಗಳಾದರೂ ಇವನ ಬಳಿ ಒಟ್ಟುಗೂಡುತ್ತವೆ. ನಾದದ ಶಕ್ತಿ!
The power of music pic.twitter.com/mGbisVVwSq
— Tansu YEĞEN (@TansuYegen) October 15, 2022
ಅಧ್ಯಯನದ ಪ್ರಕಾರ, ‘ಶಾಸ್ತ್ರೀಯ ಸಂಗೀತವು ಹಸುಗಳ ಮನಸ್ಸು ಮತ್ತು ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಸಂಗೀತ ಕೇಳುತ್ತಿದ್ದಂತೆ, ಒತ್ತಡವನ್ನುಂಟು ಮಾಡುವ ಹಾರ್ಮೋನುಗಳಲ್ಲಿ ಇಳಿಕೆ ಉಂಟಾಗಿ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ. ಮೇಲಾಗಿ ಹಸುಗಳ ಶಾಸ್ತ್ರೀಯ ಸಂಗೀತವನ್ನು ಖುಷಿಯಿಂದ ಆಲಿಸುತ್ತವೆ’. ಕೇಳುತ್ತ ವಿಶ್ರಾಂತಿ ಪಡೆ ಳಿದಾಗ ಹೆಚ್ಚು ಆರಾಮದಾಯಕ
ನೆಟ್ಟಿಗರು ಈ ಪೋಸ್ಟ್ಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದ್ಧಾರೆ. ನಮ್ಮ ಕೃಷ್ಣ ಕೊಳಲನ್ನೂದುತ್ತಿದ್ದ, ಈತ ಸ್ಯಾಕ್ಸೊಫೋನ್ ನುಡಿಸುತ್ತಿದ್ದಾನೆ ಎಂದು ಒಬ್ಬರು ಕೃಷ್ಣನನ್ನು ನೆನಪಿಸಿಕೊಂಡಿದ್ದಾರೆ. ಇನ್ನೊಬ್ಬರು, ನಾನು ಚಿಕ್ಕವನಿದ್ದಾಗ ನನ್ನ ಅಜ್ಜನೊಂದಿಗೆ ಹೊಲಕ್ಕೆ ಹೋಗುತ್ತಿದ್ದೆ. ಅಜ್ಜ ಟ್ರಕ್ಕಿನ ಹಾರ್ನ್ ಬಾರಿಸಿ ಹಸುಗಳನ್ನು ಒಟ್ಟುಗೂಡಿಸುತ್ತಿದ್ದರು. ಆ ಹಾರ್ನ್ ಕೂಡ ಸ್ಯಾಕ್ಸೊಫೋನ್ನಂತೆ ಕೇಳಿಸುತ್ತಿತ್ತು ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:30 pm, Wed, 19 October 22