ಬೈಕ್, ಕಾರಿನಲ್ಲಿ ಸಾಹಸ ಮಾಡುವುದನ್ನು ನೀವು ನೋಡಿರಬಹುದು, ಆದರೆ ಟ್ರ್ಯಾಕ್ಟರ್‌ನಲ್ಲಿ ಸ್ಟಂಟ್ ಮಾಡಿದ್ದು ಎಲ್ಲಾದ್ರೂ ನೋಡಿದ್ದೀರಾ. ಈ ಸ್ಟಂಟ್ ನೋಡಿದರೆ ನೀವು ಎಂದೂ ಟ್ರಕ್ನಲ್ಲಿ ಸಾಹಸ ಮಾಡಲು ಹೋಗುವುದೇ ಇಲ್ಲ. ಇತ್ತೀಚೆಗಷ್ಟೇ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಇಬ್ಬರು ಹುಡುಗರು ಆಶ್ಚರ್ಯಕರ ರೀತಿಯಲ್ಲಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿರುವುದನ್ನು ಕಾಣಬಹುದು.
ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಲಾಯಿಸುವ ವ್ಯಕ್ತಿ ಸಾಹಸ ಮಾಡಲು ಮುಂದಾಗುತ್ತಾನೆ, ಸ್ಟಂಟ್ ಮಾಡುತ್ತಿದ್ದಂತೆ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಮತ್ತೊಬ್ಬ ವ್ಯಕ್ತಿ ನೆಲದ ಮೇಲೆ ಬೀಳುತ್ತಾನೆ. ಇನ್ನೇನು ಚಕ್ರಗಳು ಅವರ ತಲೆ ಮೇಲೆ ಹತ್ತಬೇಕು ಅಷ್ಟರೊಳಗೆ ಹೇಗೋ ಮತ್ತೊಂದು ಸಾಹಸ ಮಾಡಿ ಟ್ರ್ಯಾಕ್ಟರ್ ನಿಲ್ಲಿಸಿದ್ದಾರೆ.
ಮತ್ತಷ್ಟು ಓದಿ: Viral Video: ಬೈಕ್ ಸವಾರನ ತಲೆ ಮೇಲೆ ಏಕಾಏಕಿ ಬಿತ್ತು ತೆಂಗಿನಕಾಯಿ, ಹೆಲ್ಮೆಟ್ ಹಾಕಿರ್ಲಿಲ್ಲ ಏನಾಯ್ತು ನೋಡಿ
ಬೈಕ್_ಮೈ_ಲೈಫ್_94 ಹೆಸರಿನ ಪ್ರೊಫೈಲ್ ಈ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ತನ್ನ ಹಸಿರು ಬಣ್ಣದ ಟ್ರ್ಯಾಕ್ಟರ್‌ನಲ್ಲಿ ಸಾಹಸ ಮಾಡಿದ್ದನ್ನು ಕಾಣಬಹುದು.
ಟ್ರ್ಯಾಕ್ಟರ್ ನ ಮುಂದಿನ ಚಕ್ರ ನೆಲಕ್ಕೆ ತಾಗುತ್ತಿದ್ದಂತೆಯೇ ಜಿಗಿದಿದ್ದು, ನಂತರ ಟ್ರ್ಯಾಕ್ಟರ್ ಮೇಲೆ ಕುಳಿತವ ನೆಲದ ಮೇಲೆ ಟ್ರ್ಯಾಕ್ಟರ್ ಕೆಳಗೆ ಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದೇ ಸಮಯದಲ್ಲಿ ಚಾಲಕ ಟ್ರ್ಯಾಕ್ಟರ್ ಅನ್ನು ನಿಲ್ಲಿಸುತ್ತಾನೆ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದೆ. ಇದುವರೆಗೆ 4 ಲಕ್ಷ 70 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 5 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ