
ಕಳ್ಳತನ ಮಾಡುವುದು ಅಪರಾಧ ಎಂದು ಗೊತ್ತಿದ್ರೂ ಇದನ್ನೇ ವೃತ್ತಿಯಾಗಿಸಿಕೊಂಡವರು ಹಲವರಿದ್ದಾರೆ. ಹೀಗಾಗಿ ಹೆಚ್ಚು ಜನರು ಸೇರಿದ ಸ್ಥಳಗಳಲ್ಲಿ,ಬಸ್ಸಿನಲ್ಲಿ ಪ್ರಯಾಣಿಸುವಾಗ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಬಸ್ಸಿನಲ್ಲಿ ಮಹಿಳೆಯರ ಪರ್ಸ್ ಎಗರಿಸಲು ಪ್ರಯತ್ನಿಸಿದ್ದು ಕೊನೆಗೆ ತನ್ನ ಪ್ರಯತ್ನವು ವಿಫಲವಾಗಿ ಸಿಕ್ಕಿಬಿದ್ದಿದ್ದಾನೆ.
ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಯಾಣಿಕನಂತೆ ಬಸ್ಸು ಹತ್ತಿದ ವ್ಯಕ್ತಿಯು ಅಲ್ಲೇ ಕುಳಿತಿದ್ದ ಮಹಿಳೆಯರ ಕದಿಯಲು ಯತ್ನಿಸಿದ್ದಾನೆ. ಆದರೆ ಮೊದಲ ಪ್ರಯತ್ನದಲ್ಲಿದ್ದು ವಿಫಲವಾಗುತ್ತಿದ್ದಂತೆ ಆ ವೇಳೆ ಅಕಸ್ಮಾತ್ ಕೈ ತಾಗಿದಂತೆ ನಟಿಸಿದ್ದಾನೆ. ಆದರೆ ಎರಡನೇ ಬಾರಿ ಪರ್ಸ್ ಎಳೆದುಕೊಂಡು ಬಸ್ಸಿನಿಂದ ಓಡಿಹೋಗಲು ಯತ್ನಿಸುತ್ತಿದ್ದಂತೆ ಇದನ್ನು ಅರಿತ ಬಸ್ ಚಾಲಕ ಬಾಗಿಲು ಹಾಕಿದ್ದಾನೆ. ಆದರೆ ಈ ಚಾಲಕನು ಮಾತ್ರ ಬಸ್ಸನ್ನು ನಿಲ್ಲಿಸದೆಯೇ ಅಲ್ಲೇ ಇದ್ದ ಕೋಲಿನಿಂದ ಆ ಕಳ್ಳನನ್ನ ಮನಬಂದಂತೆ ಬಾರಿಸಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಬಂದಿದ್ದು ಕಳ್ಳನನ್ನು ಬಂಧಿಸಿ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ, 102 ವರ್ಷ ವಯಸ್ಸಿನ ಅಜ್ಜಿಯನ್ನು ವರಿಸಿದ 100ರ ಅಜ್ಜ
‘non aesthetic things’ ಎನ್ನುವ ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಪರ್ಸ್ ಕದಿಯಲು ಯತ್ನಿಸಿ ವಿಫಲನಾಗಿದ್ದಾನೆ ಎಂದು ಬರೆದುಕೊಳ್ಳಲಾಗಿದೆ. ಈಗಾಗಲೇ ಈ ವಿಡಿಯೋವೊಂದು 4.9 ಮಿಲಿಯನ್ಸ್ ವೀಕ್ಷಣೆಯನ್ನು ಕಂಡಿದ್ದು, ನೆಟ್ಟಿಗನೊಬ್ಬನು, ‘ಈ ಜನ್ಮದಲ್ಲಿ ದೇವರು ಕೆಟ್ಟ ಕರ್ಮದ ಫಲವನ್ನು ನೀಡುತ್ತಾನೆ’ ಎಂದು ಕಾಮೆಂಟ್ ಮಾಡಿದ್ದಾನೆ. ಇನ್ನು ಕೆಲವರು, ‘ನಾವು ರೋಗಕ್ಕೆ ಚಿಕಿತ್ಸೆ ನೀಡಬೇಕೇ ಹೊರತು ರೋಗಿಗೆ ಚಿಕಿತ್ಸೆ ನೀಡಬಾರದು’ ಎಂದು ಸರ್ಕಾರವನ್ನು ದೂಷಿಸಸುವ ಮೂಲಕ ಕಾಮೆಂಟ್ ಸುರಿಮಳೆಗೈದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ