ತುರ್ತಾಗಿ ಅನುವಾದಕರು ಬೇಕಾಗಿದ್ದಾರೆ; ಸಂಭಾವನೆಗಾಗಿ ಈ ವಿಡಿಯೋದಲ್ಲಿರುವ ಪುಟ್ಟಿಯನ್ನು ಸಂಪರ್ಕಿಸಿ

| Updated By: ಶ್ರೀದೇವಿ ಕಳಸದ

Updated on: Jan 23, 2023 | 10:30 AM

Monday Blues : ಆ್ಯಂಟಿ ಡಿಪ್ರೆಷನ್​ ವಿಡಿಯೋ ಇದು ಎಂದು ಒಬ್ಬರು. ಗೂಗಲ್​ ಕೂಡ ಅನುವಾದಿಸಲು ಸೋತಿದೆ ಎಂದು ಇನ್ನೊಬ್ಬರು. ಕಪಿಲ್ ಶರ್ಮಾ ಷೋ ಕೂಡ ಇದರ ಮುಂದೆ ಫೇಲ್​ ಎಂದು ಮತ್ತೊಬ್ಬರು. ನೀವೇನಂತೀರಿ?

ತುರ್ತಾಗಿ ಅನುವಾದಕರು ಬೇಕಾಗಿದ್ದಾರೆ; ಸಂಭಾವನೆಗಾಗಿ ಈ ವಿಡಿಯೋದಲ್ಲಿರುವ ಪುಟ್ಟಿಯನ್ನು ಸಂಪರ್ಕಿಸಿ
ಅಮ್ಮಾ ತಾಯೀ ನೀ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದೀ?
Follow us on

Viral Video : ಮಕ್ಕಳು ಅರ್ಥದ ಗೋಜಿಗೆ ಹೋಗುವುದಿಲ್ಲ. ಅವರದೇನಿದ್ದರೂ ಅನುಕರಣಾಮಾರ್ಗ. ನೀವು ಏನು ಮಾತನಾಡುತ್ತೀರೋ, ಏನು ಮಾಡುತ್ತೀರೋ ಅದನ್ನೇ ಮುಗ್ಧವಾಗಿ ಅನುಕರಿಸುತ್ತವೆ. ಹೀಗಿರುವಾಗಲೇ ಅವಕ್ಕೂ ಒಮ್ಮೊಮ್ಮೆ ಕೋಪ ಬರುತ್ತದೆ. ಕೋಪ ಕೂಡ ನಿಮ್ಮಿಂದಲೇ ಅಲ್ಲವೆ? ಆಗ ಏನು ಮಾಡಬೇಕು, ಕೋಪ ಬಂದಾಗ ನೀವೇನು ಮಾಡಿರುತ್ತೀರೋ ಅದನ್ನೇ ಅವೂ ಅನುಕರಿಸುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಅಪ್ಪನಿಗೆ ಈ ಪುಟ್ಟಮಗಳು ಕ್ಲಾಸ್​ ತೆಗೆದುಕೊಂಡಿದ್ದಾಳೆ.

ಅದು ಯಾವ ಭಾಷೆಯಲ್ಲಿ ಬಯ್ಯುತ್ತಿದೆಯೋ ಅದಕ್ಕೇ ಗೊತ್ತು. ಅಮ್ಮಾ ನೀನು ಇಂಗ್ಲಿಷ್​ನಲ್ಲಾದರೂ ಸರಿಯಾಗಿ ಹೇಳು. ನೀ ಏನು ಹೇಳುತ್ತಿದ್ದೀ ಎನ್ನುವುದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾನೆ ಅಪ್ಪ. ಬಾಗಿ ಕೇಳುತ್ತಾನೆ, ಕೈಮುಗಿದು ಕೇಳುತ್ತಾನೆ, ಕೊನೆಗೆ ಅಪ್ಪಿಬಿಡುತ್ತಾನೆ. ಅಪ್ಪಿದ ಮೇಲೆ ಕೋಪ ಹಾಗೆಯೇ ಇರುವುದೆ?

ಇದನ್ನೂ ಓದಿ : ಸೀರೆ ಉಟ್ಟುಕೊಂಡು ಪ್ಯಾರಾಗ್ಲೈಡಿಂಗ್ ಮಾಡಿದ 80ರ ಅಜ್ಜಿಯ ವಿಡಿಯೋ ವೈರಲ್

8 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 5 ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಈ ವಿಡಿಯೋ ಇಷ್ಟವಾಗಿದೆ. ಅನೇಕರು ಈ ಮುದ್ದಾದ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ. ಮನಸ್ಸಿನಿಂದ ಈ ಮಾತು ಹೇಳುತ್ತಿದ್ದೇನೆ, ನಾನು ಐದು ದಿನಗಳಿಂದ ಯಾವುದೋ ತೊಂದರೆಯಲ್ಲಿದ್ದೆ. ಈ ವಿಡಿಯೋ ನೋಡಿದ ಮೇಲೆಯೇ ನಾನು ನಗುತ್ತಿರುವುದು, ಬಹಳ ಮುದ್ದಾಗಿದೆ. ಸಾಕಷ್ಟು ಸಮಾಧಾನವೆನ್ನಿಸುತ್ತಿದೆ ಈಗ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ಗೀಚಿ ಮಕ್ಕಳೇ ಗೀಚಿ; ಆಮೇಲೆ ಅಪ್ಪ ಮಾಡಿದ್ದೇನು? ನೋಡಿ ವೈರಲ್ ಆಗುತ್ತಿರುವ ವಿಡಿಯೋ

ಕೆಲವರು ಮಗು ಏನು ಹೇಳುತ್ತಿದೆ ಎನ್ನುವುದನ್ನು ಹೇಳಲು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಧನ್ಯವಾದ ಮಗು, ನನ್ನನ್ನು ನಗಿಸಿದ್ದಕ್ಕೆ, ನಿನಗೆ ಒಳ್ಳೆಯದಾಗಲಿ ಎಂದಿದ್ದಾರೆ. ಕಪಿಲ್​ ಶರ್ಮಾ ಷೋ ಫೇಲ್​! ಎಂದಿದ್ದಾರೆ ಒಬ್ಬರು. ಗೂಗಲ್​ ಕೂಡ ಅನುವಾದ ಮಾಡಲು ಸೋತಿದೆ ಎಂದಿದ್ದಾರೆ ಮತ್ತೊಬ್ಬರು.  ಆ್ಯಂಟಿ ಡಿಪ್ರೆಷನ್​ ಸ್ವೀಟ್ ವಿಡಿಯೋ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ ಕಟ್ಟಿಗೆ ಆಯಲು ಬಂದ ಪುಟ್ಟಿಯ ವಿಡಿಯೋ ವೈರಲ್

ಅವಳ ಭಾಷೆ ಬಹಳ ಮುದ್ದಾಗಿದೆ. ಎಂಟು ಸಲ ನೋಡಿದೆ ಈ ವಿಡಿಯೋ ಅನ್ನು. ಮತ್ತೆ ಆ ನಾಯಿ ಅಲ್ಲಿಲ್ಲಿ ಓಡಾಡುತ್ತಾ ಇನ್ನೂ ಮುದ್ದು ಬರಿಸುತ್ತಿದೆ. ಎಂಥ ಮುದ್ಧಾದ ಕುಟುಂಬವಿದು ಎಂದಿದ್ಧಾರೆ ಇನ್ನೊಬ್ಬರು. ಈ ಪುಟ್ಟಿ ಎಲ್ಲರನ್ನೂ ನಗಿಸಿಬಿಟ್ಟಳಲ್ಲ, ಮುದ್ದು ನಿನಗೆ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:28 am, Mon, 23 January 23