Viral Video: ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡಿ ಆಡುತ್ತಿರುವ ಮಕ್ಕಳು; ವಿಡಿಯೋ ವೈರಲ್
ಪುಟ್ಟ ಮಕ್ಕಳಿಬ್ಬರು ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡಿ ಆಡುತ್ತಾ ಅದರ ಮೇಲೆ ಸವಾರಿ ಮಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಮಕ್ಕಳಿಬ್ಬರು ಧೈರ್ಯ ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ಹೆಬ್ಬಾವು ವಿಷಕಾರಿಯಲ್ಲದಿದ್ದರೂ, ಅತ್ಯಂತ ಶಕ್ತಿಶಾಲಿ ಮತ್ತು ಅಪಾಯಕಾರಿ ಹಾವು. ಮನುಷ್ಯನನ್ನು ಜೀವಂತವಾಗಿ ನುಂಗಿ ಹಾಕುವ ಹೆಬ್ಬಾವು ಬಿಗಿಯಾಗಿ ಸುತ್ತಿಕೊಂಡು ಉಸಿರುಗಟ್ಟಿಸಿ ಕೊಂದು ಬಿಡುತ್ತದೆ. ಆದರೆ ಇಲ್ಲಿ ಪುಟ್ಟ ಮಕ್ಕಳಿಬ್ಬರು ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡಿ ಆಡುತ್ತಾ ಸವಾರಿ ಮಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸದ್ಯ ಒಂದು ಕ್ಷಣ ಈ ವಿಡಿಯೋ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.
@BapuDaLadla ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಮಕ್ಕಳಿಬ್ಬರು ಧೈರ್ಯ ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕೇವಲ ಮೂರು ದಿನಗಳಲ್ಲಿ 7ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ये अनाकोंडा सोच रहा होगा कहा फस गया यार 😂😂😝 pic.twitter.com/YIoJyX9aEG
— लाडला बापू का 🙏 (@BapuDaLadla) September 20, 2024
ಇದನ್ನೂ ಓದಿ: ಮಹಿಳೆ ಕಛೇರಿಗಳಲ್ಲಿ ಕೆಲಸ ಪಡೆಯಲು ಪತಿಯ ಅನುಮತಿ ಅಗತ್ಯ; 18 ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದೆ
ಮಿರರ್‌ನ ವರದಿಯ ಪ್ರಕಾರ, ಈ ವೀಡಿಯೊ ಇಂಡೋನೇಷ್ಯಾದಾಗಿದ್ದು, ಇದು ಸಾಕಷ್ಟು ಹಳೆಯ ವಿಡಿಯೋ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹೆಬ್ಬಾವು ‘ರೆಟಿಕ್ಯುಲೇಟೆಡ್ ಪೈಥಾನ್’ ಆಗಿದ್ದು, ಇದು ವಿಶ್ವದ ಎರಡನೇ ಅತಿ ದೊಡ್ಡ ಹಾವು. ಈ ಹಾವಿಗೆ ಮನುಷ್ಯನನ್ನು ಜೀವಂತವಾಗಿ ನುಂಗುವ ಶಕ್ತಿ ಇದೆ ವಿವರಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ