Viral Video: ಹೀಗೊಂದು ಟ್ವಿಸ್ಟ್​ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ

| Updated By: ಶ್ರೀದೇವಿ ಕಳಸದ

Updated on: Jun 01, 2023 | 10:31 AM

Creative Idea : ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ರೂಪುಗೊಳ್ಳುವ ಕಾಲ ಇದಾಗಿದೆ. ಅಪ್ಪಟ ಸೃಜನಶೀಲತೆಗೆ ಈ ವಿಡಿಯೋ ಉತ್ತಮ ಉದಾಹರಣೆ.

Viral Video: ಹೀಗೊಂದು ಟ್ವಿಸ್ಟ್​ ಈ ವಿಡಿಯೋಗಿರಬಹುದು ಎಂದು ನೀವು ಊಹಿಸಲಾರಿರಿ
ನಾಳೆ ಅತಿಥಿಗಳು ಬರುವವರಿದ್ದಾರೆ ಒಂದು ಲೀಟರ್ ಜಾಸ್ತಿ ಕೊಡಿ ಅಣ್ಣಾ
Follow us on

Scarcity : ಅಣ್ಣಾ, ನಾಳೆಯಿಂದ ಒಂದು ಲೀಟರ್ ಜಾಸ್ತಿ ಕೊಡಿ ಮನೆಗೆ ಅತಿಥಿಗಳು ಬರುವವರಿದ್ದಾರೆ ಎಂದು ಮನೆಯೊಡತಿ ಹೇಳಿದಾಗ, ಆಯ್ತು ಎಂದು ಹೇಳುತ್ತಾನೆ. ತುಂಬಿದ ಪಾತ್ರೆಯನ್ನು ತಂದು ಗ್ಯಾಸ್​ ಕಟ್ಟೆಯ ಮೇಲೆ ಇಡುವ ಹೊತ್ತಿಗೆ ಮಗು ಅಳುವ ಶಬ್ದ ಆಕೆ ಕೋಣೆಗೆ ಹೋಗುತ್ತಾಳೆ. ಕಿಟಕಿಯಿಂದ ಬಂದ ಬೆಕ್ಕು ಪಾತ್ರೆಯೊಳಗೆ ಇಣುಕುತ್ತದೆ. ಆದರೆ ಕುಡಿಯುವುದಿಲ್ಲ. ಯಾಕೆ? ಈ ವಿಡಿಯೋ ನೋಡಿ ಹಾಗಿದ್ದರೆ.

ನೀರನ್ನು ಉಳಿಸಿ ಇಲ್ಲವಾದರೆ ಭವಿಷ್ಯದಲ್ಲಿ ಇಂಥ ದಿನಗಳೂ ಬರಬಹದು ಎಂಬ ಹಿನ್ನೆಲೆ ಧ್ವನಿಯೊಂದಿಗೆ ಈ ಪುಟ್ಟ ವಿಡಿಯೋ ಸಂಪನ್ನಗೊಳ್ಳುತ್ತದೆ. ಕೊನೆಯ ತನಕ ನೀವು ಹಾಲು ಎಂದೇ ತಿಳಿದುಕೊಂಡಿರುತ್ತೀರಿ ಅಲ್ಲವೆ? ಮುಂದೊಂದು ದಿನ ಹಾಲು, ಪೆಟ್ರೋಲ್, ಎಣ್ಣೆ, ತುಪ್ಪದಂತೆ ನೀರನ್ನು ಬಳಸುವಂಥ ಕಷ್ಟವನ್ನು ತಂದುಕೊಳ್ಳದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎನ್ನವು ಸಂದೇಶವನ್ನು ಇದು ಸಾರುತ್ತದೆ.

ಇದನ್ನೂ ಓದಿ : Viral: ಎಲಾನ್​ ಮಸ್ಕ್​ ಭಾರತದ ಅಳಿಯನಾಗಲಿದ್ದಾರೆಯೇ?!

ಡಿಜಿಟಲ್​ ಕಂಟೆಂಟ್​ ಕ್ರಿಯೇಷನ್​ ಎನ್ನುವುದು ಈವತ್ತು ದೊಡ್ಡ ಉದ್ಯಮವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ನಿಮ್ಮ ತಲೆಗೆ, ಕಲೆಗೆ ಭಾರೀ ಬೇಡಿಕೆ ಇದೆ. ಎಷ್ಟು ಸೃಜನಾತ್ಮಕವಾಗಿ ಯೋಚಿಸುತ್ತೀರಿ, ಬರೆಯುತ್ತೀರಿ, ವಿಡಿಯೋ ಕಂಟೆಂಟ್​ ಸೃಷ್ಟಿಸುತ್ತೀರಿ ಎನ್ನುವುದರ ಮೇಲೆ ಭವಿಷ್ಯ ರೂಪುಗೊಳ್ಳುತ್ತದೆ. ಜಾಹೀರಾತು ಕಂಪೆನಿಗಳು, ಡಿಜಿಟಲ್​ ಏಜೆನ್ಸಿಗಳು ನಿಮ್ಮಂಥವರಿಗಾಗಿ ಕಾಯುತ್ತಿರುತ್ತವೆ.

ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ

ತುಂಬಾ ಬುದ್ಧಿವಂತಿಕೆಯಿಂದ ಕೂಡಿದ ಐಡಿಯಾ ಇದಾಗಿದೆ ಆದರೆ ಕೊನೆಯಲ್ಲಿ ಈ ಕಂಪೆನಿಯ ಹೆಸರು ಬರಬಾರದಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಕಂಪೆನಿಯ ಜಾಹೀರಾತು ಎಂದು ನೋಡದೆ ಇದನ್ನು ಸೃಜನಶೀಲವಾಗಿ ಮತ್ತು ಸಂದೇಶಾತ್ಮಕವಾಗಿ ನೋಡಿದರೆ ಸಾಕು ಎಂದೂ ಕೆಲವರು ಹೇಳುತ್ತಿದ್ದಾರೆ.

ಕೊನೇತನಕ ಇಂಥದೊಂದು ಟ್ವಿಸ್ಟ್​ ಈ ವಿಡಿಯೋಗೆ ಇರಬಹುದು ಎಂಬ ಕಿಂಚಿತ್​ ಸುಳಿವೂ ನಿಮಗಿರಲಿಲ್ಲ ಅಲ್ಲವೇ, ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:19 am, Thu, 1 June 23