ಫ್ಯಾಷನ್ ಎಂಬುದಕ್ಕೆ ಯಾವುದೇ ಇತಿ-ಮಿತಿಯಿಲ್ಲ. ಈಗಂತೂ ನಾವೇನೇ ಮಾಡಿದರೂ ಅದು ಫ್ಯಾಷನ್ ಎನಿಸಿಕೊಳ್ಳುತ್ತಿದೆ. ಬೇರೆಯವರಿಗಿಂತ ವಿಭಿನ್ನವಾಗಿ ಏನೇ ಮಾಡಿದರೂ ಅದು ಫ್ಯಾಷನ್. ಆದರೆ, ಕೆಲವೊಮ್ಮೆ ಈ ಕ್ರೇಜಿಯಾದ ಫ್ಯಾಷನ್ಗಳು ಅತಿರೇಕವಾದರೆ ನೋಡುವವರಿಗೆ ಕಿರಿಕಿರಿಯಾದೀತು, ಭಯವೂ ಆದೀತು! ಅದರಲ್ಲಿ ಭಯವಾಗುವಂಥದ್ದು ಏನಿದೆ? ಎಂಬ ಅನುಮಾನ ನಿಮಗಿದ್ದರೆ ಈ ಸುದ್ದಿಯನ್ನು ಓದಿ. ಫ್ಯಾಷನ್ ಹುಚ್ಚಿನಿಂದ ಹಾವನ್ನೇ ತಲೆಗೆ ಹೇರ್ಬ್ಯಾಂಡ್ನಂತೆ ಸುತ್ತಿಕೊಂಡು ಬಂದ ಯುವತಿಯನ್ನು ನೋಡಿ ಶಾಪಿಂಗ್ ಮಾಲ್ನಲ್ಲಿದ್ದವರು ಕಂಗಾಲಾಗಿ ಓಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಚಾರಕ್ಕಾಗಿ ಏನೇನೋ ಹುಚ್ಚಾಟಗಳನ್ನು ಆಡುವುದನ್ನು ನೋಡಿದ್ದೇವೆ. ಅದೇ ರೀತಿ ಶಾಪಿಂಗ್ ಮಾಲ್ಗೆ ಬಂದ ಯುವತಿಯೊಬ್ಬಳು ಆರಾಮಾಗಿ ತನ್ನ ಪಾಡಿಗೆ ತಾನು ಶಾಪಿಂಗ್ ಮಾಡುತ್ತಿದ್ದಳು. ಆದರೆ, ಆಕೆಯ ಹಿಂದಿನಿಂದ ಬಂದ ಕೆಲವರು ಆಕೆಯ ತಲೆಯನ್ನು ನೋಡಿ ವಾಪಾಸ್ ಓಡಿಹೋಗಿದ್ದಾರೆ. ಆಕೆಯನ್ನು ನೋಡಿ ಓಡುವಂಥದ್ದು ಏನಾಯಿತು? ಎಂಬ ಕುತೂಹಲದಿಂದ ಹತ್ತಿರ ಬಂದು ನೋಡಿದ ಉಳಿದವರು ಕೂಡ ಕಂಗಾಲಾಗಿದ್ದಾರೆ. ಆಕೆ ಹೇರ್ ಬ್ಯಾಂಡ್ ಬದಲು ಹಾವನ್ನೇ ತಲೆಗೆ ಕಟ್ಟಿಕೊಂಡು ಬಂದಿದ್ದಳು!
ಮೊದಲು ಕೆಲವರು ಇದನ್ನು ಹಾವಿನಂತೆ ಕಾಣುವ ಹೇರ್ಬ್ಯಾಂಡ್ ಎಂದುಕೊಂಡರು. ಆದರೆ, ಅದು ಆಚೀಚೆ ಅಲುಗಾಡುತ್ತಾ ಬುಸುಗುಡುವ ಸೌಂಡ್ ಮಾಡುತ್ತಿದ್ದಂತೆ ಆ ಹಾವನ್ನು ಅನ್ನು ತುರುಬಿಗೆ ಸುತ್ತಿಕೊಂಡು ಬಂದಿದ್ದ ಆಕೆಯನ್ನು ನೋಡಿ ಶಾಪಿಂಗ್ ಮಾಲ್ನಲ್ಲಿದ್ದ ಕೆಲವರು ಓಡಿ ಹೋಗಿದ್ದಾರೆ. ಇನ್ನು ಕೆಲವರು ಅದನ್ನು ನೋಡಿ ಖುಷಿಯಿಂದ ಫೋಟೋ, ವಿಡಿಯೋ ತೆಗೆದುಕೊಂಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ. ಈ ಸ್ನೇಕ್ ಹೇರ್ ಬ್ಯಾಂಡ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: Viral Video: ಮೊಬೈಲ್ ಕಿತ್ತುಕೊಂಡು ಹಾರಿಹೋಯ್ತು ಗಿಳಿ; ಆಮೇಲಾಗಿದ್ದು ಊಹೆಗೂ ನಿಲುಕದ್ದು!
Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ
(woman came to the shopping Mall with a snake Band around her head People Ran Away Shocking Video is here)