Video Viral: ಸೊಳ್ಳೆ ಬ್ಯಾಟ್​ ಬಳಸಿ ಬ್ರೆಡ್ ಟೋಸ್ಟ್‌ ಮಾಡಿದ ಮಹಿಳೆ; ವಿಡಿಯೋ ವೈರಲ್​

|

Updated on: May 10, 2024 | 1:02 PM

ವಿಡಿಯೋದಲ್ಲಿ ಮಹಿಳೆ ಸೊಳ್ಳೆ ಬ್ಯಾಟ್​​ನಲ್ಲಿ ಬ್ರೆಡ್​​ನ ಎರಡು ಬದಿಗಳನ್ನು ರೋಸ್ಟ್​​ ಮಾಡುತ್ತಿರುವುದನ್ನು ಕಾಣಬಹುದು. ಕೆಲ ಹೊತ್ತಿನ ಬಳಿಕ ಬ್ರೆಡ್ ಟೋಸ್ಟ್‌ ರೆಡಿಯಾಗಿರುವುದನ್ನು ಕಾಣಬಹುದು. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಹಾಸ್ಯಸ್ಪದವಾಗಿ ಕಾಮೆಂಟ್​​ ಮಾಡಿದ್ದಾರೆ.

Video Viral: ಸೊಳ್ಳೆ ಬ್ಯಾಟ್​ ಬಳಸಿ ಬ್ರೆಡ್ ಟೋಸ್ಟ್‌ ಮಾಡಿದ ಮಹಿಳೆ; ವಿಡಿಯೋ ವೈರಲ್​
ಸೊಳ್ಳೆ ಬ್ಯಾಟ್​ ಬಳಸಿ ಬ್ರೆಡ್ ಟೋಸ್ಟ್‌ ಮಾಡಿದ ಮಹಿಳೆ
Follow us on

ಬಿಸಿಲಿನ ತಾಪ ತುಸು ಕಡಿಮೆಯಾಗಿ ಮಳೆ ಪ್ರಾರಂಭವಾಗಿದೆ. ಇದರ ಜೊತೆಗೆ ಸೊಳ್ಳೆ ಮತ್ತಿತರ ಕೀಟಗಳ ಕಾಟ ಗಣನೀಯವಾಗಿ ಹೆಚ್ಚಿದೆ. ಸಾಮಾನ್ಯವಾಗಿ ಸೊಳ್ಳೆ ಕಾಟ ತಡೆಯಲು ಸೊಳ್ಳೆ ಬ್ಯಾಟ್​​ಗಳನ್ನು ಬಳಸುವುದುಂಟು. ಆದರೆ ಇಲ್ಲೊಬ್ಬಳು ಮಹಿಳೆ ಸೊಳ್ಳೆ ಬ್ಯಾಟ್​​​​​ ಬಳಸಿ ಬ್ರೆಡ್ ಟೋಸ್ಟ್‌ ಮಾಡಿದ್ದಾಳೆ. ಈಲೆ ಬ್ರೆಡ್ ಟೋಸ್ಟ್‌ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​ ಮಾಡಿರುವುದನ್ನು ಕಾಣಬಹುದು.

@tulika_world_official ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಏಪ್ರಿಲ್​​ 28ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಇಲ್ಲಿಯವರೆಗೆ 10ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. 8ಸಾವಿರಕ್ಕೂ ಹೆಚ್ಚಿನ ನೆಟ್ಟಿಗರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿಮ್ಮನ್ನು ಈ ರೀತಿ ನೋಡೋಕೆ ತುಂಬಾ ನೋವಾಗುತ್ತೇ, ದಯವಿಟ್ಟು RCBಗೆ ಬಂದ್ಬಿಡಿ ಕೆ.ಎಲ್‌ ರಾಹುಲ್​​ಗೆ ಅಭಿಮಾನಿಗಳ ಮನವಿ

ವಿಡಿಯೋದಲ್ಲಿ ಮಹಿಳೆ ಸೊಳ್ಳೆ ಬ್ಯಾಟ್​​ನಲ್ಲಿ ಬ್ರೆಡ್​​ನ ಎರಡು ಬದಿಗಳನ್ನು ರೋಸ್ಟ್​​ ಮಾಡುತ್ತಿರುವುದನ್ನು ಕಾಣಬಹುದು. ಕೆಲ ಹೊತ್ತಿನ ಬಳಿಕ ಬ್ರೆಡ್ ಟೋಸ್ಟ್‌ ರೆಡಿಯಾಗಿರುವುದನ್ನು ಕಾಣಬಹುದು. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಹಾಸ್ಯಸ್ಪದವಾಗಿ ಕಾಮೆಂಟ್​​ ಮಾಡಿದ್ದಾರೆ. ಒಬ್ಬರು ಕಾಮೆಂಟ್​​ನಲ್ಲಿ ‘ಎಡಿಟ್​ ಮಾಡಿರೋ ವಿಡಿಯೋ’ ಎಂದು ಬರೆದರೆ ಮತ್ತೊಬ್ಬರು ‘ಚೈನಿಸ್​​ ಬ್ರೆಡ್​​ ಟೋಸ್ಟ್​​’ ಎಂದು ಬರೆದಿದ್ದಾರೆ.

ಮತ್ತಷ್ಟು  ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ