ಜ್ಯೋತಿ ರೈ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ವೈರಲ್, ಆಕ್ರೋಶಗೊಂಡ ನಟಿ
ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ನಟಿ ಜ್ಯೋತಿ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದು, ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣ ದೇಶದಾದ್ಯಂತ ಚರ್ಚೆಯಾಗುತ್ತಿರುವಾಗಲೇ ಕೆಲವು ಕಿಡಿಗೇಡಿಗಳು ನಟಿ ಜ್ಯೋತಿ ರೈರದ್ದು ಎನ್ನಲಾದ ಕೆಲವು ಅಶ್ಲೀಲ ವಿಡಿಯೋ, ಚಿತ್ರಗಳನ್ನು ವೈರಲ್ ಮಾಡುತ್ತಿದ್ದಾರೆ. ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿವೆ. ಇದೀಗ ನಟಿ ಜ್ಯೋತಿ ರೈ ಈ ಬಗ್ಗೆ ಮೌನ ಮುರಿದಿದ್ದು, ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಅಸಮಾಧಾನ ಹೊರಹಾಕಿದ್ದಾರೆ.
ಕನ್ನಡದ ನಟಿ ಜ್ಯೋತಿ ರೈ ತೆಲುಗು, ತಮಿಳು ಚಿತ್ರರಂಗ ಹಾಗೂ ಟಿವಿ ಲೋಕದಲ್ಲಿ ಜನಪ್ರಿಯರು. ಇನ್ಸ್ಟಾಗ್ರಾಂನಲ್ಲಿ ಸಹ ತಮ್ಮ ಮಾದಕ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಅವರದ್ದೆನ್ನಲಾದ ಕೆಲವು ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳು ವೈರಲ್ ಆಗಿವೆ. ಈ ಬಗ್ಗೆ ಮಾತನಾಡಿರುವ ಜ್ಯೋತಿ ರೈ, ತಮ್ಮ ನಕಲಿ ವಿಡಿಯೋ ಹಾಗೂ ಚಿತ್ರಗಳನ್ನು ಹರಿಬಿಡುವ ಮೂಲಕ ತಮ್ಮ ಮಾನಹಾನಿಗೆ ಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಟ್ವಿಟ್ಟರ್ನಲ್ಲಿ ಎಡಿಟ್ ಬೈ ಅಭಿ ಹೆಸರಿನ ಖಾತೆಯಲ್ಲಿ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಚಿತ್ರಗಳು ಹಾಗೂ ವಿಡಿಯೋ ಅಪ್ಲೋಡ್ ಆಗಿತ್ತು. ತಮ್ಮ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿದರೆ ಪೂರ್ಣ ವಿಡಿಯೋ ಬಿಡುಗಡೆ ಮಾಡುವುದಾಗಿಯೂ ಆ ಖಾತೆಯಿಂದ ಸಂದೇಶ ಹಂಚಿಕೊಳ್ಳಲಾಗಿತ್ತು. ಆದರೆ ಆ ಬಳಿಕ ವಿಡಿಯೋ ಹಾಗೂ ಚಿತ್ರಗಳನ್ನು ಡಿಲೀಟ್ ಮಾಡಲಾಗಿದೆ. ಆದರೆ ಅಷ್ಟರಲ್ಲಾಗಲೆ ಹಲವರು ವಿಡಿಯೋ, ಚಿತ್ರಗಳನ್ನು ಡೌನ್ಲೋಡ್ ಮಾಡಿ ವೈರಲ್ ಮಾಡಿಬಿಟ್ಟಿದ್ದಾರೆ.
ಇದನ್ನೂ ಓದಿ:ಹ್ಯಾಕರ್ಗಳಿಂದಾಗಿ ರಾತ್ರಿ ನಿದ್ದೆಯಿಲ್ಲದಂತಾಗಿದೆ: ಆತಂಕ ಹೊರ ಹಾಕಿದ ನಟಿ
ಘಟನೆ ಬಗ್ಗೆ ದೂರು ನೀಡಿರುವ ನಟಿ ಜ್ಯೋತಿ ರೈ, ‘ಸತತವಾಗಿ ಸಂದೇಶಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ದಯವಿಟ್ಟು ಇಂಥಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ನನ್ನ ಹಾಗೂ ನನ್ನ ಕುಟುಂಬದ ಘನತೆಗೆ ಧಕ್ಕೆಯಾಗುತ್ತಿದೆ. ಒಂದೊಮ್ಮೆ ನೀವು ಶೀಘ್ರವೇ ಕ್ರಮ ಜರುಗಿಸದಿದ್ದರೆ ಇದು ಇನ್ನೂ ಮುಂದುವರೆಯುವ ಸಾಧ್ಯತೆ ಇದ್ದು, ಸರಿಪಡಿಸಲಾಗದಷ್ಟು ಸಮಸ್ಯೆಯನ್ನು ತಂದೊಡ್ಡಬಹುದಾಗಿದೆ’ ಎಂದಿದ್ದಾರೆ.
ನಟಿ ಜ್ಯೋತಿ ರೈ ಇನ್ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಚಿತ್ರಗಳನ್ನು ಆಗಾಗ್ಗೆ ಅಪ್ಲೋಡ್ ಮಾಡುತ್ತಿರುತ್ತಾರೆ. ಜೊತೆಗೆ ನಿರ್ದೇಶಕ ಸುಕುಪುವರಾಜ್ ಅವರೊಟ್ಟಿಗೆ ಆಪ್ತವಾಗಿರುವ ಚಿತ್ರಗಳನ್ನು ಸಹ ಅಪ್ಲೋಡ್ ಮಾಡುತ್ತಿರುತ್ತಾರೆ. ಟ್ವಿಟ್ಟರ್ನ ಎಡಿಟ್ ಬೈ ಅಭಿ ಹೆಸರಿನ ಖಾತೆಯ ಬಳಕೆದಾರ, ತಾನು ಜ್ಯೋತಿ ಹಾಗೂ ಸುಕುಪುವರಾಜ್ ಖಾಸಗಿ ವಿಡಿಯೋ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ. ಆದರೆ ಜ್ಯೋತಿ ರೈ ಅವರದ್ದೆನ್ನಲಾದ ಖಾಸಗಿ ವಿಡಿಯೋ, ಚಿತ್ರಗಳ ಬಗ್ಗೆ ಆಕ್ಷೇಪಗಳು ಕೇಳಿ ಬರುತ್ತಿದ್ದಂತೆ ಆ ಚಿತ್ರಗಳು ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ