ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೂಕ ಪ್ರಾಣಿ ಎಂದು ಅವುಗಳ ಮುಂದೆ ಮನಬಂದಂತೆ ಡಾನ್ಸ್ ಮಾಡಿದರೆ ಅವುಗಳಿಗೂ ಅಸಹ್ಯವಾಗಿ ದಾಳಿ ನಡೆಸುತ್ತವೆ. ಈ ಹಿಂದೆ ಯುವತಿಯೊಬ್ಬಳು ಹಸುವಿನ ಮುಂದೆ ಡಾನ್ಸ್ ಮಾಡುತ್ತಿದ್ದಾಗ ಅದು ಹಾಯಲು ಬಂದಿರುವ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ಈಗ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿದರೆ ಆತ ಬೆಡ್ ಮೇಲೆ ಮಲಗಿರುವ ಸಾಧ್ಯತೆಯೂ ಇದೆ ಅನ್ನಿಸುತ್ತದೆ. ಯುವಕನೊಬ್ಬ ಹಸು ಇದ್ದಲ್ಲಿ ಬಂದು ಡಾನ್ಸ್ ಮಾಡಲು ಮುಂದಾದಾಗ ಆ ಹಸು ಯುವಕನ ದೇಹದ ಮಧ್ಯಭಾಗಗಕ್ಕೇ ಬಂದು ಗುದ್ದುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
ವಿಡಿಯೋದಲ್ಲಿ ಇರುವಂತೆ, ಯುವಕನೊಬ್ಬ ಶರ್ಟ್ ತೆಗೆದಿಟ್ಟು ಕೇವಲ ಚಡ್ಡಿಯಲ್ಲಿ ಹಸು ಇದ್ದಲ್ಲಿಗೆ ಬಂದು ಡಾನ್ಸ್ ಮಾಡಲು ಮುಂದಾಗುತ್ತಾನೆ. ಮುಖಕ್ಕೆ ಕೈಗಳನ್ನು ಅಡ್ಡ ಹಿಡಿದು ಸೊಂಟ ತಿರುಗಿಸುತ್ತಾನೆ. ಈ ವೇಳೆ ಹಸುವಿಗೆ ಎಷ್ಟು ಕೋಪ ಬಂದಿದೆ ಎಂದರೆ ಕೊಂಚ ಮುಂದೆ ಹೋದ ಹಸು ತಿರುಗಿ ಬಂದು ಯುವಕನ ಹೊಟ್ಟೆಗೆ ಬಲವಾಗಿ ಗುದ್ದಿದೆ.
ಯುವಕನ ಹೊಟ್ಟೆಗೆ ಗುದ್ದುವ ಹಸುವಿನ ವಿಡಿಯೋವನ್ನು ಮೀಮ್ ಮಾಡಿ ಭುಟ್ನಿ_ಕೆ_ಮಿಮ್ಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜು.8ಕ್ಕೆ ಹಂಚಿಕೊಂಡ ಈ ವಿಡಿಯೋ ಈವರೆಗೆ 87ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಹಾಸ್ಯವಾಗಿ ಕಾಮೆಂಟ್ಗಳನ್ನು ಮಾಡುತ್ತಿದ್ದು, ನಗುವ ಎಮೋಜಿಗಳನ್ನು ಕೂಡ ಕಳುಹಿಸುತ್ತಿದ್ದಾರೆ. ಅದಾಗ್ಯೂ ಕೆಲವರು ಆ ಯುವಕ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದರು.
ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:20 pm, Mon, 15 August 22