Viral Video: ‘ನನ್ನ ಮಕ್ಕಳಿಗೆ ಉಣ್ಣಿಸಿದ್ದಕ್ಕೆ ಧನ್ಯವಾದ’ ಮಹಿಳೆಗೆ ಕೃತಜ್ಞತೆ ಸಲ್ಲಿಸಿದ ನಾಯಿ

|

Updated on: Nov 04, 2023 | 2:55 PM

Dog : ಈಗಿನ ದಿನಮಾನಗಳಲ್ಲಿ ಉಪಕಾರವನ್ನು ಸ್ಮರಿಸುವ ಅಥವಾ ಕೃತಜ್ಞತೆ ಸಲ್ಲಿಸುವ ಗುಣ ಮನುಷ್ಯರಲ್ಲಿ ಎಷ್ಟಿದೆ ಎನ್ನುವುದು ನಿಮಗೆ ಗೊತ್ತೇ ಇದೆ. ಆದರೆ ನಾಯಿಗಳಲ್ಲಿಯೂ ಇದು ಇದೆ ಎನ್ನುವ ವಿಷಯ ಗೊತ್ತಿತ್ತೇ? ಈ ವಿಡಿಯೋ ನೋಡಿದ ನಿಮಗೆ ಇದು ಅನುಭವಕ್ಕೆ ಬರುತ್ತದೆ. ಹೃದಯಸ್ಪರ್ಶಿಯಾದ ಈ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗುತ್ತಿದ್ದಾರೆ.

Viral Video: ನನ್ನ ಮಕ್ಕಳಿಗೆ ಉಣ್ಣಿಸಿದ್ದಕ್ಕೆ ಧನ್ಯವಾದ ಮಹಿಳೆಗೆ ಕೃತಜ್ಞತೆ ಸಲ್ಲಿಸಿದ ನಾಯಿ
ತನ್ನ ಮರಿಗಳಿಗೆ ಆಹಾರ ನೀಡಿದ್ದಕ್ಕೆ ಮಹಿಳೆಗೆ ಕೃತಜ್ಞತೆ ಹೇಳುತ್ತಿರುವ ನಾಯಿ
Follow us on

Dog Lover: ಮಾತನಾಡಲು ಬರುವುದಿಲ್ಲ ಎನ್ನುವುದಷ್ಟೇ. ಆದರೆ ಮನುಷ್ಯನಿಗಿಂತಲೂ ಸೂಕ್ಷ್ಮಗ್ರಾಹಿ ಮತ್ತು ಸೂಕ್ಷ್ಮ ಮನಸ್ಸುಳ್ಳ ಪ್ರಾಣಿ ನಾಯಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಇಲ್ಲಿ ನಾಯಿಮರಿಗಳಿಗೆ ಪೋಷಕಿ ಊಟಕ್ಕೆ ಕೊಡುತ್ತಾಳೆ. ಅದನ್ನು ನೋಡಿದ ಅಮ್ಮನಾಯಿ ಆಕೆಗೆ ಕೃತಜ್ಞತೆ ಹೇಳುವ ಪರಿ ಯಾರ ಮನಸ್ಸನ್ನೂ ಕಲಕುವಂತಿದೆ. ನಾಯಿಯಲ್ಲಿರುವ ಉಪಕಾರ ಮನೋಭಾವ ಎಂದಿಗೂ ಮನುಷ್ಯನಿಗೆ ಬರಲು ಸಾಧ್ಯವೇ ಇಲ್ಲ. ಅದಕ್ಕೇ ನಾನು ಮನುಷ್ಯರಿಗಿಂತ ನಾಯಿಯನ್ನೇ ಹೆಚ್ಚು ಪ್ರೀತಿಸುತ್ತೇವೆ (Love). ಎಲ್ಲ ಪ್ರಾಣಿಗಳಿಗಿಂತಲೂ ಹೆಚ್ಚು ಇಷ್ಟಪಡುವುದು ನಾಯಿಯನ್ನೇ ಎನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ಇದು ಪಾಸ್​ಪೋರ್ಟ? ಫೋನ್​ ನಂಬರ್​​, ಲೆಕ್ಕಗಿಕ್ಕ ನೋಡಿ ದಿಗ್ಭ್ರಾಂತನಾದ ಅಧಿಕಾರಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನವೆಂಬರ್ 3ರಂದು X ನಲ್ಲಿ ಹಂಚಿಕೊಂಡ ಈ ವಿಡಿಯೋವನ್ನು ಈತನಕ 7.8 ಮಿಲಿಯನ್​ ಜನರು ನೋಡಿದ್ದಾರೆ.  ಸುಮಾರು 1.2 ಲಕ್ಷ ಜನರು ಲೈಕ್ ಮಾಡಿದ್ದಾರೆ. 8,000ಕ್ಕಿಂತಲೂ ಹೆಚ್ಚು ಜನರು ರೀಪೋಸ್ಟ್ ಮಾಡಿದ್ದಾರೆ. 6,00ಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

ಇಲ್ಲಿದೆ ಅಮ್ಮನಾಯಿಯ ವಿಡಿಯೋ

ನಾನು ಮೊದಲ ಸಲ ನಾಯಿಯ ಇಂಥ ವರ್ತನೆಯನ್ನು ನೋಡುತ್ತಿದ್ದೇನೆ, ಈತನಕ ನಾಯಿಗಳು ಹೀಗೆ ಕೃತಜ್ಞತೆ ಸಲ್ಲಿಸಬಲ್ಲವು ಎಂಬ ವಿಷಯವೇ ಗೊತ್ತಿರಲಿಲ್ಲ ಎಂದಿದ್ದಾರೆ ಒಬ್ಬರು. ಜಗತ್ತಿನಲ್ಲಿ ಇದು ಅತ್ಯಂತ ಸುಂದರವಾದ ಭಾವನೆ ಎಂದಿದ್ದಾರೆ ಇನ್ನೊಬ್ಬರು. ಈ ನಾಯಿಗೆ ಒಳ್ಳೆಯ ತರಬೇತಿ ನೀಡಿದ್ದಾರೆ ಎಂದಿದ್ದಾರೆ ಮತ್ತೊಬ್ಬರು. ಇಂದು ನೋಡಿದ ಅತ್ಯಂತ ಆಪ್ತ ಮತ್ತು ಮಧುರವಾದ ವಿಡಿಯೋ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral: ಹೆಂಡತಿಯಲ್ಲಿ ತಾಯಿಯನ್ನು ಕಾಣಬೇಕೆಂದುಕೊಂಡಿರುವ ಹುಡುಗರೇ ಇದನ್ನು ಓದಿ

ನಾಯಿಗಳು ಬುದ್ಧಿವಂತ ಎನ್ನುವುದು ಇದಕ್ಕೇ ಎಂದಿದ್ದಾರೆ ಒಬ್ಬರು. ನಾಯಿಗಳಿಗೆ ಮನುಷ್ಯರಿಗಿಂತ ಜಾಸ್ತಿ ಪ್ರೀತಿ ಕೊಡಬೇಕು ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿ ನನಗೆ ಅಳು ಬರುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಪ್ರಾಣಿಗಳಿಗೆ ಸಹಾಯ ಮಾಡುವುದು ಅತ್ಯಮೂಲ್ಯ ಕೆಲಸ ಎಂದಿದ್ದಾರೆ ಇನ್ನೊಬ್ಬರು. ಪ್ರಾಣಿಗಳು ಕೂಡ ಹೀಗೆ ಕೃತಜ್ಞತೆ ವ್ಯಕ್ತಪಡಿಸುತ್ತವೆ ಎನ್ನುವುದನ್ನು ನೋಡುವುದೇ ಸೋಜಿಗ ಎಂದಿದ್ದಾರೆ ಮಗದೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ