
ಈಗೀಗ ಜನ ಮದುವೆ ಸಮಾರಂಭಗಳನ್ನು ಬಲು ಜೋರಾಗಿ ಮಾಡುವುದರ ಜೊತೆಗೆ ವಿವಾಹ ಆಮಂತ್ರಣ ಪತ್ರಿಕೆಗಳನ್ನು ಕೂಡಾ ಬಹಳ ವಿಶೇಷವಾಗಿ ಪ್ರಿಂಟ್ ಮಾಡಿಸುತ್ತಾರೆ. ಕೆಲವರು ದುಬಾರಿ ಬೆಲೆಯ ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿದರೆ, ಇನ್ನೂ ಕೆಲವರು ಪರಿಸರ ಕಾಳಜಿ, ಮತದಾನದ ಬಗ್ಗೆ ಅರಿವು ಮೂಡಿಸುವಂತಹ, ಆಧಾರ್ ಕಾರ್ಡ್ ನಂತಿರುವ ವಿಶಿಷ್ಟ ರೀತಿಯ ಆಮಂತ್ರಣ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸುತ್ತಾರೆ. ಇಂತಹ ಸಾಕಷ್ಟು ಯೂನಿಕ್ ಲಗ್ನ ಪತ್ರಿಕೆಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಫೋಟೋವೊಂದು ವೈರಲ್ ಆಗಿದ್ದು, ಮನೆಯವರು ಲಗ್ನ ಪತ್ರಿಕೆಯಲ್ಲಿ ತಮ್ಮ ಸುಖಾಗಮನವನ್ನು ಬಯಸುವವರು ಎಂದು ಮೃತ ಕುಟುಂಬ ಸದಸ್ಯರ ಹೆಸರನ್ನು ಪ್ರಿಂಟ್ ಮಾಡಿಸಿದ್ದಾರೆ. ಲಗ್ನ ಪತ್ರಿಕೆಯಲ್ಲಿ ಮೃತರ ಹೆಸರನ್ನು ಕಂಡು ನೋಡುಗರು ಫುಲ್ ಶಾಕ್ ಆಗಿದ್ದಾರೆ.
ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ತಮ್ಮ ಸುಖಾಗಮನವನ್ನು ಬಯಸುವವರು ಎಂದು ಮನೆಯ ಸದಸ್ಯರ ಹೆಸರನ್ನು ಪ್ರಿಂಟ್ ಮಾಡಿಸುತ್ತಾರೆ. ಆದ್ರೆ ಇಲ್ಲೊಂದು ಮದುವೆ ಪತ್ರಿಕೆಯಲ್ಲಿ ಸುಖಾಗಮನವನ್ನು ಬಯಸುವವರು ಎಂದು ಮೃತ ಕುಟುಂಬ ಸದಸ್ಯರ ಹೆಸರನ್ನು ಬರೆಸಿದ್ದಾರೆ. ಹೌದು ತಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ ಎಂದು ಸತ್ತವರ ಹೆಸರನ್ನು ಪ್ರಿಂಟ್ ಮಾಡಿಸಿದ್ದಾರೆ.
ಫೈಕ್ ಅತೀಕ್ ಕಿದ್ವಾಯಿ (Faiq Ateeq Kidwai) ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ಕುರಿತ ಫೋಟೋವನ್ನು ಶೇರ್ ಮಾಡಲಾಗಿದ್ದು, “ಸತ್ತವರು ಕಾಯುತ್ತಿದ್ದರೆ ಸಹೋದರ ನಾನು ಮದುವೆಗೆ ಹೋಗುವುದಿಲ್ಲ” ಎಂದು ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಫೋಟೋದಲ್ಲಿ ನಿಮ್ಮ ಆಗಮನಕ್ಕಾಗಿ ಕಾಯುತ್ತಿರುವವರು ಎಂದು ದಿವಂಗತ ನೂರುಲ್ ಹಕ್, ಲೇಟ್ ಲಾಲು ಹಕ್, ಲೇಟ್ ಬಾಬು ಹಕ್, ಲೇಟ್ ಎಜಾಜ್ ಹಕ್ ಫಾರೂಕ್, ಮೊಹಮ್ಮದ್. ಇಕ್ಬಾಲ್, ಮೊ. ಲಿಯಾಕತ್ ಮೊಹಮ್ಮದ್ ಶೋಕೃತ್, ಮೊಹಮ್ಮದ್. ಫರ್ಹಾನ್, ಮೊಹಮ್ಮದ್. ಫೈಜಾನ್, ಮೊಹಮ್ಮದ್. ಅನಸ್, ಮೊಹಮ್ಮದ್. ಆಕಿಬ್, ತಾಯಿ. ತೌಸಿಫ್, ಅಬ್ಬಾಸ್, ಮೊಹಮ್ಮದ್ ಇನ್ನಿತರರ ಹೆಸರನ್ನು ಬರೆದಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮದುವೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ವೇಳೆ ಹೃದಯಾಘಾತ, ಯುವತಿ ಸಾವು
ನಾಲ್ಕು ದಿನಗಳ ಹಿಂದೆ ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ಕಾಮೆಂಟ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ತುಂಬಾ ತಮಾಷೆಯಾಗಿದೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಮದುವೆ ನಡೆಯುವ ಸ್ಥಳದ ಹೆಸರು ಸ್ಮಶಾನದ ಹೆಸರಿನಂತಿದೆ’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಪೋಸ್ಟ್ ನೋಡಿ ಫುಲ್ ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ