
ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳ (Extra marital affair) ಪ್ರಕರಣಗಳು ತೀರಾ ಹೆಚ್ಚಿವೆ. ಹೆಂಡ್ತಿ ಮಕ್ಕಳು ಅಂತ ಸುಂದರವಾದ ಸಂಸಾರವಿದ್ದರೂ, ಬೇರೊಂದು ಮಹಿಳೆಯೊಂದಿಗೆ ಸಂಬಂಧ ಹೊಂದಿರುವ, ಪರ ಪುರುಷನೊಂದಿಗೆ ವಿವಾಹಿತ ಮಹಿಳೆ ಅಕ್ರಮ ಸಂಬಂಧ ಇಟ್ಟುಕೊಂಡಂತಹ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ವಿಚಿತ್ರ ಏನೆಂದರೆ ಒಬ್ಬ ಯುವಕನ ಮೇಲೆ ಇಬ್ಬರು ಮಹಿಳೆಯರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಹೌದು ಒಂದೇ ಮನೆಯ ಇಬ್ಬರು ಸೊಸೆಯಂದಿರು ಪಕ್ಕದ ಮನೆಯ ಯುವಕನನ್ನು ಪ್ರೀತಿಸಿ, ಇದೀಗ ಅತ್ತೆ ಮಾವ, ಮಕ್ಳಿಗೆ ಚಹಾದಲ್ಲಿ ನಿದ್ರೆಯ ಮಾತ್ರೆ ಹಾಕಿಕೊಟ್ಟು ಈ ವಾರಗಿತ್ತಿಯರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾರೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಬಾಗ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲಿಡಾ ಗ್ರಾಮದಲ್ಲಿ ಸೋಮವಾರ ಅಂದರೆ ಸೆಪ್ಟೆಂಬರ್ 01 ರಂದು ಈ ವಿಚಿತ್ರ ಘಟನೆ ನಡೆದಿದ್ದು, ವಾರಗಿತ್ತಿಯರಿಬ್ಬರು ಪಕ್ಕದ ಮನೆಯ ಯುವಕನೊಂದಿಗೆ ಓಡಿ ಹೋಗಿದ್ದಾರೆ. ಈ ಇಬ್ಬರೂ ಮಹಿಳೆಯರು ಒಂದೇ ಯುವಕ ಪ್ರೀತಿಯಲ್ಲಿ ಬಿದ್ದಿದ್ದು, ಸೋಮವಾರ ಮನೆಯಲ್ಲಿದ್ದ ಅತ್ತೆ, ಮಾವ, ಮೂವರು ಮಕ್ಕಳಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟು, ಈ ವಾರಗಿತ್ತಿಯರಿಬ್ಬರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾರೆ.
ಮಲಿಡಾ ಗ್ರಾಮದ ಇಬ್ಬರು ಸಹೋದರರಾದ ಯಾಸಿನ್ ಶೇಖ್ ಮತ್ತು ಅನಿಸೂರ್ ಶೇಖ್‌ರ ಪತ್ನಿಯರಾದ ಕುಲ್ಚನ್ ಮಲ್ಲಿಕ್ ಮತ್ತು ನಜ್ಮಾ ಮಂಡಲ್ ಪಕ್ಕದ ಮನೆಯ ಯುವಕನೊಂದಿಗೆ ಓಡಿ ಹೋದವರು. ಅನಿಸೂರ್ ಅಲ್ಲೇ ಗ್ರಾಮದಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಯಾಸಿನ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಹೋದರರಿಬ್ಬರ ಪತ್ನಿಯರಿಗೆ ಪಕ್ಕದ ಮನೆಯ ಆರಿಫ್ ಮೊಲ್ಲಾ ಎಂಬಾತನ ಮೇಲೆ ಪ್ರೀತಿಯಾಗಿದೆ. ಈ ಇಬ್ಬರು ವಾರಗಿತ್ತಿಯರು ತಮ್ಮ ಪ್ರಿಯಕರನೊಂದಿಗೆ ಸೇರಿ ಅತ್ತೆ, ಮಾವ ಮತ್ತು ಮೂವರು ಮಕ್ಕಳಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟು ಮನೆಯಿಂದ ಓಡಿ ಹೋಗಿದ್ದಾರೆ.
ಅನಿಸೂರ್ ಗ್ಯಾರೇಜ್‌ನಿಂದ ಮನೆಗೆ ಹಿಂತಿರುಗಿದಾಗ ಅವರ ಪೋಷಕರು ಮತ್ತು ಮೂವರು ಹೆಣ್ಣುಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ತಕ್ಷಣ ಬಾಗ್ಡಾ ಗ್ರಾಮೀಣ ಆಸ್ಪತ್ರೆಗೆ ಸೇರಿಸಿದ್ದು, ಅವರಿಗೆ ಪ್ರಜ್ಞೆ ಬಂದ ನಂತರ ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದು, ಆ ಸಂದರ್ಭದಲ್ಲಿ ವಾರಗಿತ್ತಿಯರಿಬ್ಬರು ಪ್ರಿಯಕರನೊಂದಿಗೆ ಓಡಿ ಹೋದ ಘಟನೆಯ ಬಗ್ಗೆ ತಿಳಿದುಬಂದಿದೆ.
ಇದನ್ನೂ ಓದಿ: ಕರೆ ಮಾಡಿದಾಗ ಬ್ಯುಸಿ ಬಂದ ಲವ್ವರ್ ಫೋನ್; ಕೋಪದಲ್ಲಿ ಇಡೀ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪ್ರಿಯಕರ
ಈ ಮೂವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮಂಗಳವಾರ ಅನಿಸೂರ್ ಶೇಖ್ ಬಾಗ್ಡಾ ಪೊಲೀಸ್ ಠಾಣೆಗೆ ಲಿಖಿತ ದೂರು ದಾಖಲಿಸಿದ್ದಾರೆ. ಇನ್ನೊಂದು ಸಂಗತಿ ಏನಪ್ಪಾ ಅಂದ್ರೆ ವಾರಗಿತ್ತಿಯರೊಂದಿಗೆ ಓಡಿ ಹೋದ ಆರಿಫ್ ಕೂಡ ವಿವಾಹಿತ. ಆತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದರು. ಹೀಗಿದ್ದರೂ ಕೂಡಾ ಆತ ಒಂದೇ ಮನೆಯ ಇಬ್ಬರು ಸೊಸೆಯರೊಂದಿಗೆ ಪ್ರೀತಿಯಲ್ಲಿ ಬಿದ್ದು ಓಡಿ ಹೋಗಿದ್ದಾನೆ. ಈ ವಿಚಿತ್ರ ವಿವಾಹೇತರ ಸಂಬಂಧದ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ