Viral Video: ‘ಭಾರತೀಯ ವಾಹನೋದ್ಯಮದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಿಕ್ಕ ಪ್ರತಿಫಲ’ ಆನಂದ ಮಹೀಂದ್ರಾ

Car : ಕುಟುಂಬವೊಂದು ಷೋರೂಮ್​ನಲ್ಲಿ ಡ್ಯಾನ್ಸ್​ ಮಾಡಿ ಸಂಭ್ರಮಿಸಿದೆ. ಮಧ್ಯಮ ವರ್ಗದವರು ಕಾರು ಕೊಳ್ಳುವುದೆಂದರೆ ಸಾಹಸವೇ ಎಂದು ಅನೇಕರು. ಪ್ರತೀ ಸಂದರ್ಭವನ್ನೂ ಸಂಭ್ರಮಿಸುತ್ತೇವೆ ಅದಕ್ಕೇ ನಾವು ಭಾರತೀಯರು ಎಂದು ಕೆಲವರು.

Viral Video: ಭಾರತೀಯ ವಾಹನೋದ್ಯಮದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಿಕ್ಕ ಪ್ರತಿಫಲ ಆನಂದ ಮಹೀಂದ್ರಾ
ಕುಟುಂಬವೊಂದು ಹೊಸ ಕಾರು ಖರೀದಿಸಿದ ಸಂದರ್ಭದಲ್ಲಿ ಖುಷಿಯಿಂದ ನರ್ತಿಸುತ್ತಿರುವುದು
Edited By:

Updated on: May 20, 2023 | 3:51 PM

Mahindra : ಸ್ವಂತ ಕಾರನ್ನು ಹೊಂದುವುದು ಪ್ರತೀ ಕುಟುಂಬದ ಸಾಮಾನ್ಯವಾದ ಕನಸು. ಅದು ನನಸಾಗಬೇಕೆಂದರೆ ಕೆಲವರು ಅದೆಷ್ಟೋ ವರ್ಷಗಳನ್ನು ಸವೆಸಬೇಕಾಗುತ್ತದೆ. ಒಂದೊಮ್ಮೆ ಕಾರು ತಮ್ಮ ಮನೆಯಂಗಳಕ್ಕೆ ಬಂದು ನಿಲ್ಲುತ್ತದೆ ಎಂದಾದಾಗ ಆ ಖುಷಿ, ಅಚ್ಚರಿ ವರ್ಣಿಸಲಸಾಧ್ಯ. ಉದ್ಯಮಿ ಆನಂದ ಮಹೀಂದ್ರಾ ಹೃದಯಸ್ಪರ್ಶಿಯಾದ ಈ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ.

ಭಾರತೀಯ ವಾಹನೋದ್ಯಮದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಿಕ್ಕ ನಿಜವಾದ ಪ್ರತಿಫಲ ಮತ್ತು ಖುಷಿ ಎಂದು ಆನಂದ ಮಹೀಂದ್ರಾ ಟ್ವೀಟ್​ಗೆ ಒಕ್ಕಣೆ ಸೇರಿಸಿದ್ಧಾರೆ. ಈ ನಿಮ್ಮ ಕಾರು ಇನ್ನದು ಎಂದು ಷೋರೂಂ ಸಿಬ್ಬಂದಿ ಹೇಳುತ್ತಿದ್ದಂತೆ ಕುಟುಂಬದ ಸದಸ್ಯರೆಲ್ಲರೂ ಖುಷಿಯಿಂದ ಕಾರ್ ಷೋ ರೂಮ್​ನಲ್ಲಿ ಕುಣಿದು ಸಂಭ್ರಮಿಸಿದ್ದನ್ನು ನೆಟ್ಟಿಗರು ಮನಸಾರೆ ಅಭಿನಂದಿಸಿದ್ದಾರೆ.

ಇದನ್ನೂ ಓದಿ : RBI Withdraws 2000 Rupee Notes: ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಸಾಲು ಸಾಲು ಮೀಮ್​ಗಳು

ಇದು ಬರೀ ವಾಹನವಲ್ಲ, ಉಜ್ವಲ ಭವಿಷ್ಯದ ಪ್ರಯಾಣವನ್ನು ಇದು ಸೂಚಿಸುತ್ತದೆ ಎಂದು ಅನೇಕರು ಹೇಳಿದ್ದಾರೆ. ಭಾರತೀಯ ವಾಹನ ಉದ್ಯಮದ ಚೈತನ್ಯವನ್ನು ಇದು ಸಾಂಕೇತಿಸುತ್ತದೆ ಎಂದಿದ್ದಾರೆ ಕೆಲವರು. ಚಕ್ರ ಎನ್ನುವುದು ಗುರಿಯನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು. ಕೆಲ ಸಂಗತಿಗಳು ಜೀವನದಲ್ಲಿ ಪರಿಶುದ್ಧವಾದ ಖುಷಿಯನ್ನು ಹೊಮ್ಮಿಸುತ್ತವೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ನಾನ್​ ಕಲಿಯುಗದ ಕ್ಯಾಟ್​, ನಾ ಪೇಳ್ವಂತೆ ನೀ ಕೇಳ್​​ ಮಾನವಾ!

ಅನೇಕರು ತಾವು ಮೊದಲ ಸಲ ಕಾರು ಕೊಂಡಾಗಿನ ಅನುಭವದ ಎಳೆಗಳನ್ನು ಹಂಚಿಕೊಂಡಿದ್ದಾರೆ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರು ಕಾರು ಕೊಳ್ಳುವುದೆಂದರೆ ಅದೊಂದು ಸಾಹಸವೇ ಎಂದು ಅನೇಕರು ಹೇಳಿದ್ದಾರೆ. ನಾವು ಪ್ರತೀ ಸಂದರ್ಭವನ್ನೂ ಸಂಭ್ರಮಿಸುತ್ತೇವೆ ಅದಕ್ಕೇ ನಾವು ಭಾರತೀಯರು ಎಂದಿದ್ದಾರೆ ಒಬ್ಬರು. ಕಾಯುವಿಕೆಯ ಸಮಯ ಬಹಳ ದೀರ್ಘವಾಗಿದೆ ಸರ್​​, ಹಾಗಾಗಿ ಆನಂತರ ಸಂಭ್ರಮಿಸಲೇಬೇಕಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:48 pm, Sat, 20 May 23