ಪಾಕ್ ವಿರುದ್ಧ ನಡೆದ ಯುದ್ಧದ ವೇಳೆ ಭಾರತೀಯ ಸೇನೆ ಸಾವಿರಾರು ಕಾಂಡೋಮ್‌ ಖರೀದಿ ಮಾಡಿದ್ದು ಏಕೆ? ಇಲ್ಲಿದೆ ಅಸಲಿ ವಿಚಾರ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 28, 2024 | 5:16 PM

ದೇಶದ ರಕ್ಷಣೆ ಎಂದು ಬಂದಾಗ ಸಾವಿಗೂ ಅಂಜದೆ ದೇಶದ ರಕ್ಷಣೆಗಾಗಿ ಮೊದಲು ಮುನ್ನುಗ್ಗುವವರೇ ದೇಶ ಕಾಯುವ ಯೋಧರು. ನಮ್ಮ ಭಾರತೀಯ ಸೇನೆಯೂ ತನ್ನ ಶೌರ್ಯ ಹಾಗೂ ಪರಾಕ್ರಮದಿಂದಲೇ ಖ್ಯಾತಿಗಳಿಸಿದೆ. ನಮ್ಮ ಸೈನಿಕರು ಶತ್ರು ರಾಷ್ಟ್ರಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಂದು ಪಾಕಿಸ್ತಾನದ ಜೊತೆಗೆ ನಡೆದ ಯುದ್ಧದ ಸಮಯದಲ್ಲಿ ಭಾರತೀಯ ಸೇನೆ ಅಪಾರ ಪ್ರಮಾಣದಲ್ಲಿ ಕಾಂಡೋಮ್‌ಗಳನ್ನು ಆರ್ಡರ್ ಮಾಡಿಕೊಂಡಿತ್ತು. ಹಾಗಾದ್ರೆ ಅಂದು ಅಷ್ಟೊಂದು ಕಾಂಡೋಮ್ ಆರ್ಡರ್ ಮಾಡಿದ್ದು ಯಾಕೆ? ಇದರ ಹಿಂದಿನ ಕಾರಣಗಳೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಾಕ್ ವಿರುದ್ಧ ನಡೆದ ಯುದ್ಧದ ವೇಳೆ ಭಾರತೀಯ ಸೇನೆ ಸಾವಿರಾರು ಕಾಂಡೋಮ್‌ ಖರೀದಿ ಮಾಡಿದ್ದು ಏಕೆ? ಇಲ್ಲಿದೆ ಅಸಲಿ ವಿಚಾರ
ಸಾಂದರ್ಭಿಕ ಚಿತ್ರ
Follow us on

ನಾವು ದೇಶದೊಳಗೆ ನೆಮ್ಮದಿಯಿಂದ ಇರಲು ವೀರ ಯೋಧರ ಕೊಡುಗೆಯೂ ಅಪಾರವಾಗಿದೆ. ಶತ್ರು ರಾಷ್ಟ್ರಗಳು ದಾಳಿ ನಡೆಸಿದ ವೇಳೆ ಸಾವಿಗೂ ಅಂಜದೆ ಸೈನಿಕರು ಹೋರಾಡಿದ್ದಾರೆ. ಇನ್ನು ಭಾರತೀಯ ಸೇನೆಯುಯುದ್ಧ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ವಿಷಯದಲ್ಲಿಯೂ ವಿಶ್ವದ ನಾಲ್ಕನೇ ಸ್ಥಾನದಲ್ಲಿದೆ. ಶಕ್ತಿಯುತವಾದ ನಿಖರ ಅಗ್ನಿ ಮತ್ತು ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದೆ. ಶತ್ರು ರಾಷ್ಟ್ರಗಳನ್ನು ಹಿಮ್ಮೆಟ್ಟಿಸಿ ಭಾರತೀಯ ಸೇನೆಯು ತನ್ನ ಶೌರ್ಯ ಹಾಗೂ ಪರಾಕ್ರಮದಿಂದಲೇ ಖ್ಯಾತಿ ಪಡೆದುಕೊಂಡಿದೆ. ಆದರೆ, 1971 ರಲ್ಲಿ ನಡೆದ ಪಾಕಿಸ್ತಾನದೊಂದಿಗೆ ಯುದ್ಧದ ವೇಳೆ ಭಾರತೀಯ ಸೇನೆಯು ಹೆಚ್ಚಿನ ಸಂಖ್ಯೆಯ ಕಾಂಡೋಮ್‌ಗಳನ್ನು ಖರೀದಿಸಿ ಮಾಡಿತ್ತು. ಹಾಗಾದ್ರೆ ಭಾರತೀಯ ಸೇನೆಯೂ ದೊಡ್ಡ ಪ್ರಮಾಣದಲ್ಲಿ ಕಾಂಡೋಮ್ ಕೊಳ್ಳಲು ಕಾರಣವೇನು? ಎನ್ನುವ ಆಸಕ್ತಿದಾಯಕ ವಿಷಯವು ಇಲ್ಲಿದೆ.

1971ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯು ಹೆಚ್ಚಿನ ಸಂಖ್ಯೆಯ ಕಾಂಡೋಮ್‌ಗಳನ್ನು ಖರೀದಿಸಿತ್ತು. ಹೌದು, ಪಾಕ್ ಹಾಗೂ ಭಾರತದ ನಡುವೆ ಡಿಸೆಂಬರ್ 3ರಿಂದ ಡಿಸೆಂಬರ್ 16ರವರೆಗೆ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ಪಾಕಿಸ್ತಾನದ ಸೇನೆ ಭಾರತದ ವಾಯುನೆಲೆಯನ್ನು ಗುರಿಯಾಗಿಸಿತ್ತು. ಇತ್ತ ಭಾರತೀಯ ಸೇನೆಯು ತನ್ನ ಯುದ್ಧ ತಂತ್ರಗಾರಿಕೆಯಂತೆ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಲೇ ಇತ್ತು. ಅದಲ್ಲದೇ, ಭಾರತೀಯ ಸೇನೆ ಚಿತ್ತಗಾಂಗ್ ಬಂದರಿನ ಮೇಲೆ ದಾಳಿ ಮಾಡಲು ಮುಂದಾಗಿತ್ತು.

ಇದನ್ನೂ ಓದಿ: ವಧುವಿನ ಮನೆ ಮೇಲೆ ನೋಟಿನ ಮಳೆಗೈಯಲು ವಿಮಾನವನ್ನೇ ಬಾಡಿಗೆ ಪಡೆದ ವರನ ತಂದೆ, ವಿಡಿಯೋ ವೈರಲ್

ಭಾರತೀಯ ಸೇನೆಯು ಪಾಕಿಸ್ತಾನದ ದೋಣಿಗಳನ್ನು ಹಾಳುಮಾಡಲು ಯೋಜನೆಯನ್ನು ರೂಪಿಸಿತ್ತು. ಆದರೆ ಈ ಹಡಗುಗಳನ್ನು ಹಾಳು ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಈ ಯುದ್ಧದ ವೇಳೆ ಪಾಕ್ ಹಡಗುಗಳನ್ನು ಸ್ಪೋಟಿಸಲು ಕೆಳಗೆ ಲಿಂಪೆಟ್ ಮೈನ್ ಎಂಬ ವಸ್ತುವನ್ನು ಇರಿಸಬೇಕಾಗುತ್ತಿತ್ತು. ಈ ಲಿಂಪೆಟ್ ಮೈನ್ ವಸ್ತುವು ಕೇವಲ 30 ನಿಮಿಷದಲ್ಲಿಯೇ ತುಂಡಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಕಾಂಡೋಮ್ ಗಳನ್ನು ಖರೀದಿ ಮಾಡಲಾಗಿತ್ತು. ಲಿಂಪೆಟ್ ಮೈನ್ ಬದಲಾಗಿ ಕಾಂಡೋಮ್ ಇರಿಸಿ ಸ್ಪೋಟಿಸಲು ಮುಂದಾಯಿತು ಈ ಮೂಲಕ ಪಾಕಿಸ್ತಾನದ ಯುದ್ಧನೌಕೆಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಯಶಸ್ವಿಯಾಗಿತ್ತು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:14 pm, Sat, 28 December 24