Viral : ನಡುರಸ್ತೆಯಲ್ಲೇ ಪತಿಯ ಎದೆ ಮೇಲೆ ಕುಳಿತು ಹಿಗ್ಗಾಮುಗ್ಗ ಥಳಿಸಿದ ಪತ್ನಿ, ವಿಡಿಯೋ ವೈರಲ್

ಪತಿ ಪತ್ನಿಯರ ನಡುವೆ ಜಗಳ ಸರ್ವೇ ಸಾಮಾನ್ಯ. ಆದರೆ ಎಷ್ಟೋ ಸಲ ಈ ಜಗಳಗಳು ಅತೀರೇಕಕ್ಕೆ ತಿರುಗಿ ಬೀದಿಗೆ ಬಂದ ಘಟನೆಗಳು ಸಾಕಷ್ಟು ನಡೆದಿದೆ. ಇದೀಗ ಇಂತಹದೊಂದು ಘಟನೆಯೂ ನಡೆದಿದೆ. ಇದೀಗ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪತಿ ಪತ್ನಿಯರಿಬ್ಬರೂ ನಡುರಸ್ತೆಯಲ್ಲೇ ಗುದ್ದಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ.

Viral : ನಡುರಸ್ತೆಯಲ್ಲೇ ಪತಿಯ ಎದೆ ಮೇಲೆ ಕುಳಿತು ಹಿಗ್ಗಾಮುಗ್ಗ ಥಳಿಸಿದ ಪತ್ನಿ, ವಿಡಿಯೋ ವೈರಲ್
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Apr 16, 2025 | 11:51 AM

ಗಂಡ ಹೆಂಡಿರ ಜಗಳ (fight) ಉಂಡು ಮಲಗುವ ತನಕ ಎನ್ನುವ ಕಾಲವೊಂದಿತ್ತು. ಆದರೆ ಇದೀಗ ಏನಿದ್ದರೂ ಪತಿಪತ್ನಿಯರ ಜಗಳ ನಡುಬೀದಿಗೆ ಬಂದರೇನೇ ಸಮಾಧಾನ ಎನ್ನುವಂತಾಗಿದೆ. ಹೌದು, ಸಣ್ಣ ಪುಟ್ಟ ವಿಷಯವನ್ನೇ ದೊಡ್ಡದು ಮಾಡಿ ಜಗಳ ಮಾಡುವ ಅದೆಷ್ಟೋ ದಂಪತಿಗಳನ್ನು ನೋಡಿರಬಹುದು. ಹೌದು, ಸಣ್ಣ ಪುಟ್ಟ ಮನಸ್ತಾಪಗಳು ಆರಂಭವಾಗಿ ಮಾತಿಗೆ ಮಾತಿಗೆ ಬೆಳೆದು ಹೊಡೆದುಕೊಳ್ಳುವ ಹಂತಕ್ಕೂ ತಲುಪುದಿದೆ. ಇದೀಗ ವೈರಲ್ (viral) ಆಗಿರುವ ವಿಡಿಯೋದಲ್ಲಿ ದಂಪತಿ (couple) ಗಳಿಬ್ಬರು ನಡುರಸ್ತೆಯಲ್ಲೇ ಜಗಳಕ್ಕೆ ಇಳಿದಿದ್ದಾರೆ. ಈ ಜಗಳವು ಅತೀರೇಕಕ್ಕೆ ತಲುಪಿದ್ದು ಬಡಿದಾಡಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

Dr khatra ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪತಿ ಸ್ಕೂಟರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ಆ ಬಳಿಕ ಈ ದಂಪತಿಗಳ ನಡುವೆ ಬಿಗ್ ಫೈಟ್ ಶುರುವಾಗಿದೆ. ಪ್ರಾರಂಭದಲ್ಲಿ ಇಬ್ಬರ ಕೂದಲು ಹಿಡಿದು ಎಳೆದಾಡಿಕೊಳ್ಳುವ ಮೂಲಕ ಜಗಳ ಆರಂಭವಾಗಿದೆ. ಕೊನೆಗೆ ಈ ಜಗಳವು ಅತೀರೇಕಕ್ಕೆ ತಿರುಗಿದ್ದು, ಪತ್ನಿಯೂ ಗಂಡನನ್ನು ರಸ್ತೆಗೆ ತಳ್ಳಿದ್ದು ಆತನ ಎದೆಯ ಮೇಲೆ ಕುಳಿತು ಹಿಗ್ಗಾಮುಗ್ಗ ಥಳಿಸಲು ಪ್ರಾರಂಭಿಸಿದ್ದಾಳೆ. ಇಬ್ಬರ ಹೊಡೆದಾಟವು ಜೋರಾಗಿದ್ದು ತಾವು ರಸ್ತೆಯಲ್ಲಿದ್ದೇವೆ ಎನ್ನುವುದರ ಪರಿವೇ ಇಲ್ಲದೇ ಗುದ್ದಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ : ಅಣ್ಣನ ಫಸ್ಟ್​ನೈಟ್ ನೋಡಲು ರೂಮಿನಲ್ಲೇ ಅಡಗಿ ಕುಳಿತ ತಮ್ಮ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡುಕೊಂಡಿದ್ದು, ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ಈ ರೀತಿಯ ಜಗಳ ನೋಡಿ ಮನಸ್ಸಿಗೆ ಬೇಸರವಾಯಿತು. ಆ ಗಂಡನನ್ನು ದೇವರೇ ಕಾಪಾಡಬೇಕು ಎಂದಿದ್ದಾರೆ. ಮತ್ತೊಬ್ಬರು, ‘ಕಾಲ ಚಕ್ರ ವು ಒಂದೇ ರೀತಿ ಇರುವುದಿಲ್ಲ. ಪುರುಷರು ಒಂದು ಕಾಲದಲ್ಲಿ ಮಹಿಳೆಯರನ್ನೇ ತುಂಬಾ ಹಿಂಸಿಸುತ್ತಿದ್ದರು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ಈಗ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯದ ಜೊತೆಗೆ ಪುರುಷ ಹಾಗೂ ಮಕ್ಕಳ ಅಭಿವೃದ್ಧಿಗ ಸಚಿವಾಲಯ ರಚಿಸುವ ಆಗತ್ಯವಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಖೇಶ್ ಖನ್ನಾ ಅವರಿಗೆ ವಹಿಸಬೇಕು’ ಎಂದು ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ