ಮುದ್ದಾದ ಈ ಸಿಂಹದಮರಿ ನನಗೆ ಬೇಕು! ಕಾಡಿನಂಚಿನಲ್ಲಿ ಅರ್ಜಿ ಗುಜರಾಯಿಸುತ್ತಿದ್ದಾರೆ ನೆಟ್ಟಿಗರು

Wildlife Photography : ಆಹಾ ಎಂಥಾ ಟೈಮಿಂಗ್ಸ್​! ಫೋಟೋಗ್ರಾಫರ್ ಮತ್ತು ಸಿಂಹದ ಮರಿ ಒಂದೇ ಸಮಯಕ್ಕೆ ಪರಸ್ಪರ ನೋಡುವುದು ಎಂಥ ರೋಮಾಂಚಕಾರಿ ಅನುಭವವನ್ನು ನೀಡುತ್ತದೆ ಗೊತ್ತಾ? ನೋಡಿ ವಿಡಿಯೋ.

ಮುದ್ದಾದ ಈ ಸಿಂಹದಮರಿ ನನಗೆ ಬೇಕು! ಕಾಡಿನಂಚಿನಲ್ಲಿ ಅರ್ಜಿ ಗುಜರಾಯಿಸುತ್ತಿದ್ದಾರೆ ನೆಟ್ಟಿಗರು
ಫೋಟೋಗ್ರಾಫರ್​ನ ಒಡನಾಡಿಯಾದ ಸಿಂಹದ ಮರಿ
Updated By: ಶ್ರೀದೇವಿ ಕಳಸದ

Updated on: May 04, 2023 | 12:02 PM

Viral Video : ವನ್ಯಜೀವಿಗಳ ಛಾಯಾಗ್ರಹಣ ಎನ್ನುವುದು ಅತ್ಯಂತ ಸವಾಲಿನದು, ರೋಮಾಂಚಕವೂ ಹೇಗೋ ಅಪರೂಪಕ್ಕೆ ಅಷ್ಟೇ ಆಪ್ತ ಅನುಭವವನ್ನೂ ನೀಡುವಂಥದ್ದು; ಉಸಿರನ್ನು ಬಿಗಿಹಿಡಿದುಕೊಂಡಿದ್ದರೆ, ನಾಜೂಕಿನಿಂದ ವರ್ತಿಸುವುದು ಗೊತ್ತಿದ್ದರೆ, ಆಪತ್ತನ್ನು ಎದುರಿಸುವ ಸ್ಥೈರ್ಯವಿದ್ದರೆ ಕಾಡಿನ ಜೀವಸಂಪತ್ತನ್ನು ಅತ್ಯಂತ ಹತ್ತಿರದಿಂದ ನೋಡಲು ಸಾಧ್ಯವಿದೆ. ಅಲ್ಲಿಯ ಪ್ರಾಣಿ ಪಕ್ಷಿಗಳೊಂದಿಗೆ ಅನುಬಂಧ ಬೆಳೆಸುವುದೂ ಶಕ್ಯವಾಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ನೋಡಿ.

ಪುಟ್ಟ ಕುರ್ಚಿಯ ಮೇಲೆ ಎಷ್ಟು ನಿರಾಳವಾಗಿ ಕುಳಿತಿದೆ ನೋಡಿ ಈ ಸಿಂಹದ ಮರಿ. ಫೋಟೋಗ್ರಾಫರ್​ನಿಗೆ ಮುಖಾಮುಖಿಯಾಗುವ ಆ ಕ್ಷಣಗಳನ್ನು ನೋಡಿ. ಕ್ಯಾಮೆರಾ ಬ್ಯಾಗ್​ ಅನ್ನು ಜೋಪಾನವಾಗಿ ಹಿಡಿದುಕೊಂಡು ಕುಳಿತಿರುವ ಆ ಮುದ್ದಾದ ಪರಿ ನೋಡಿ.

ಇದನ್ನೂ ಓದಿ : ಹಾವು ಆಕಳಿಸಿದಾಗ;ಬೆಳಗ್ಗೆ ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ; ಎಂದ ನೆಟ್ಟಿಗ

ಈ ವಿಡಿಯೋ ನೋಡಿದ ಅನೇಕರು ಈ ಮುದ್ದಾದ ಮರಿ ನನಗೆ ಬೇಕು, ನನಗೆ ಬೇಕು ಎಂದು ಸಾಲುಗಟ್ಟಿದ್ದಾರೆ. ತಾಳ್ಮೆಯಿಂದ ಇದ್ದರೆ ಸಿಂಹದೊಂದಿಗೂ ಸ್ನೇಹ ಬೆಳೆಸಿಕೊಳ್ಳಬಹುದು ಎಂದಿದ್ದಾರೆ ಒಬ್ಬರು. ಪ್ರೀತಿಯಿಂದ ಎಂಥ ಕ್ರೂರಜೀವಿಯನ್ನೂ ಗೆಲ್ಲಬಹುದು ಎಂದಿದ್ದಾರೆ ಮತ್ತೊಬ್ಬರು. ಇದು ಮರಿ, ಹಾಗಾಗಿ ಇಷ್ಟೆಲ್ಲ ಸಾಧ್ಯವಾಗಿದೆ, ವಯಸ್ಕ ಸಿಂಹದೊಂದಿಗೆ ಹೀಗಿದ್ದು ನೋಡಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ನಾಯಿ ಕರುವಿನ ಬಾಂಧವ್ಯ; ಸ್ವಜಾತಿ ಸ್ನೇಹ ಸಹಜ ಆದರೆ

ಏನೇ ಆಗಲಿ ಈ ಫೋಟೋಗ್ರಾಫರ್​ ಅದೃಷ್ಟ ಇದು. ಎಲ್ಲರಿಗೂ ಇದು ಸಿಗುವುದಿಲ್ಲ. ಈ ವಿಡಿಯೋ ನೋಡಿ ನನಗಂತೂ ಮನಸ್ಸು ಪ್ರಫುಲ್ಲಗೊಂಡಿದೆ ಎಂದು ಮಗದೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ