ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ? ಹೊಸ ತಂತ್ರ ಕಂಡುಹಿಡಿದ ಮಹಿಳೆ

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳನ್ನು ಕಂಡಾಗ ನಮ್ಮ ಜನರು ಎಷ್ಟು ಬುದ್ಧಿವಂತರು ಎಂದೇನಿಸುತ್ತದೆ. ಕೆಲವೊಮ್ಮೆ ಈ ಬುದ್ಧಿವಂತಿಕೆ ಕಂಡು ನಗಬೇಕೋ ಅಳಬೇಕೋ ಎಂದು ತಿಳಿಯುವುದಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ತಡೆಯಲು ಮಹಿಳೆಯೂ ಹೊಸ ಉಪಾಯವನ್ನು ಕಂಡುಕೊಂಡಿದ್ದು, ಮಹಿಳೆಯ ಅತೀ ಬುದ್ಧಿವಂತಿಕೆ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ? ಹೊಸ ತಂತ್ರ ಕಂಡುಹಿಡಿದ ಮಹಿಳೆ
ವೈರಲ್​​ ವಿಡಿಯೋ
Image Credit source: Twitter
Updated By: ಅಕ್ಷಯ್​ ಪಲ್ಲಮಜಲು​​

Updated on: May 19, 2025 | 6:18 PM

ನಮ್ಮ ದೇಶದಲ್ಲಿ ಪ್ರತಿಭೆ (talents) ಗಳಿಗೆ ಯಾವ ಕೊರತೆಯೂ ಇಲ್ಲ ಬಿಡಿ. ಹೀಗಾಗಿ ಏನೇ ಸಮಸ್ಯೆಗಳಿದ್ದರೂ ಕೂಡ ಅದಕ್ಕೆ ಪರಿಹಾರ ಕಂಡುಕೊಳ್ಳುವುದರಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಕೆಲವೊಮ್ಮೆ ತಮ್ಮ ಕಲ್ಪನೆಗೆ ಹೊಸ ರೆಕ್ಕೆಯನ್ನು ಕಟ್ಟಿ ಏನಾದರೂ ಹೊಸ ಹೊಸ ಅವಿಷ್ಕಾರ ಮಾಡುತ್ತಿರುತ್ತಾರೆ. ಇನ್ನೊಂದೆಡೆ ಸಮಸ್ಯೆಗಳಿಗೆ ತಮ್ಮ ಬುದ್ಧಿವಂತಿಕೆ (intelligence) ಯಿಂದಲೇ ಪರಿಹಾರ ಕಂಡುಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಾರೆ. ಇದೀಗ ಮಹಿಳೆಯೂ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ತಡೆಯಲು ತನ್ನ ಎರಡು ಕಣ್ಣುಗಳಿಗೆ ಅಗಲವಾದ ಟೇಪ್ (tape) ಅಂಟಿಸಿಕೊಳ್ಳುವ ಮೂಲಕ ಸುಲಭ ಪರಿಹಾರ ಕಂಡುಕೊಂಡಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ಮಹಿಳೆಯೂ ಬುದ್ಧಿ ಉಪಯೋಗಿಸಿದ್ದನ್ನು ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ.

@HinduHunDilse ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದ ಪ್ರಾರಂಭದಲ್ಲಿ ಮಹಿಳೆಯೊಬ್ಬರು ತನ್ನ ಕಣ್ಣುಗಳಿಗೆ ಅಗಲವಾದ ಸೆಲ್ಲೋ ಟೇಪ್ ಅಂಟಿಸಿಕೊಳ್ಳುವುದನ್ನು ಕಾಣಬಹುದು. ಪ್ರಾರಂಭದಲ್ಲಿ ಈ ಮಹಿಳೆ ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದು ತಿಳಿಯುವುದಿಲ್ಲ. ಆದರೆ ಈ ವಿಡಿಯೋದ ಕೊನೆಯಲ್ಲಿ ಈರುಳ್ಳಿ ಕತ್ತರಿಸುತ್ತಿರುವುದನ್ನು ನೋಡಬಹುದು. ಕಣ್ಣಲ್ಲಿ ನೀರು ಬಾರದಂತೆ ತಡೆಯಲು ಈ ಉಪಾಯವನ್ನು ಕಂಡುಕೊಂಡಿದ್ದಾಳೆ ಎನ್ನುವುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ಇದನ್ನೂ ಓದಿ : ಗಾಯಗೊಂಡ ಶ್ವಾನಕ್ಕೆ ಚಿಕಿತ್ಸೆ ಕೊಡಿಸಲು ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕರೆದ್ಯೊಯ್ದ ಪುಟಾಣಿಗಳು, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಲೈಕ್ಸ್ ಗಳು ಹಾಗೂ ಕಾಮೆಂಟ್ ಗಳು ಹರಿದು ಬಂದಿದೆ. ಬಳಕೆದಾರರೊಬ್ಬರು, ‘ಇದು ಡಿಜಿಟಲ್ ಇಂಡಿಯಾ, ನಮ್ಮ ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಮೊದಲು ಈ ರೀತಿ ತಂತ್ರಜ್ಞಾನಗಳು ಇರಲಿಲ್ಲ. ಆದರೆ ಇದೀಗ ಭಾರತಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿವೆ’ ಎಂದಿದ್ದಾರೆ. ಮತ್ತೊಬ್ಬರು, ‘ಈ ಸುದ್ದಿ ಅಮೇರಿಕಾಕ್ಕೆ ತಿಳಿದರೆ ಟ್ರಂಪ್ ವಿಶ್ವಯುದ್ಧವನ್ನೇ ಮಾಡುತ್ತಾರೆ’ ಎಂದು ತಮಾಷೆಯಾಗಿಯೇ ಕಾಮೆಂಟ್ ಮಾಡಿದ್ದಾರೆ. ಇನ್ನೊರ್ವ ಬಳಕೆದಾರರು, :ನೀವು ಫ್ಯಾನ್ ಆನ್ ಮಾಡಿ ಈರುಳ್ಳಿ ಕತ್ತರಿಸಲು ಕುಳಿತರೆ,ನಿಮ್ಮನ್ನು ಹೊರತು ಪಡಿಸಿ ಉಳಿದವರೆಲ್ಲರೂ ಅಳಲು ಪ್ರಾರಂಭಿಸುತ್ತಾರೆ’ ಎಂದು ಕಾಮೆಂಟ್ ನಲ್ಲಿ ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ