Accident : ಈಕೆ ಇಷ್ಟೊಂದು ವೇಗದಲ್ಲಿ ಯಾಕೆ ನಡೆಯುತ್ತಿದ್ದಾಳೆ ಎಂದು ಯೋಚಿಸುತ್ತಿರುವಾಗಲೇ ಎದುರಿಗೆ ಬಂದ ಬಸ್ಸಿಗೆ ಈಕೆ ತಾನಾಗಿಯೇ ಹಾಯ್ದುಬಿಡುತ್ತಾಳೆ. ಈ ದೃಶ್ಯ ಯಾರ ಎದೆಯನ್ನೂ ನಡುಗಿಸುವಂತಿದೆ. ‘ತನ್ನ ಸಾವಿನಿಂದಾಗಿ ತನ್ನ ಕುಟುಂಬಕ್ಕೆ ಸರ್ಕಾರ ಹಣ ಸಹಾಯ ಮಾಡಬಹುದು, ಮಗನ ಕಾಲೇಜು ಶುಲ್ಕ ಪಾವತಿಸಲು ಅನುಕೂಲವಾಗಬಹುದು ಎಂಬ ಆಶಯದಿಂದ ಈ ತಾಯಿ ಬಸ್ಸಿಗೆ ಹಾಯ್ದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.’ ಎಂದು ಪ್ರೊ. ಅಶೋಕ ಸ್ವೈನ್ ವಿಡಿಯೋ ಟ್ವೀಟ್ ಮಾಡಿದ್ದಾರೆ.
A mother in India kills herself jumping in front of a bus, hoping for family to get government assistance due to her death, so her son can pay the college fee. pic.twitter.com/jElX596vBu
ಇದನ್ನೂ ಓದಿ— Ashok Swain (@ashoswai) July 17, 2023
ಇದು ಯಾವ ರಾಜ್ಯದಲ್ಲಿ ನಡೆದಿದೆ ಮತ್ತು ಈಕೆಯ ಹಿನ್ನೆಲೆ ಏನು, ಆತ್ಮಹತ್ಯೆಗೆ ಕಾರಣವೇನು ಎನ್ನುವುದಕ್ಕೆ ಸ್ಪಷ್ಟವಾದ ಕಾರಣಗಳು ತಿಳಿದುಬಂದಿಲ್ಲ. ಆದರೆ ನೆಟ್ಟಿಗರು ಈ ದೃಶ್ಯ ನೋಡಿ ಮರಗುತ್ತಿದ್ದಾರೆ. ಅವರ ಚರ್ಚೆ ಬಡವರು, ಶ್ರೀಮಂತರು, ಮತ್ತು ರಾಜಕಾರಣಿಗಳ ಸುತ್ತ ತಿರುಗುತ್ತಿದೆ. ಈಗಾಗಲೇ ಈ ವಿಡಿಯೋ ಅನ್ನು, 1 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 800ಕ್ಕೂ ಹೆಚ್ಚು ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ಥಟ್ ಅಂತ ಹೇಳಿ! ಇವರನ್ನು ಹೀಗೆ ಬೇಸರಗೊಳಿಸಿದ್ದು ಯಾರು?
ಇದು ಕಳೆದ ತಿಂಗಳು ಒಡಿಶಾದಲ್ಲಿ ನಡೆದಿತ್ತು. ವಿಶ್ವಗುರುವಿನ ಯುಗದಲ್ಲಿ ಶಿಕ್ಷಣಕ್ಕಾಗಿ ಎಂಥ ದುರಂತಕ್ಕೆ ನಾವೆಲ್ಲ ಸಾಕ್ಷಿಯಾಗಬೇಕಿದೆ, ಬಹಳ ದುಃಖವಾಗುತ್ತಿದೆ ಎಂದಿದ್ದಾರೆ ಒಬ್ಬರು. ನಮ್ಮ ದೇಶದಲ್ಲಿ ಇನ್ನೂ ಬಡತನವಿದೆ ಎಂದರೆ ಇದು ನಾಚಿಕೆಯಿಂದ ತಲೆತಗ್ಗಿಸುವಂಥ ವಿಷಯ. ರಾಜಕಾರಣಿಗಳು ಶ್ರೀಮಂತ ಕೈಗಾರಿಕೋದ್ಯಮಿಗಳ ಸಾಲವನ್ನು ಮನ್ನಾ ಮಾಡುವಲ್ಲಿ ಮುಳುಗಿದ್ದಾರೆ. ಹಾಗಾಗಿ ಬಡವರು ಬಡವರಾಗಿಯೇ ಉಳಿದು ಅದರ ಭಾರ ತಾಳಲಾರದೆ ಇಂಥ ನಿರ್ಧಾರಕ್ಕೆ ಬರಬೇಕಾಗುತ್ತಿರುವುದು ವಿಷಾದನೀಯ ಎಂದಿದ್ಧಾರೆ ಇನ್ನೊಬ್ಬರು.
ಇದನ್ನೂ ಓದಿ : Viral: ಪಾಕಿಸ್ತಾನ; ಕರಾಚಿಯಲ್ಲಿ ಮಾರಿ ಮಾತಾ ಹಿಂದೂ ದೇವಸ್ಥಾನ ಧ್ವಂಸ
ಈ ಘಟನೆಯ ಬಗ್ಗೆ ಈಕೆ ನಿಮಗೆ ಹಿಂದಿನ ದಿನ ಮೆಸೇಜ್ ಕಳಿಸಿದ್ದಳೇ? ಎಂದು ಕೊಂಕಾಡಿದ್ದಾರೆ ಒಬ್ಬರು. ಇದನ್ನು ಆತ್ಮಹತ್ಯೆ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಆದರೆ ಈಕೆ ಹೀಗೆ ಜೀವ ಕಳೆದುಕೊಂಡು ಡ್ರೈವರ್ ಜೀವನಪರ್ಯಂತ ಆಘಾತದಲ್ಲಿ ಉಳಿಯುವಂತೆ ಮಾಡಿದಳೇನೋ ಎಂದು ಇನ್ನೊಬ್ಬರು ಹೇಳಿದ್ದಾರೆ. ಆನಂದ್ ಮಹೀಂದ್ರಾ ಈ ವಿಡಿಯೋ ನೋಡಿದರೆ ಇದರಲ್ಲೂ ಏನಾದರೂ ಸ್ಫೂರ್ತಿದಾಯಕ ವಿಷಯವನ್ನು ಕಂಡುಕೊಳ್ಳುತ್ತಾರೆ ಹಾಗಾಗಿ ಈ ವಿಡಿಯೋ ಹೈಡ್ ಮಾಡಿ ಎಂದಿದ್ದಾರೆ ಇನ್ನೂ ಒಬ್ಬರು.
ಒಟ್ಟಿನಲ್ಲಿ ಒಂದು ಜೀವ ತಾನಾಗಿಯೇ ಹೀಗೆ ಜೀವ ಕಳೆದುಕೊಳ್ಳುತ್ತದೆ ಎಂದರೆ ಅದಕ್ಕೆ ಸಮಾಜವೇ ಹೊಣೆ. ಕಾರಣಗಳು ಏನೇ ಇರಬಹುದು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ