ಗನ್ ಜೊತೆ ಸೆಲ್ಫಿ ತೆಗೆದು ಪ್ರಾಣ ಕಳೆದುಕೊಂಡ ನವವಿವಾಹಿತೆ

| Updated By: ಝಾಹಿರ್ ಯೂಸುಫ್

Updated on: Jul 29, 2021 | 3:22 PM

Viral News: ಎರಡನೇ ಮಹಡಿಯ ಕೋಣೆಯಲ್ಲಿ ಗುಂಡೇಟು ಶಬ್ದ ಕೇಳಿ ಮನೆಯವರು ಓಡಿ ಹೋಗಿದ್ದಾರೆ. ಗಂಟಲು ಭಾಗಕ್ಕೆ ಗುಂಡು ತಗುಲಿದ್ದರಿಂದ ರಾಧಿಕಾ ಕುಸಿದು ಬಿದ್ದಿದ್ದರು.

ಗನ್ ಜೊತೆ ಸೆಲ್ಫಿ ತೆಗೆದು ಪ್ರಾಣ ಕಳೆದುಕೊಂಡ ನವವಿವಾಹಿತೆ
Radhika Gupta
Follow us on

ಕೈಯಲ್ಲಿ ಮೊಬೈಲ್ ಇದ್ರೆ ಸಾಕು…ಮೈ ಮರೆಯುವವರೇ ಹೆಚ್ಚು. ಅದರಲ್ಲೂ ಸೆಲ್ಫಿ ಫೋಟೋ ಹುಚ್ಚಿಗೆ ಬಿದ್ದು ಅದೆಷ್ಟೋ ಜನರು ಪ್ರಾಣ ಕಳೆದುಕೊಂದಿದ್ದಾರೆ. ಹೀಗೆ ಗನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ನವವಿವಾಹಿತೆಯೊಬ್ಬರು ಜೀವ ತೆತ್ತಿದ್ದಾರೆ.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಕ್ನೋನ ಹಾರ್ಡೊಯ್​ನಲ್ಲಿ. 26 ವರ್ಷದ ನವವಿವಾಹಿತೆ ರಾಧಿಕಾ ಗುಪ್ತಾ ಸೆಲ್ಫಿ ಹುಚ್ಚಿಗೆ ಬಲಿಯಾದ ಮಹಿಳೆ. ಈ ವರ್ಷ ಮೇ ತಿಂಗಳಲ್ಲಿ ಆಕಾಶ್ ಗುಪ್ತಾ ಹಾಗೂ ರಾಧಿಕಾ ವಿವಾಹವಾಗಿತ್ತು. ಪಂಚಾಯತ್ ಚುನಾವಣೆಯ ಸಮಯದಲ್ಲಿ ಪೊಲೀಸ್ ಠಾಣೆಗೆ ಸಲ್ಲಿಸಲಾಗಿದ್ದ ತಂದೆಯ ಲೈಸನ್ಸ್ ಹೊಂದಿರುವ ಬಂದೂಕನ್ನು ಜುಲೈ 22 ರಂದು ಮಧ್ಯಾಹ್ನ 3 ಗಂಟೆಗೆ ಆಕಾಶ್ ಅನ್ನು ಮರಳಿ ಮನೆಗೆ ತಂದಿದ್ದರು.

ಗನ್ ಮೇಲೆ ವಿಶೇಷ ಮೋಹ ಹೊಂದಿದ್ದ ರಾಧಿಕಾ ಅದರ ಜೊತೆ ಅನೇಕ ಪೋಟೋಗಳನ್ನು ತೆಗೆಸಿಕೊಂಡಿದ್ದಳು. ಹಾಗೆಯೇ ಗುರುವಾರ ಕೂಡ ಸಿಂಗಲ್ ಬ್ಯಾರೆಲ್ ಗನ್ ಹಿಡಿದುಕೊಂಡು ಸೆಲ್ಫಿ ತೆಗೆಯಲು ಮುಂದಾಗಿದ್ದಾಳೆ. ಆದರೆ ಅದಾಗಲೇ ಗನ್ ಲೋಡ್ ಮಾಡಿಟ್ಟಿರುವುದು ರಾಧಿಕಾಗೆ ಗೊತ್ತಿರಲಿಲ್ಲ. ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಮೊಬೈಲ್ ಬದಲು ಟ್ರಿಗರ್ ಒತ್ತಿದ್ದಾರೆ.

ಇತ್ತ ಎರಡನೇ ಮಹಡಿಯ ಕೋಣೆಯಲ್ಲಿ ಗುಂಡೇಟು ಶಬ್ದ ಕೇಳಿ ಮನೆಯವರು ಓಡಿ ಹೋಗಿದ್ದಾರೆ. ಗಂಟಲು ಭಾಗಕ್ಕೆ ಗುಂಡು ತಗುಲಿದ್ದರಿಂದ ರಾಧಿಕಾ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅದಾಗಲೇ ಪ್ರಾಣ ಕಳೆದುಕೊಂಡಿದ್ದರು.

ಸದ್ಯ ಪೊಲೀಸರು ಬಂದೂಕು ಮತ್ತು ರಾಧಿಕಾ ಅವರ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಾಗೆಯೇ ಪ್ರಾಥಮಿಕ ತನಿಖೆಯಿಂದ ಆಕೆ ಸಾಯುವ ಕೆಲವೇ ಸೆಕೆಂಡುಗಳ ಮೊದಲು ಮೊಬೈಲ್ ಫೋನ್​ನಲ್ಲಿ ಫೋಟೋ ಕ್ಲಿಕ್ ಮಾಡಿದ್ದರು. ಅಷ್ಟೇ ಅಲ್ಲದೆ ದೇಹದ ಮೇಲೆ ಗುಂಡೇಟು ಗಾಯ ಮಾತ್ರ ಕಂಡು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದಾಗ್ಯೂ ರಾಧಿಕಾ ಅವರ ತಂದೆ ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಆಕಾಶ್ ಹಾಗೂ ಅವರ ಕುಟುಂಬದವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ-ಕೊಲೆಯ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Viral Story: ಹಿಂದೂಗಳು ಹೋಗಲು ಹೆದರುವ ಏಕೈಕ ದೇವಸ್ಥಾನ ಇದು..!

ಇದನ್ನೂ ಓದಿ: T20 ವಿಶ್ವಕಪ್​ಗಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ನ್ನು ಪ್ರಕಟಿಸಿದ ವಿರೇಂದ್ರ ಸೆಹ್ವಾಗ್

(Woman shoots self in Hardoi while clicking selfie with gun)