ಇಲ್ಲಿ ಯುವತಿಯರು ಪ್ರಾಣಿಪಕ್ಷಿಗಳಾಗಿ ರೂಪಾಂತರಗೊಳ್ಳುತ್ತಾರೆ; ಆನಂದ ಮಹೀಂದ್ರ ವಿಡಿಯೋ ಟ್ವೀಟ್

Anand Mahindra : France's Got Talent ಎಂಬ ರಿಯಾಲಿಟಿ ಷೋನ ತುಣುಕಗಳನ್ನು ಉದ್ಯಮಿ ಆನಂದ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಬಹುಶಃ ನೀವು ಈತನಕ ಇಷ್ಟೊಂದು ಅದ್ಭುತವಾದ ಕಲಾಪ್ರದರ್ಶನವನ್ನು ನೋಡಿಲ್ಲವೇನೋ.

ಇಲ್ಲಿ ಯುವತಿಯರು ಪ್ರಾಣಿಪಕ್ಷಿಗಳಾಗಿ ರೂಪಾಂತರಗೊಳ್ಳುತ್ತಾರೆ; ಆನಂದ ಮಹೀಂದ್ರ ವಿಡಿಯೋ ಟ್ವೀಟ್
ಯುವತಿಯರು ಪ್ರಾಣಿಗಳಾಗಿ ರೂಪಾಂತರಗೊಳ್ಳುವ ಈ ಕಲೆ
Edited By:

Updated on: Dec 09, 2022 | 6:15 PM

Viral Video : ಉದ್ಯಮಿ ಆನಂದ ಮಹೀಂದ್ರಾ ದಿನವೂ ಅನೇಕ ವಿಚಾರಗಳನ್ನು, ಸ್ಫೂರ್ತಿದಾಯಕ ವಿಡಿಯೋಗಳನ್ನು, ಜೀವನಕ್ಕೆ ಉಪಯುಕ್ತವಾಗುವ ಸಂಗತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇವರು ಟ್ವೀಟ್ ಮಾಡಿರುವ ಈ ವಿಡಿಯೋ ಅಪರೂಪದ ಕಲಾಪ್ರದರ್ಶನಕ್ಕೆ ಸಂಬಂಧಿಸಿದ್ದು. ಒಂದು ಕಾಡಿನ ಬ್ಯಾಕ್​ಡ್ರಾಪ್​ ಮೂಲಕ ವಿಡಿಯೋ ತೆರೆದುಕೊಳ್ಳುತ್ತದೆ. ಬಾಡಿ ಪೇಂಟಿಂಗ್​ (Body Painting) ಮೂಲಕ ಪ್ರಾಣಿ ಮತ್ತು ಪಕ್ಷಿಗಳನ್ನು ತಮ್ಮ ಮೈಮೇಲೆ ಆವಾಹಿಸಿಕೊಂಡಿರುವ ಯುವತಿಯರು ಇಲ್ಲಿ ಬಂದು ಹೋಗುತ್ತಾರೆ. ಬಹಳ ಕುತೂಹಲ ಮತ್ತು ಅಚ್ಚರಿಯಿಂದ ಕೂಡಿದೆ ಈ ವಿಡಿಯೋ.

ಆನಂದ್ ಮಹೀಂದ್ರಾ ಹಂಚಿಕೊಂಡ ಈ ವಿಡಿಯೋ France’s Got Talent ಎಂಬ ರಿಯಾಲಿಟಿ ಟಿವಿ ಷೋದ ತುಣುಕು. ಇಲ್ಲಿರುವ ನಾಲ್ಕು ಯುವತಿಯರು ಗೂಬೆ, ಸಿಂಹ, ಹುಲಿ, ಮಂಗಗಳು ಹೀಗೆ ಮುಂತಾದ ಪ್ರಾಣಿ ಪಕ್ಷಿಗಳ ಚಿತ್ರವನ್ನು ತಮ್ಮ ಮೈಮೇಲೆ ವಿನ್ಯಾಸಗೊಳಿಸಿಕೊಂಡಿದ್ದಾರೆ. ಪ್ರೇಕ್ಷಕರು ಮತ್ತು ತೀರ್ಪುಗಾರರು ಇವರ ಪ್ರದರ್ಶನವನ್ನು ನೋಡಿದ ಅಚ್ಚರಿಗೆ ಒಳಗಾಗುತ್ತಾರೆ.

ಈ ವಿಡಿಯೋ ಅನ್ನು ಈತನಕ 7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಈತನಕ 40,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿರುವ ಕಲಾವಿದೆಯರ ಕೌಶಲವನ್ನು ಕಂಡು ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.

ಇದನ್ನೂ ನೋಡಿ : ಎಲೆಕ್ಟ್ರಿಕ್​ ಮಲ್ಟಿ ರೈಡರ್​; ಹಳ್ಳಿಹೈದನ ಹೊಸ ಆವಿಷ್ಕಾರಕ್ಕೆ ಭೇಷ್​ ಎಂದ ಆನಂದ ಮಹೀಂದ್ರಾ

ನೀವು ಯಾವಾಗಲೂ ಇಂತಹ ಉತ್ಕೃಷ್ಟ ಕಲೆಯ ಬಗ್ಗೆ ಮಾಹಿತಿ ನೀಡುತ್ತ ಇರಿ ಎಂದು ಹಲವರು ಹೇಳಿದ್ದಾರೆ. ಸ್ಪೂರ್ತಿದಾಯಕ ವಿಡಿಯೋಗಳಿಗಾಗಿ ನಾವು ಕಾಯುತ್ತಿರುತ್ತೇವೆ ಎಂದು ಮತ್ತೊಬ್ಬರು ಹೇಳಿದ್ಧಾರೆ. ಈ ಕ್ಲಿಪ್ಪಿಂಗ್​ನಲಲ್ಲಿರುವ ತೆರೆಯ ಮೇಲಿರುವ ಮತ್ತು ತೆರೆಯ ಹಿಂದಿರುವ ಕಲಾವಿದರಿಗೆಲ್ಲ ಸಲಾಂ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ