Dose : ಸುಮಾರು ಆರನೂರು ಜನರು ಈ ಪೋಸ್ಟ್ನಡಿ ಪ್ರತಿಕ್ರಿಯಿಸಿದ್ದಾರೆ. ಅವರೆಲ್ಲರೂ ಹೇಳಿದ್ದು ಒಂದೇ, ಇದು ಪ್ಯಾನ್ ಕೇಕ್ ಅಲ್ಲ ದೋಸೆ; ದೋಸೆಯನ್ನು ಪ್ಯಾನ್ಕೇಕ್ ಎಂದು ಕರೆಯುವುದನ್ನು ನಿಲ್ಲಿಸಿ. ಡೋನಟ್ ಅನ್ನು ನಾವು ವಡಾ ಎಂದು ಕರೆಯುವುದಿಲ್ಲವಲ್ಲ? ಈ ವ್ಲಾಗರ್ ಗೆ ಭಾರತೀಯ ಖಾದ್ಯಗಳ ಬಗ್ಗೆ ತಿಳಿವಳಿಕೆಯೇ ಇಲ್ಲ, ದೋಸೆ ಮತ್ತು ಪ್ಯಾನ್ಕೇಕ್ (Pan Cake) ನಡುವಿನ ವ್ಯತ್ಯಾಸವೂ ಗೊತ್ತಿಲ್ಲ. ಈ ಫೇಸ್ಬುಕ್ ಪುಟವನ್ನು ಡಿಲೀಟ್ ಮಾಡಬೇಕು. ಏಕೆಂದರೆ ದೋಸೆಯನ್ನು ಪ್ಯಾನ್ಕೇಕ್ ಎಂದು ಕರೆದು ಅನೇಕ ಭಾರತೀಯರಿಗೆ ನೋವನ್ನುಂಟು ಮಾಡಿದ್ದಾರೆ. ಅಬ್ಬಬ್ಬಾ! ಮಸಾಲೆ ದೋಸೆಯ ಅಭಿಮಾನಿಗಳೆಲ್ಲ ವೈರಲ್ ಆಗಿರುವ ಈ ಪೋಸ್ಟ್ಗೆ ಮುತ್ತಿಗೆ ಹಾಕಿದ್ದಾರೆ.
ಇದನ್ನೂ ಓದಿ : Viral Optical Illusion: ಪ್ರೇಮಸಂಬಂಧದಲ್ಲಿ ಬದ್ಧತೆಯ ಸಮಸ್ಯೆ ಎದುರಿಸುತ್ತಿದ್ದೀರೆ? ಈ ಚಿತ್ರ ನೋಡಿ ಉತ್ತರ ಕಂಡುಕೊಳ್ಳಿ
ಇನ್ನೊಂದಿಷ್ಟು ಜನ ನೋಡೋದಕ್ಕೇನೋ ಚೆನ್ನಾಗಿದೆ, ಆದರೆ ಅದೆಷ್ಟು ಕೈಗಳನ್ನು ಈ ದೊಡ್ಡ ದೋಸೆ ತಯಾರಿಕೆಯಲ್ಲಿ ಒಳಗೊಂಡಿವೆ, ಅದೂ ಬರೀಗೈಯಲ್ಲಿ! ಉಫ್… ಇದು ಎಷ್ಟು ದೊಡ್ಡದಿದ್ದರೇನು ರುಚಿ ಇದ್ದರೇನು ಅಶುಚಿಯಾಗಿದೆ ಹಾಗಾಗಿ ನಾನಿದನ್ನು ಇಷ್ಟಪಡುವುದಿಲ್ಲ. ಪ್ಯಾನ್ಕೇಕಾದರೂ ಅನ್ನಿ ದೋಸಾ ಆದರೂ ಅನ್ನಿ. ಈ ಹೋಟೆಲ್ನ ಅಡುಗೆಕೋಣೆ ಮಾತ್ರ ನೋಡಲಾಗದು, ಇನ್ನು ತಿನ್ನುವುದೆಂತು? ಹೀಗೆ ಪ್ರತಿಕ್ರಿಯೆಗಳ ಸುರಿಮಳೆ ಸುರಿಯುತ್ತಲೇ ಇದೆ.
ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿ ಈ ‘ದಕ್ಷಿಣೋತ್ತರ ದೋಸೆ’ಗೆ ‘ಜಗತ್ತಿನ ಅತೀ ದೊಡ್ಡ ಪ್ಯಾನ್ಕೇಕ್’ ಎಂದು ಹೇಳಿರುವುದೇ ನೆಟ್ಟಿಗರ ಪಿತ್ತ ಕೆರಳಲು ಕಾರಣವಾಗಿದೆ. ಆದರೆ ಇನ್ನೂ ಕೆಲವರು ದೋಸೆನೋ ಪ್ಯಾನ್ಕೇಕೋ ಇಷ್ಟು ದೊಡ್ಡದಾಗಿ ಮಾಡಿರುವ ಕಾಣರವೇನು? ಒಬ್ಬ ಮನುಷ್ಯ ತಿನ್ನುವುದು ಎರಡು ದೋಸೆ ಅಲ್ಲವೆ? ಎಂದು ಕೇಳಿದ್ದಾರೆ ಕೆಲವರು. ಈ ವ್ಲಾಗರ್ಗಳ ಹುಚ್ಚಾಟದ ಮಹಿಮೆ ಇದು ಎಂದು ಕೆಲವರು ಹೇಳಿದ್ದಾರೆ.
ಈ ವಿಡಿಯೋ ಅನ್ನು ಸುಮಾರು 14 ಮಿಲಿಯನ್ ಜನರು ನೋಡಿದ್ದಾರೆ. 71,000 ಜನರು ಲೈಕ್ ಮಾಡಿದ್ದಾರೆ. 625 ಜನರು ಪ್ರತಿಕ್ರಿಯಿಸಿದ್ದಾರೆ. ಇವರು ಇಷ್ಟೊಂದು ಆಹಾರವನ್ನು ಯಾಕೆ ಹಾಳು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಕೆಲವರು. ಇಷ್ಟು ಅಶುಚಿಯಾದ ಅಡುಗೆಮನೆಯಲ್ಲಿ ಇಷ್ಟು ದೊಡ್ಡ ದೋಸೆಯನ್ನು ಮಾಡುವುದರಿಂದ ಪ್ರಯೋಜನವೇನು? ಎಂದು ಕೇಳಿದ್ದಾರೆ ಇನ್ನೂ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:53 pm, Mon, 14 August 23