
ಮದ್ಯ ಪ್ರಿಯರಿಗಂತೂ ವಿಸ್ಕಿ, ವೈನ್, ಬಿಯರ್ ಬ್ರಾಂಡ್‌ಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ಕೆಲವು ವೈನ್‌ಗಳ ಬೆಲೆ (wine price) ಕೇಳಿದ್ರೆ ತಲೆ ಗಿರ್ರ್ ಅನ್ನುತ್ತೆ. ಇದೀಗ 2026ರ ಮಾರ್ಚ್ ಅಂತ್ಯದಲ್ಲಿ ನಡೆದ ಅಕರ್ ಹರಾಜಿನಲ್ಲಿ, ಅಪರೂಪದ 1945ರ ಡೊಮೈನ್ ಡೆ ಲಾ ರೊಮಾನಿ ಕಾಂಟಿ (Domaine de la Romanee Conti) ವೈನ್ ಬಾಟಲಿ 7.63 ಕೋಟಿ ರೂಗೆ ಮಾರಾಟವಾಗಿದೆ.
ಅಮೆರಿಕದ ಅತ್ಯಂತ ಹಳೆಯ ವೈನ್ ವ್ಯಾಪಾರಿ ಮತ್ತು ವಿಶ್ವದ ಅತಿದೊಡ್ಡ ಉತ್ತಮ ವೈನ್ ಹರಾಜು ಮನೆ ಅಕರ್ ಆಯೋಜಿಸಿದ್ದ ವಾರ್ಷಿಕ ಲಾ ಪೌಲೀ ಹರಾಜಿನ ಸಂದರ್ಭದಲ್ಲಿ ಮಾರಾಟ ಮಾಡಲಾಗಿದೆ. ಈ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಬಾಟಲಿಯ ಹಿಂದಿನ ವಿಶ್ವ ದಾಖಲೆಯನ್ನು ಸುಮಾರು 50% ರಷ್ಟು ಮುರಿದಿದೆ. ದಾಖಲೆಯ ಈ ವೈನ್ ಬಾಟಲಿಯನ್ನು ಯಾರು ಖರೀದಿಸಿದರು ಎಂಬುದನ್ನು ಅಕರ್ ಬಹಿರಂಗಪಡಿಸಲಿಲ್ಲ. ಈ ವೈನ್ ಆರಂಭದಲ್ಲಿ ರಾಬರ್ಟ್ ಡ್ರೌಹಿನ್ ಅವರ ವೈಯಕ್ತಿಕ ನೆಲಮಾಳಿಗೆಯಿಂದ ಪಡೆಯಲಾಗಿದೆ ಎಂಬ ಮಾಹಿತಿ ಅಕರ್ ಹಂಚಿಕೊಂಡಿದೆ ಎಂದು ದಿ ಪೋಸ್ಟ್ ವರದಿ ಮಾಡಿದೆ.
ಇದನ್ನೂ ಓದಿ: ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ: AI ಆಧಾರಿತ ಬಫೆ ಆ್ಯಪ್ ನಿರ್ಮಿಸಿದ ಬೆಂಗಳೂರಿನ ಟೆಕ್ಕಿಗೆ ಜೀವ ಬೆದರಿಕೆ
1945ರ ದ್ವಿತೀಯ ಮಹಾಯುದ್ಧದ ಅಂತ್ಯದ ಸೀಮಿತ ಉತ್ಪಾದನೆಯಾಗಿದ್ದು, ಕೇವಲ 600 ಬಾಟಲಿಗಳಲ್ಲಿ ತಯಾರಿಸಲಾಗಿತ್ತು. ಈ ವೈನ್ ದುಬಾರಿಯಾಗಲು ಕಾರಣ ಈ ವೈನ್ ತಯಾರಾದ ನಂತರ ದ್ರಾಕ್ಷಿಯ ಹಳೆಯ ಬಳ್ಳಿಗಳನ್ನು ಕಿತ್ತುಹಾಕಲಾಯಿತು. ಅಂದರೆ, ಈ ವೈನ್ ತಯಾರಾದ ನಂತರ, ದ್ರಾಕ್ಷಿತೋಟವನ್ನು ಮರು ನೆಡಲಾಯಿತು. ಹೀಗಾಗಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ವೈನ್ ಎಂಬ ಖ್ಯಾತಿ ಪಡೆದಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Tue, 31 March 26