ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಹೃದಯಾಘಾತಕ್ಕೆ ತುತ್ತಾಗಿ ಕುಸಿದು ಬಿದ್ದು ಸಾವನ್ನಪ್ಪುವ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿರುತ್ತವೆ. ಮಕ್ಕಳು, ವೃದ್ಧರು, ಯುವಕರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲಾ ವಯೋಮಾನದವರೂ ಈ ಹಾರ್ಟ್ ಅಟ್ಯಾಕ್ ಗೆ ಬಲಿಯಾಗುತ್ತಿದ್ದಾರೆ. ಅಂತಹದ್ದೇ ಹೃದಯ ವಿದ್ರಾವಕ ಘಟನೆಯೊಂದು ಇದೀಗ ನಡೆದಿದ್ದು, ಸಹೋದರಿಯ ಮದುವೆಯ ಸಂಭ್ರಮದಲ್ಲಿದ್ದ 18 ವರ್ಷದ ಹುಡುಗಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಈ ಹೃದಯವಿದ್ರಾವಕ ಘಟನೆಯ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದ್ದು, ತನ್ನ ಸಹೋದರಿಯ ಅರಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಖುಷಿ ಖುಷಿಯಾಗಿ ನೃತ್ಯ ಮಾಡುತ್ತಿದ್ದ ವೇಳೆ ರಿಮ್ಶಾ ಎಂಬ ಹೆಸರಿನ ಹುಡುಗಿ ಹಠಾತ್ ಕುಸಿದು ಬಿದ್ದಿದ್ದಾಳೆ. ಆ ತಕ್ಷಣ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮುಂಚೆಯೇ ಹುಡುಗಿಯ ಪ್ರಾಣ ಪಕ್ಷಿ ಹಾಕಿ ಹೋಗಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಆಕೆ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿದೆ. ಇದೀಗ ಸಂತೋಷ ಸಡಗರದಿಂದ ತುಂಬಿದ್ದ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಇದನ್ನೂ ಓದಿ: ಅತ್ತೆ ಜೊತೆಗೆ ಮಾರ್ವಾಡಿ ಭಾಷೆ ಮಾತನಾಡುವ ರೋಬೋಟ್ ಸೊಸೆ, ಇವಳು ಸೂರ್ಯಪ್ರಕಾಶನ ಪತ್ನಿ
28 April 2024 : A girl named Rimsha, who was dancing at her sister’s Haldi ceremony in Meerut, died of a #heartattack2024 💉#LuciferShotWorking #TsunamiOfDeath pic.twitter.com/mL0Yn5IeEh
— Anand Panna (@AnandPanna1) April 28, 2024
ಈ ಕುರಿತ ವಿಡಿಯೋವನ್ನು ಆನಂದ್ ಪನ್ನಾ (@AnandPanna1) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಸಹೋದರಿಯ ಅರಶಿನ ಶಾಸ್ತ್ರದಲ್ಲಿ ಖುಷಿ ಖುಷಿಯಾಗಿ ನೃತ್ಯ ಮಾಡುತ್ತಿದ್ದ ಹುಡುಗಿಯೊಬ್ಬಳು ಹಠಾತ್ ಕುಸಿದು ಬೀಳುತ್ತಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.