Viral Video: ಕನ್ಫ್ಯೂಸ್ ಆಗಬೇಡಿ, ಇದು ವಾಷಿಂಗ್ ಮೆಷಿನ್ ಅಲ್ಲ, ಕೋಳಿ ಗೂಡು ಕಣ್ರೀ

ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತಯಿಲ್ಲ. ಅದರಲ್ಲೂ ವಿಭಿನ್ನ ಶೈಲಿಯ ದೇಶಿ  ಐಡಿಯಾಗಳ ಕುರಿತ ತಮಾಷೆಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.  ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಮನೆಯಲ್ಲಿ ಕೆಟ್ಟು ಹೋದ ವಾಷಿಂಗ್ ಮೆಷಿನ್ ಬಳಸಿಕೊಂಡು  ಕೋಳಿ ಗೂಡನ್ನು ತಯಾರಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಅಬ್ಬಬ್ಬಾ… ವಾಷಿಂಗ್ ಮೆಷಿನ್ ಅನ್ನು ಈ ರೀತಿಯೂ ಉಪಯೋಗಿಸಬಹುದೆಂದು ನಮಗೆ  ಗೊತ್ತೇ ಇರ್ಲಿಲ್ವೇ ಅಂತ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

Viral Video: ಕನ್ಫ್ಯೂಸ್ ಆಗಬೇಡಿ, ಇದು ವಾಷಿಂಗ್ ಮೆಷಿನ್ ಅಲ್ಲ, ಕೋಳಿ ಗೂಡು ಕಣ್ರೀ
Updated By: ಅಕ್ಷಯ್​ ಪಲ್ಲಮಜಲು​​

Updated on: Jan 08, 2024 | 2:12 PM

ನಮ್ಮ ದೇಶದಲ್ಲಿ ಜುಗಾಡ್ ಐಡಿಗಳಿಗೇನೂ ಕೊರತೆಯಿಲ್ಲ.  ಮನೆಯಲ್ಲಿ ಯಾವುದಾದರೂ ವಸ್ತುಗಳು ಕೆಟ್ಟು  ಹೋದರೆ ಆ ವಸ್ತುವನ್ನು ಉಪಯೋಗಿಸಿಕೊಂಡು,  ಇನ್ನೇನಾದರೂ ತಯಾರಿಸಲು ಬಳಸುತ್ತಾರೆ. ಹೌದು ಹಲವರು  ಕೆಲವೊಂದು ದಿನನಿತ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿಭಿನ್ನ ಶೈಲಿಯ ದೇಸಿ ಐಡಿಯಾಗಳನ್ನು ಉಪಯೋಗಿಸಿಕೊಂಡು ಕಡಿಮೆ ಖರ್ಚಿನಲ್ಲಿ ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇಂತಹ ಜುಗಾಡ್ ಐಡಿಯಾಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಹಿಂದೆ ವ್ಯಕ್ತಿಯೊಬ್ಬ ಕೆಟ್ಟು ಹೋದ ನೀರಿನ ಟ್ಯಾಂಕ್ ನಿಂದ ಬೈಕ್ ಶೆಡ್ ತಯಾರಿಸಿದಂತಹ, ನೀರಿನ ಟ್ಯಾಂಕ್ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಶೌಚಾಲಯವನ್ನು ತಯಾರಿಸಿದಂತಹ ವಿಡಿಯೋಗಳು ವೈರಲ್ ಆಗಿದ್ದವು. ಈಗ ಅದೇ ರೀತಿಯ ವಿಭಿನ್ನ ಶೈಲಿಯ ದೇಸಿ ಉಪಾಯದ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಕೆಟ್ಟು ಹೋದ ವಾಷಿಂಗ್ ಮೆಷಿನ್ ಡೋರ್ ಬಳಸಿಕೊಂಡು ಮನೆಯ ಕೋಳಿ ಗೂಡಿಗೆ ಭದ್ರವಾದ ಬಾಗಿಲನ್ನು ತಯಾರಿಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ನಮ್ಮ ದೇಶದಲ್ಲಿ ಈ ರೀತಿಯ ಐಡಿಯಾಗಳಿಗೆ ಯಾವುದೇ ಕೊರತೆಯಿಲ್ಲ ಬಿಡಿ ಅಂತ ನೆಟ್ಟಿಗರು ಹೇಳಿದ್ದಾರೆ.

@troll_lankasura2024 ಎಂಬ ಇನ್ಸ್ಟಾಗ್ರಾಮ್ ಪೇಜ್​​ನಲ್ಲಿ ಈ ತಮಾಷೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಏನೇನ್ ತಲೆ ಓಡಿಸ್ತಿರೋ ಯಪ್ಪಾ ಅಂತ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಹಳೆಯ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಡೋರ್ ಬಳಸಿಕೊಂಡು ಯಾವ ರೀತಿ ಕೋಳಿ ಗೂಡಿಗೆ ಬಾಗಿಲು ತಯಾರಿಸಿದ್ದಾರೆ ಎಂಬುದನ್ನು ನೋಡಬಹುದು.

ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಾಷಿಂಗ್ ಮೆಷಿನ್ ಡೋರ್ ಓಪನ್ ಮಾಡಲು ಬರುತ್ತಾನೆ, ಎಲ್ರೂ ಬಹುಶಃ ಈತ ಬಟ್ಟೆ ಒಗೆಯುವ ಸಲುವಾಗಿ ವಾಷಿಂಗ್ ಮೆಷಿನ್ ಡೋರ್ ಓಪನ್ ಮಾಡುತ್ತಿರಬಹುದು ಎಂದು ಭಾವಿಸುತ್ತಾರೆ. ಆದ್ರೆ ಟ್ವಿಸ್ಟ್ ಏನಪ್ಪಾ ಅಂದ್ರೆ ಡೋರ್ ಓಪನ್ ಮಾಡುತ್ತಿದ್ದಂತೆ, ಕೋಳಿಗಳೆಲ್ಲವೂ ಹೊರಗೆ ಬರುವುದನ್ನು ಕಾಣಬಹುದು. ಈ ಹೊಸ ಬಗೆಯ ಕೋಳಿ ಗೂಡಿನ ಭದ್ರವಾದ ಬಾಗಿಲನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಇದ್ಯಾವುದಪ್ಪ ಮೇಕೆಗಳ ಮರ; ವಿಡಿಯೋ ವೈರಲ್​​

ಜನವರಿ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು  ಹಾಗೂ 80 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ.  ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ.  ಒಬ್ಬ ಬಳಕೆದಾರರು ʼಇಂತಹ ಪ್ರತಿಭೆಗಳನ್ನು ನಮ್ಮ ದೇಶ ಬಿಟ್ಟು ಬೇರೆಲ್ಲೂ ನೋಡಲು ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವರ ಈ ಕ್ರಿಯೇಟಿವ್ ಐಡಿಯಾಗೆ ಮೆಚ್ಚಲೇಬೇಕುʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೋಳಿಗಳಿಗೆ ವಿ.ಐ.ಪಿ ಸೆಕ್ಯುರಿಟಿʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:06 pm, Mon, 8 January 24