Viral: ನಡು ಬೀದಿಯಲ್ಲಿಯೇ ಡ್ರೆಸ್‌ ಚೇಂಚ್‌ ಮಾಡಿ ಸ್ಟೈಲಿಶ್‌ ಆಗಿ ರೆಡಿಯಾದ ಯುವತಿ; ವಿಡಿಯೋ ವೈರಲ್‌

ಸೋಷಿಯಲ್‌ ಮೀಡಿಯಾದಲ್ಲಿ ಲೈಕ್ಸ್‌, ವೀವ್ಸ್‌ ಗಿಟ್ಟಿಸಿಕೊಳ್ಳಲು ಈ ಜನ ಏನ್‌ ಬೇಕಾದ್ರೂ ಮಾಡ್ತಾರೆ. ಈ ಮಾತಿಗೆ ನಿದರ್ಶನದಂತಿರುವ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ರೀಲ್ಸ್‌ಗಾಗಿ ಯುವತಿಯೊಬ್ಬಳು ನಡು ಬೀದಿಯಲ್ಲಿಯೇ ಬಟ್ಟೆ ಬದಲಾಯಿಸಿಕೊಂಡು, ಸ್ಟೈಲಿಶ್‌ ಆಗಿ ರೆಡಿ ಆಗಿದ್ದಾಳೆ. ಈಕೆಯ ಅವತಾರವನ್ನು ಕಂಡು ಅಲ್ಲಿದ್ದ ಜನ ಫುಲ್‌ ಶಾಕ್‌ ಆಗಿದ್ದು, ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 21, 2024 | 3:46 PM

ಈಗಂತೂ ಚಿತ್ರ ವಿಚಿತ್ರ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವುದು ಒಂದು ಟ್ರೆಂಡ್‌ ಆಗಿಬಿಟ್ಟಿದೆ. ನೋಡುಗರ ಕೆಂಗಣ್ಣಿಗೆ ಗುರಿಯಾದ್ರೂ ಇಂತಹ ವಿಡಿಯೋಗಳೇ ಲಕ್ಷಗಟ್ಟಲೆ, ಮಿಲಿಯನ್‌ಗಟ್ಟಲೆ ಲೈಕ್ಸ್‌ ವೀವ್ಸ್‌ಗಳನ್ನು ಪಡೆದುಕೊಳ್ಳುತ್ತವೆ. ಹೌದು ಹುಚ್ಚರಂತೆ ವರ್ತಿಸುವ, ಅರೆಬರೆ ಬಟ್ಟೆ ತೊಟ್ಟು ಡಾನ್ಸ್‌ ಮಾಡುವ ರೀಲ್ಸ್‌ಗಳು ಪ್ರತಿನಿತ್ಯ ಕಾಣಸಿಗುತ್ತವೆ. ಇದೀಗ ಇಂತಹ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ಯುವತಿಯೊಬ್ಬಳು ನಡು ಬೀದಿಯಲ್ಲಿಯೇ ಬಟ್ಟೆ ಬದಲಾಯಿಸಿಕೊಂಡು, ಸ್ಟೈಲಿಶ್‌ ಆಗಿ ರೆಡಿ ಆಗುವಂತಹ ವಿಡಿಯೋವನ್ನು ಮಾಡಿದ್ದಾಳೆ. ಈಕೆಯ ಈ ಅವತಾರವನ್ನು ಕಂಡು ಅಲ್ಲಿದ್ದ ಜನ ಫುಲ್‌ ಶಾಕ್‌ ಆಗಿದ್ದು, ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಕುರಿತ ವಿಡಿಯೋವನ್ನು ary_bloom ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಚೇಂಚ್‌ ದಿ ಡ್ರೆಸ್‌” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಸಾರ್ವಜನಿಕರ ಮುಂದೆ ನಡು ಬೀದಿಯಲ್ಲಿಯೇ ಯುವತಿಯೊಬ್ಬಳು ಬಟ್ಟೆ ಬದಲಾಯಿಸುವಂತಹ ದೃಶ್ಯವನ್ನು ಕಾಣಬಹುದು. ನೀಲಿ ಬಣ್ಣದ ಮಾರ್ಡನ್‌ ಬಟ್ಟೆಯ ಮೇಲೆ ನೈಟ್‌ ಡ್ರೆಸ್‌ ಅನ್ನು ಹಾಗೂ ಬೆನ್ನ ಹಿಂದೆ ಒಂದು ತೊಟ್ಟು ಬಂದ ಯುವತಿ ನಡು ಬೀದಿಯಲ್ಲಿ ಜನರ ಎದುರಲ್ಲೇ ನಿಂತು ಬಟ್ಟೆ ಬದಲಾಯಿಸಿ ಸ್ಟೈಲಿಶ್‌ ಆಗಿ ರೆಡಿಯಾಗಿ ಅಲ್ಲಿಂದ ಹೋಗಿದ್ದಾಳೆ. ಈಕೆಯ ಈ ಬೋಲ್ಡ್‌ ಅವತಾರಕ್ಕೆ ಜನ ಬೆರಗಾಗಿದ್ದಾರೆ.

ಇದನ್ನೂ ಓದಿ: ಆಕಾಶದಿಂದ ಜಾರಿ ಭೂಮಿಗೆ ಬಿದ್ದ ಮೋಡ; ಹಿಂಗೆಲ್ಲಾ ನಡೆಯೋಕೆ ಸಾಧ್ಯಾನಾ?

ಕೆಲವು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 16.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈಕೆಯ ಆತ್ಮವಿಶ್ವಾಸಕ್ಕೆ ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಟ್ಟೆ ಬದಲಾಯಿಸಲು ಮನೆಯಲ್ಲಿ ಜಾಗ ಇರಲಿಲ್ಲವೇʼ ಎಂಬ ಪ್ರಶ್ನೆ ಕೇಳಿದ್ದಾರೆ. ಇನ್ನೂ ಅನೇಕರು ಈಗೀಗ ಜನ ಯಾಕೆ ಇಷ್ಟು ಕೀಳು ಮಟ್ಟಕ್ಕೆ ಇಳಿತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ