ಜನರಿಂದ ತುಂಬಿರುವ ಮಾರ್ಕೆಟ್​ನಲ್ಲಿ 5ನೇ ಮಹಡಿಯಿಂದ ನಾಯಿ ಬಿದ್ದು 3 ವರ್ಷದ ಬಾಲಕಿ ಸಾವು

|

Updated on: Aug 08, 2024 | 9:10 AM

ಜನರಿಂದ ತುಂಬಿರುವ ಮಾರುಕಟ್ಟೆಯಲ್ಲಿ ನಾಯಿಯೊಂದು ಐದನೇ ಮಹಡಿಯಿಂದ ಮೂರು ವರ್ಷದ ಬಾಲಕಿ ಮೇಲೆ ಬಿದ್ದ ಪರಿಣಾಮ ಬಾಲಕಿ ಮೃತಪಟ್ಟಿದ್ದು, ನಾಯಿಗೂ ಗಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪುಟ್ಟ ಬಾಲಕಿ ತಾಯಿಯ ಕೈ ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಳು, ಮೊದಲು ತಾಯಿಯ ಪಕ್ಕದಲ್ಲಿದ್ದ ಆಕೆ ಬಳಿಕ ತಾಯಿಯ ಹಿಂದಿದ್ದಳು, ಆ ಸಮಯದಲ್ಲಿ ಮೇಲಿನಂದ ನಾಯಿ ಬಾಲಕಿ ಮೇಲೆ ಬಿದ್ದಿದೆ. ಕೂಡಲೇ ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಸಾವು ಹೀಗೂ ಬರಬಹುದು, ಅದು ಜನರಿಂದ ತುಂಬಿ ತುಳುಕುತ್ತಿರುವ ಮಾರುಕಟ್ಟೆ. ಥಾಣೆಯಲ್ಲಿರುವ ಮುಂಬ್ರಾದ ಅಮೃತ್​ನಗರದಲ್ಲಿ ತಾಯಿಯ ಕೈ ಹಿಡಿದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಐದನೇ ಮಹಡಿಯಿಂದ ನಾಯಿ ಬಿದ್ದ ಪರಿಣಾಮ ತಕ್ಷಣವೇ ಬಾಲಕಿ ಮೃತಪಟ್ಟಿದ್ದಾಳೆ.

ಅಮೃತ್ ನಗರದಲ್ಲಿನ ಚಿರಾಗ್ ಮೇಸನ್ ಕಟ್ಟಡದಿಂದ ನಾಯಿ ಬಿದ್ದು ಬಾಲಕಿಯ ಸಾವಿಗೆ ಕಾರಣವಾಯಿತು. ಅಮೃತ್ ನಗರದ ಚಿರಾಗ್ ಮ್ಯಾನ್ಷನ್ ನ ಟೆರೇಸ್ ಮೇಲಿದ್ದ ನಾಯಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಮೇಲೆ ಏಕಾಏಕಿ ಬಿದ್ದಿದೆ. ನಾಯಿಯ ಮಾಲೀಕ ಝೈದ್ ಸೈಯದ್ ಎಂಬುವವರಾಗಿದ್ದಾರೆ.

ತಾಯಿ ಬಾಲಕಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ವಿಡಿಯೋ ಕ್ಲಿಪ್ ತೋರಿಸಿದೆ. ಈ ಘಟನೆಯಲ್ಲಿ ನಾಯಿ (ಗೋಲ್ಡನ್ ರಿಟ್ರೈವರ್) ಸಹ ಗಾಯಗೊಂಡಿದೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ನಾಯಿ ಬಾಲಕಿ ಮೇಲೆ ಬಿದ್ದಾಗ, ಆಕೆ ಸಂಪೂರ್ಣವಾಗಿ ಪ್ರಜ್ಞಾಹೀನಳಾದಳು. ನಾಯಿ ಕೂಡ ಕೆಲಕಾಲ ಪ್ರಜ್ಞೆ ತಪ್ಪಿತ್ತಾದರೂ ನಂತರ ಎದ್ದು ನಿಂತಿತು. ಗಾಯಗೊಂಡ ನಾಯಿಯನ್ನೂ ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಾಯಿ ಆಕಸ್ಮಿಕವಾಗಿ ಬಿದ್ದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಎಸೆಯಲಾಗಿದೆಯೇ ಎಂದು ತಿಳಿಯಲು ಮುಂಬ್ರಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ