444 ಕೋಟಿ ಅಕ್ರಮ ಆರೋಪ: ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

Edited By:

Updated on: Sep 29, 2026 | 2:03 PM

ಡಿಪಿಎಆರ್ ಅಡಿಯಲ್ಲಿನ ಕೆಎಸ್‌ಡಿಸಿ ಹಾಗೂ ಕೆಸ್ವಾನ್‌ ಯೋಜನೆಯಲ್ಲಿ 444 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಐಎಎಸ್ ಅಧಿಕಾರಿ ಭೂಬಾಲನ್ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಹಲವು ಪ್ರಮುಖ ಆರೋಪಗಳನ್ನು ಅವರು ಮಾಡಿದ್ದು, ಅದೆಲ್ಲದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್​​ 29: DPAR ಅಡಿಯಲ್ಲಿನ KSDC ಹಾಗೂ KSWANನಲ್ಲಿ 444 ಕೋಟಿ ಹಗರಣದ ಆಗಿದೆ ಅಂತಾ ಆರೋಪಿಸಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ಕೆ ದೂರು ಸಲ್ಲಿಕೆಯಾಗಿದೆ. ಯತೀಂದ್ರ ಜೊತೆಗೆ IAS ಅಧಿಕಾರಿ ಭೂಬಾಲನ್ ವಿರುದ್ಧವೂ ದಾಖಲೆ ಸಮೇತ ಬಿಜೆಪಿ ಮುಖಂಡ ಎನ್​​​.ಆರ್​​.ರಮೇಶ್​ ದೂರು ನೀಡಿದ್ದಾರೆ. 2025ರಲ್ಲಿ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿದೆ. ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್ ನೀಡಿದ್ದಾರೆಂದು ದೂರಲಾಗಿದೆ. ಟೆಂಡರ್ ಪ್ರಕ್ರಿಯೆ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಅಂದಿನ ಸಿಎಂ ತಮ್ಮ ಬಳಿಯೇ DPAR ಇಲಾಖೆ ಉಳಿಸಿಕೊಂಡಿದ್ರು. ಹೀಗಾಗಿ ಯತೀಂದ್ರ ಸಿದ್ದರಾಮಯ್ಯ ಅಣತಿ ಮೇರೆಗೆ ಟೆಂಡರ್ ನೀಡಿದ ಆರೋಪ ಕೇಳಿಬಂದಿದೆ. ಅರ್ಹತೆಯೇ ಇಲ್ಲದ ಹೈದರಾಬಾದ್ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿದೆ. ಇ-ಆಡಳಿತ ವಿಭಾಗದ ಸಿಇಒ ಅಧಿಕಾರಿ ಭೂಬಾಲನ್ ಸೇರಿದಂತೆ ಮೂವರು ಅಧಿಕಾರಿಗಳ‌ ವಿರುದ್ಧವೂ ದೂರು ನೀಡಲಾಗಿದೆ. ಸಚಿವ ಯತೀಂದ್ರ, ಅಧಿಕಾರಿಗಳ‌ ವಿರುದ್ಧ ತನಿಖೆಗೆ ರಮೇಶ್ ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
Shivaraj