ವಿಧಾನಸೌಧದ ಗಾರ್ಡನ್ನಲ್ಲಿ ಬಿಯರ್ ಬಾಟಲ್ ಪತ್ತೆ
ನಿನ್ನೆ ರಾಜ್ಯ ಸರ್ಕಾರ ಸರ್ಕಾರಿ ಕಚೇರಿಗಳ ಸುತ್ತಮುತ್ತ ಮದ್ಯ ಮತ್ತು ಮಾದಕ ವಸ್ತುಗಳ ನಿಷೇಧದ ಆದೇಶ ಹೊರಡಿಸಿತ್ತು. ಆದರೆ, ಇಂದು ವಿಧಾನಸೌಧದ ಪಶ್ಚಿಮ ಭಾಗದ ಉದ್ಯಾನದಲ್ಲಿ ಬಿಯರ್ ಬಾಟಲ್ ಪತ್ತೆಯಾಗಿದೆ. ಪೊಲೀಸರ ಕಣ್ಣು ತಪ್ಪಿಸಿ ಬಿಯರ್ ತಂದು ಸೇವಿಸಿ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು, ನವೆಂಬರ್ 08: ನಿನ್ನೆಯಷ್ಟೇ ಸರ್ಕಾರಿ ಕಚೇರಿ ಆವರಣದ ಸುತ್ತಮುತ್ತ ಯಾವುದೇ ಮದ್ಯ ಮತ್ತು ಮಾದಕ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನೆಲ್ಲೇ ಇಂದು ವಿಧಾನಸೌಧದ ಪಶ್ಚಿಮ ಭಾಗದ ಗಾರ್ಡನ್ನಲ್ಲಿ ಬಿಯರ್ ಬಾಟಲ್ (beer bottle) ಬಿದ್ದಿರುವುದು ಕಂಡುಬಂದಿದೆ. ಪೊಲೀಸರ ಕಣ್ತಪ್ಪಿಸಿ ಬಿಯರ್ ಬಾಟಲ್ ತಂದಿರುವ ಸಾಧ್ಯತೆ ಇದ್ದು, ಗಾರ್ಡನ್ನಲ್ಲಿ ಬಿಯರ್ ಸೇವಿಸಿ ಬಾಟಲ್ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 08, 2024 04:59 PM