ಬೆಳಗಾವಿ: ಗ್ರಾಮ ಪಂಚಾಯಿತಿ ಸದಸ್ಯನೊಬ್ಬನ ನಾಯಿಯ ಹುಟ್ಟುಹಬ್ಬಕ್ಕೆ 4,000 ಜನ ಆಮಂತ್ರಿತರು!
ಊರಲ್ಲಿ ಅವರ ಪ್ರತಿಸ್ಪರ್ಧಿ ಒಬ್ಬರಿದ್ದಾರಂತೆ. ಅವರು ಸಹ ನಾಯಿಯ ಹುಟ್ಟುಹಬ್ಬ ಆಚರಿಸುತ್ತಾರೆ. ಅವರು ಎಷ್ಟೇ ಖರ್ಚು ಮಾಡಿದರೂ ಅದರ ಎರಡು ಪಟ್ಟು ತಾವು ಮಾಡುವುದಾಗಿ ಶಿವಪ್ಪ ಹೇಳುತ್ತಾರೆ.
ಬೆಳಗಾವಿ ಜಿಲ್ಲೆಯ ತುಕ್ಕಾನಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ಮರ್ದಿ (Shivappa Mardi) ಅವರು ತಮ್ಮ ನಾಯಿಯ ಹುಟ್ಟು ಹಬ್ಬವನ್ನು (Dog’s birthday) ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಖುದ್ದು ಅವರೇ ಹುಟ್ಟುಹಬ್ಬವನ್ನು ಎಷ್ಟು ಗ್ರ್ಯಾಂಡ್ ಆಗಿ ಆಚರಿಸಲಾಗುತ್ತಿದೆ ಅಂತ ಹೇಳುತ್ತಾರೆ. 250 ಕೆಜಿ ಚಿಕನ್ ತರಿಸಲಾಗಿದೆ, 50 ಕೆಜಿ ಮಾಂಸದ ಕಾಜೂ ಕರಿ ಮಾಡಿಸಲಾಗಿದೆ ಮತ್ತು ಆಹ್ವಾನಿತರು (invitees) ಸುಮಾರು 4,000 ದಷ್ಟಿದ್ದಾರೆ ಎಂದು ಅವರು ಹೇಳುತ್ತಾರೆ. ಊರಲ್ಲಿ ಅವರ ಪ್ರತಿಸ್ಪರ್ಧಿ ಒಬ್ಬರಿದ್ದಾರಂತೆ. ಅವರು ಸಹ ನಾಯಿಯ ಹುಟ್ಟುಹಬ್ಬ ಆಚರಿಸುತ್ತಾರೆ. ಅವರು ಎಷ್ಟೇ ಖರ್ಚು ಮಾಡಿದರೂ ಅದರ ಎರಡು ಪಟ್ಟು ತಾವು ಮಾಡುವುದಾಗಿ ಶಿವಪ್ಪ ಹೇಳುತ್ತಾರೆ.
ಇದನ್ನೂ ಓದಿ: IND vs LEI: ಜೋ ರೂಟ್ ಮ್ಯಾಜಿಕ್ ಕಾಪಿ ಮಾಡುವಲ್ಲಿ ಕೊಹ್ಲಿ ವಿಫಲ; ವಿಡಿಯೋ ಸಖತ್ ವೈರಲ್
Published on: Jun 24, 2022 11:57 AM