ಮತ್ತೊಮ್ಮೆ ಕರೋಡಪತಿಯಾದ ಮಲೆ ಮಹದೇಶ್ವರ, ಈ ಬಾರಿ ಕೇವಲ 20 ದಿನಗಳಲ್ಲಿ!

|

Updated on: Mar 13, 2025 | 11:09 AM

ಮಾದಪ್ಪ ಸನ್ನಿಧಿಗೆ ವಿದೇಶಿಯರೂ ಬರುತ್ತಾರೆ ಮತ್ತು ಹುಂಡಿಯಲ್ಲಿ ಕಾಣಿಕೆ ಹಾಕುತ್ತಾರೆ ಅನ್ನೋದಿಕ್ಕೆ ಪತ್ತೆಯಾಗಿರುವ 21 ವಿದೇಶೀ ಕರೆನ್ಸಿ ನೋಟುಗಳು ಸಾಕ್ಷಿ. ಮಾದಪ್ಪನ ಬೆಟ್ಟಕ್ಕೆ ಹೋಗಲು ರಸ್ತೆ ಸರಿ ಇಲ್ಲ, ಜೀಪು ಮತ್ತು ಬೇರೆ ವಾಹನಗಳಲ್ಲಿ ಭಕ್ತರನ್ನು ದೇವಸ್ಥಾನಕ್ಕೆ ಕರೆದೊಯ್ಯುವವರು ಸುಲಿಗೆ ಮಾಡುತ್ತಾರೆ ಎಂಬ ಆರೋಪಗಳ ನಡುವೆಯೂ ಮಹದೇಶ್ವರನ ಬೆಟ್ಟಕ್ಕೆ ಹೋಗುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ.

ಚಾಮರಾಜನಗರ, ಮಾರ್ಚ್ 13: ಮಲೆ ಮಹದೇಶ್ವರ (Male Mahadeshwara) ಮತ್ತೊಮ್ಮೆ ಕರೋಡಪತಿ, ಅದೂ ದಾಖಲೆಯ ಸಮಯದಲ್ಲಿ! ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿರುವ ದೇವರ ಹುಂಡಿಯಲ್ಲಿ ಕಳೆದ 20 ದಿನಗಳಲ್ಲಿ ಸಂಗ್ರಹವಾಗಿರುವ ಭಕ್ತರ ಕಾಣಿಕೆಗಳನ್ನು ಎಣಿಸುವ ಕಾರ್ಯ ಮುಗಿದಿದ್ದು ದೇವಸ್ಥಾನದ ಆಡಳಿತ ಮಂಡಳಿ ಹೇಳುವ ಪ್ರಕಾರ ₹2.85 ಕೋಟಿ ಸಂಗ್ರಹವಾಗಿದೆ. ಹಣದ ಜೊತೆಗೆ ಭಕ್ತರು 27 ಗ್ರಾಂ ಚಿನ್ನ ಮತ್ತು 1.8 ಕೆಜಿ ತೂಕದ ಬೆಳ್ಳಿ ಆಭರಣಗಳನ್ನೂ ಹುಂಡಿಗೆ ಹಾಕಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮತ್ತೊಮ್ಮೆ ಕೋಟ್ಯಧಿಪತಿಯಾದ ಮಲೆ ಮಹದೇಶ್ವರ: ಮಾದಪ್ಪನ ಹುಂಡಿಯಲ್ಲಿ ಸಿಕ್ತು 1.94 ಕೋಟಿ ರೂ.