ಕೆಟ್ಟು ಹೋಗಿರುವ ರಸ್ತೆಯನ್ನು ದುರಸ್ತಿ ಮಾಡಿಸುವಂತೆ ರಾಯಚೂರು ನಗರಸಭೆಯಲ್ಲಿ ಮಹಿಳಾ ಸದಸ್ಯೆ ಪಟ್ಟು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 30, 2022 | 4:30 PM

ರಂಜಾನ್ ತಿಂಗಳು ಜಾರಿಯಲ್ಲಿರುವುದರಿಂದ ಮಸೀದಿಗೆ ನಮಾಜ್ ಮಾಡಲು ಹೋಗುವವರಿಗೆ ಕಷ್ಟವಾಗುತ್ತಿದೆ. ಆ ಪ್ರದೇಶದಲ್ಲಿ ಶಾಲೆಗಳೂ ಇರುವುದರಿಂದ ಒಮ್ಮೆ ಶಾಲೆಗಳು ಪುನರಾರಂಭಗೊಂಡವು ಅಂತಾದ್ರೆ ಶಾಲಾ ಮಕ್ಕಳು ಓಡಾಡಲು ಪ್ರಯಾಸ ಪಡಬೇಕಾಗುತ್ತದೆ, ಎಂದು ರತ್ನ ಹೇಳುತ್ತಾರೆ.

ರಾಯಚೂರು ನಗರಸಭೆಯಲ್ಲಿ (Raichur city corporation) ಒಬ್ಬ ಮಹಿಳಾ ಸದಸ್ಯೆ ಒಂದು ಸಮಸ್ಯೆಯನ್ನು ನಗರ ಸಭೆಯ ಕಮೀಷನರ್ ಅವರ ಮುಂದಿಟ್ಟಿದ್ದಾರೆ. ಶನಿವಾರದಂದು ನಗರಸಭೆಯ ಆಡಿಟೋರಿಯಂನಲ್ಲಿ ನಡೆದ ಸಭೆಯಲ್ಲಿ 11ನೇ ವಾರ್ಡ್ ಸದಸ್ಯೆ ರತ್ನ ಪ್ರಶಾಂತಿ (Ratna Prashanti) ಅವರು ಕಮೀಷನರ್ ಮುನಿಸ್ವಾಮಿ (Muniswamy) ಅವರ ಮುಂದೆ ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ. ರತ್ನ ತಮ್ಮ ಸ್ಥಳದಿಂದ ಎದ್ದುಬಂದು ಕಮೀಷನರ್, ನಗರ ಸಭೆ ಅಧ್ಯಕ್ಷ ಮತ್ತು ಮತ್ತು ಇತರ ಅಧಿಕಾರಿಗಳ ಮುಂದೆ ನಿಂತುಕೊಂಡು ರಾಯಚೂರು ನಗರದ ಮೋತಿ ಮಸೀದಿಯಿಂದ ಜಾಕಿರ್ ಹುಸೇನ್ ಸರ್ಕಲ್ ವರೆಗಿನ ರಸ್ತೆಯ ಕಾಮಗಾರಿ ನಡೆಯದಿರುವುದು ಆ ಭಾಗದ ನಿವಾಸಿಗಳಿಗೆ ಓಡಾಟಕ್ಕೆ ಬಹಳ ತೊಂದರೆಯಾಗುತ್ತಿದೆ ಅಂತ ಹೇಳುತ್ತಿದ್ದಾರೆ.

ರಂಜಾನ್ ತಿಂಗಳು ಜಾರಿಯಲ್ಲಿರುವುದರಿಂದ ಮಸೀದಿಗೆ ನಮಾಜ್ ಮಾಡಲು ಹೋಗುವವರಿಗೆ ಕಷ್ಟವಾಗುತ್ತಿದೆ. ಆ ಪ್ರದೇಶದಲ್ಲಿ ಶಾಲೆಗಳೂ ಇರುವುದರಿಂದ ಒಮ್ಮೆ ಶಾಲೆಗಳು ಪುನರಾರಂಭಗೊಂಡವು ಅಂತಾದ್ರೆ ಶಾಲಾ ಮಕ್ಕಳು ಓಡಾಡಲು ಪ್ರಯಾಸ ಪಡಬೇಕಾಗುತ್ತದೆ, ಎಂದು ರತ್ನ ಹೇಳಿದಾಗ ಬೇರೆ ಕೆಲ ಸದಸ್ಯರು ಸಹ ಅವರ ಮಾತನ್ನು ಅನುಮೋದಿಸುತ್ತಾರೆ.

ರತ್ನ ಅವರು ಹೇಳುವ ಪ್ರಕಾರ ರಸ್ತೆ ಅತ್ಯಂತ ದುರವಸ್ಥೆಯಿಂದ ಕೂಡಿದೆ ಮತ್ತು ಎರಡು ವರ್ಷಗಳ ಹಿಂದೆಯೇ ಕಾಮಗಾರಿಗೆ ಟೆಂಡರ್ ಆಗಿದ್ದರೂ ಕೆಲಸ ಆರಂಭವಾಗಿಲ್ಲ. ಖುದ್ದು ಕಮೀಷನ್ ಅವರೇ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲು ಆಹ್ವಾನಿಸುತ್ತಿದ್ದಾರೆ. ರಸ್ತೆ ದುರಸ್ತಿ ಬಗ್ಗೆ ಕಮೀಶನರ್ ಅವರಿಂದ ಭರವಸೆ ಸಿಗದವರೆಗೆ ತಾನು ಇಲ್ಲಿಂದು ಕದಲುವುದಿಲ್ಲ ಅಂತ ಅವರು ಅಲ್ಲೇ ಕೂತುಬಿಡುತ್ತಾರೆ.

ಅವರು ವಿಷಯ ಪ್ರಸ್ತಾಪಿಸಿದ ಬಳಿಕ ಸಗರಸಭೆಯ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ಶುರುವಾಗುತ್ತದೆ. ರತ್ನ ಅವರು ತಾವು ಕೂತ ಸ್ಥಳದಿಂದ ಇದನ್ನೆಲ್ಲ ವೀಕ್ಷಿಸುತ್ತಾರೆ.

ಇದನ್ನೂ ಓದಿ:   Anand Mahindra: ‘ನಾನು ಆ ವ್ಯಕ್ತಿಯನ್ನು ಭೇಟಿಯಾಗಬೇಕು’; ಅಷ್ಟಕ್ಕೂ ಆನಂದ್ ಮಹೀಂದ್ರಾ ಫಿದಾ ಆದ ವಿಡಿಯೋದಲ್ಲೇನಿದೆ?